ಸರ್ಕಾರದ ಯೋಜನೆಗಳ ಬಗ್ಗೆ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯುವಂತೆ ಬಿಂಬಿಸಲಾಗಿದೆ ಎಂದು ವಿಜಯ್ ಅಭಿನಯದ ಚಿತ್ರಕ್ಕೆ ಸರ್ಕಾರದಿಂದ ಆಕ್ಷೇಪ ವ್ಯಕ್ತವಾಗಿದೆ.
ಚೆನ್ನೈ: ವಿಜಯ್ ಅಭಿನಯದ ಸರ್ಕಾರ್ ಚಿತ್ರದಲ್ಲಿ, ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಯೋಜನೆಗಳ ಕುರಿತು ಕೆಟ್ಟದಾಗಿ ಬಿಂಬಿಸಲಾಗಿದೆ.
ಜೊತೆಗೆ ಕೆಲ ದೃಶ್ಯಗಳು ಸಮಾಜದಲ್ಲಿ ಹಿಂಸೆ ಪ್ರಚೋದಿಸುವ ಉದ್ದೇಶ ಹೊಂದಿದಂತಿದೆ. ಇದು ಹಿಂಸೆಗೆ ಪ್ರಚೋದಿಸುವ ಉಗ್ರವಾದಿಗಳಿಗಿಂತ ಕಡಿಮೆ ಏನಲ್ಲ ಎಂದು ತಮಿಳುನಾಡಿನ ಎಐಎಡಿಎಂಕೆ ಸರ್ಕಾರ ದೂರಿದೆ.
ಅಲ್ಲದೆ ಆಕ್ಷೇಪಾರ್ಹ ದೃಶ್ಯ ತೆಗೆಯದಿದ್ದರೆ ಕಾನೂನು ಹೋರಾಟದ ಬೆದರಿಕೆ ಹಾಕಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕಲು ನಿರ್ಮಾಪಕರು ನಿರ್ಧರಿಸಿದ್ದಾರೆ.
