Asianet Suvarna News Asianet Suvarna News

ಟ್ರಾಫಿಕ್ ಪೊಲೀಸರು ಈ ನಿಯಮಗಳ ಪ್ರಕಾರ ವಾಹನಗಳನ್ನ ಟೋಯಿಂಗ್ ಮಾಡ್ಬೇಕು!

* ಬೆಂಗಳೂರಿನಲ್ಲಿ ವಾಹನಗಗಳ ಟೋಯಿಂಗ್ ಕಿರಿಕಿರಿ
* ಪೊಲೀಸರು ಬೇಕಾಬಿಟ್ಟಿ ಟೋಯಿಂಗ್ ಮಾಡುವಂತಿಲ್ಲ
* ಟೋಯಿಂಗ್ ಮಾಡುವಾಗ ಅನುಸರಿಸಬೇಕಾದ ಅಧಿಕೃತ ನಿಯಮಗಳು

vehicles Towing official Rules announced by Bengaluru Traffic police rbj
Author
Bengaluru, First Published Sep 25, 2021, 10:29 PM IST

ಬೆಂಗಳೂರು, (ಸೆ.25): ಇತ್ತೀಚೆಗೆ ಬೆಂಗಳೂರಿನಲ್ಲಿ ಸಾರ್ವಜನಿಕರು ಹಾಗೂ ಟೋಯಿಂಗ್ (Towing ) ಸಿಬ್ಬಂದಿ ನಡುವೆ ಜಗಳಗಳು ನಡೆದಿವೆ. ಅಲ್ಲದೇ ಹೊಡೆದಾಟಗಳು ಆಗಿರುವ ಉದಾಹರಣೆಗಳು ಸಹ ಇವೆ.

ಹಾಗೇ  ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಹೆಚ್ಚುತ್ತಿರುವ ಬೆನ್ನಲ್ಲೇ ಸಂಚಾರ ವಿಭಾಗದ ಪೊಲೀಸರು, ವಾಹನಗಳನ್ನ ಟೋಯಿಂಗ್ ಮಾಡುವಾಗ ಅನುಸರಿಸಬೇಕಾದ ನಿಯಮಗಳನ್ನು ಸ್ಪಷ್ಟಪಡಿಸಿದ್ದಾರೆ. ಟೋಯಿಂಗ್ ಮಾಡುವಾಗ ಅನುಸರಿಸಬೇಕಾದ ನಿಯಮಗಳನ್ನ ಈ ಕೆಳಗಿನಂತಿವೆ ನೋಡಿ..

ವಾಹನ ಸವಾರರೇ ಕುಡಿದು ರಸ್ತೆಗಿಳಿಯುವ ಮುನ್ನ ಎಚ್ಚರ: ಡ್ರಂಕ್‌ & ಡ್ರೈವ್‌ ತಪಾಸಣೆ ಶುರು

ಪೊಲೀಸ್ರು ಅನುಸರಿಸಬೇಕಾದ ಟೋಯಿಂಗ್ ನಿಯಮಗಳು
* ಸಂಚಾರ ಪೊಲೀಸ್ ಇಲಾಖೆಗೆ ಲೈವ್ ಮಾಹಿತಿ ನೀಡಬೇಕು
* ಓರ್ವ ಎಎಸ್‌ಐ ಸಮವಸ್ತ್ರದಲ್ಲಿ ಟೋಯಿಂಗ್ ವಾಹನದಲ್ಲಿರಬೇಕು.
* ಟೋಯಿಂಗ್ ಆಪರೇಷನ್​ಗೂ ಮುನ್ನ ಮೈಕ್ ಮೂಲಕ ಅನೌನ್ಸ್ ಮಾಡಬೇಕು.
* ವಾಹನದ ನಾಲ್ಕೂ ಭಾಗದಿಂದ ಫೋಟೋ ಕ್ಲಿಕ್ಕಿಸಬೇಕು.
* ಟೋಯಿಂಗ್ ಮಾಡುವ ಮುನ್ನವೇ ಮಾಲೀಕ ಬಂದ್ರೆ ನೋ ಪಾರ್ಕಿಂಗಿಗೆ ದಂಡ ವಿಧಿಸಬೇಕು.
* ಟೋಯಿಂಗ್ ವಾಹನಕ್ಕೆ ಹಾಕಿದ ಬಳಿಕ ಬಂದ್ರೆ ಟೋಯಿಂಗ್ ಚಾರ್ಜ್ ಪಾವತಿಸಬೇಕು.
*ಟೋಯಿಂಗ್ ಮಾಡಿದ ವಾಹನಗಳನ್ನ ನಿಲ್ಲಿಸುವ ಜಾಗದಲ್ಲಿ ಸಂಚಾರಿ ಸಿಬ್ಬಂದಿ ಇರಬೇಕು.

ಮೇಲಿನ ಈ ಎಲ್ಲಾ ನಿಯಮಗಳನ್ನ ಪಾಲಿಸದ ಟೋಯಿಂಗ್ ಸಿಬ್ಬಂದಿಗಳನ್ನ ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸ್ಪಷ್ಟಪಡಿಸಿದ್ದಾರೆ. ಇದುವರೆಗೂ ನಿಯಮಗಳನ್ನ ಪಾಲಿಸದ ಐವರು ಟೋಯಿಂಗ್ ಸಿಬ್ಬಂದಿಗಳು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದಿದ್ದಾರೆ.

Follow Us:
Download App:
  • android
  • ios