Asianet Suvarna News Asianet Suvarna News

ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ, ಕರ್ನಾಟಕದ ಹಲವು ನಿಲ್ದಾಣದಲ್ಲಿ 1 ನಿಮಿಷ ವಿವಿಧ ರೈಲುಗಳ ನಿಲುಗಡೆ

ಭಾರತೀಯ ರೈಲ್ವೆ ಕರ್ನಾಟಕದ ಜನರೊಂದಿಗೆ ಸಂತಸದ ಸುದ್ದಿ ಹಂಚಿಕೊಂಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ಹಲವು ರೈಲು ನಿಲ್ದಾಣಗಳಲ್ಲಿ ಆರು ತಿಂಗಳುಗಳ ಕಾಲ ಪ್ರಾಯೋಗಿಕವಾಗಿ ವಿವಿಧ ರೈಲುಗಳ ನಿಲುಗಡೆಗೆ ಒಪ್ಪಿಗೆ ಸೂಚಿಸಿದೆ. ಪ್ರಯಾಣಿಕರು ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

various trains stop for 1 minute at many railway stations in Karnataka gow
Author
First Published Mar 5, 2023, 4:58 PM IST

ಬೆಂಗಳೂರು (ಮಾ.5): ಭಾರತೀಯ ರೈಲ್ವೆ ಕರ್ನಾಟಕದ ಜನರೊಂದಿಗೆ ಸಂತಸದ ಸುದ್ದಿ ಹಂಚಿಕೊಂಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯದ ಹಲವು ರೈಲು ನಿಲ್ದಾಣಗಳಲ್ಲಿ ಆರು ತಿಂಗಳುಗಳ ಕಾಲ ಪ್ರಾಯೋಗಿಕವಾಗಿ ವಿವಿಧ ರೈಲುಗಳ ನಿಲುಗಡೆಗೆ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಹಾದು ಹೋಗುವ ಹಲವು ರೈಲುಗಳು ವಿವಿಧ ನಿಲ್ದಾಣದಲ್ಲಿ ಒಂದು ನಿಮಿಷ ನಿಂತು ಮುಂದಕ್ಕೆ ಸಾಗಲಿದೆ. ಮಾತ್ರವಲ್ಲ ರಾಜ್ಯ ಯಾವ ನಿಲ್ದಾಣದಲ್ಲಿ ಯಾವೆಲ್ಲ ರೈಲುಗಳು 1 ನಿಮಿಷ ನಿಂತು ಮುಂದೆ ಸಾಗಲಿದೆ ಎಂಬ ಬಗ್ಗೆ ನೈರುತ್ಯ ರೈಲ್ವೆಯು ಪಟ್ಟಿ ಬಿಡುಗಡೆ ಮಾಡಿದೆ. ಮಂಗಳೂರು ಮತ್ತು  ಮುಂಬೈ ನಡುವೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲನ್ನು ಬಾರ್ಕೂರಿನಲ್ಲಿ ನಿಲ್ಲಿಸಬೇಕೆಂಬುದು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಇದಕ್ಕೆ ಈಗ ರೈಲ್ವೆ ಇಲಾಖೆ ಅಸ್ತು ಎಂದಿದೆ. ಇದರಿಂದಾಗಿ ಉಡುಪಿ, ಚಿಕ್ಕಮಗಳೂರು ಭಾಗದ ಜನರು ಸಂತಸಗೊಂಡಿದ್ದಾರೆ. ಇನ್ನು ರೈಲುಗಳು 1 ನಿಮಿಷ ನಿಂತು ತನ್ನ ಪ್ರಯಾಣ ಮುಂದುವರೆಸುತ್ತಿರುವುದಕ್ಕೆ ಜನರು ಕೂಡ ಖುಷಿಗೊಂಡಿದ್ದಾರೆ.

ಯಾವೆಲ್ಲ ರೈಲುಗಳು 1 ನಿಮಿಷ ಯಾವ ನಿಲ್ದಾಣದಲ್ಲಿ ನಿಲ್ಲಲಿದೆ ಎಂಬ ಬಗ್ಗೆ ನೈರುತ್ಯ ರೈಲ್ವೆ ಬಿಡುಗಡೆ ಮಾಡಿರುವ ಪಟ್ಟಿ ಇಲ್ಲಿದೆ:
ರೈಲು ಸಂಖ್ಯೆ 17317 ಎಸ್. ಎಸ್. ಎಸ್. ಹುಬ್ಬಳ್ಳಿ-ದಾದರ್
ರೈಲು ಸಂಖ್ಯೆ 17318 ದಾದರ್- ಎಸ್‌. ಎಸ್. ಎಸ್. ಹುಬ್ಬಳ್ಳಿ,
ರೈಲು ಸಂಖ್ಯೆ 22497 ಶ್ರೀ ಗಂಗಾನಗರ-ತಿರುಚ್ಚಿರಾಪ್ಪಲ್ಲಿ
ರೈಲು ಸಂಖ್ಯೆ 22498 ತಿರುಚ್ಚಿರಾಪ್ಪಲ್ಲಿ ಶ್ರೀ ಗಂಗಾನಗರ್   
ಈ ನಾಲ್ಕು ರೈಲುಗಳು ಚಿಕ್ಕೋಡಿ ರೋಡ್ ನಿಲ್ದಾಣದಲ್ಲಿ ಒಂದು ನಿಮಿಷ ನಿಲ್ಲಲಿದೆ.

ರೈಲು ಸಂಖ್ಯೆ 17415 ತಿರುಪತಿ-ಸಿ. ಎಸ್. ಎಮ್. ಟಿ ಕೊಲ್ಲಾಪುರ ಮತ್ತು  ರೈಲು ಸಂಖ್ಯೆ 17416 ಸಿ. ಎಸ್‌. ಎಮ್‌. ಟಿ. ಕೊಲ್ಲಾಪುರ-ತಿರುಪತಿ ರೈಲು ಉಗಾರ ಖುರ್ದ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ.

ರೈಲು ಸಂಖ್ಯೆ 16217 ಮೈಸೂರು- ಸಾಯಿ ನಗರ್ ಶಿರಡಿ ರೈಲು ಮತ್ತು ರೈಲು ಸಂಖ್ಯೆ 16218 ಸಾಯಿ ನಗರ್ ಶಿರಡಿ-ಮೈಸೂರು ರೈಲು ಇಂಡಿ ರೋಡ್‌ನಲ್ಲಿ 1 ನಿಮಿಷ ನಿಲ್ಲಲಿದೆ.

ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಮತ್ತು ರೈಲು ಸಂಖ್ಯೆ 17308 ಬಾಗಲಕೋಟೆ-ಮೈಸೂರು ರೈಲು ಇಬ್ರಾಹಿಂಪುರ ಹಾಲ್ಟ್‌ನಲ್ಲಿ 1 ನಿಮಿಷ ನಿಲುಗಡೆಯಾಗಲಿದೆ.

ರೈಲು ಸಂಖ್ಯೆ 14805 ಯಶವಂತಪುರ-ಬಾರ್ಮೇರ್ ಮತ್ತು ರೈಲು ಸಂಖ್ಯೆ 14806 ಬಾರ್ಮೇರ್-ಯಶವಂತಪುರ ರೈಲು ಬೀರೂರಿನಲ್ಲಿ ನಿಲುಗಡೆಯಾಗಲಿದೆ.

ರೈಲು ಸಂಖ್ಯೆ 17309 ಯಶವಂತಪುರ-ವಾಸ್ಕೋ-ಡ-ಗಾಮ ಮತ್ತು ರೈಲು ಸಂಖ್ಯೆ 17310 ವಾಸ್ಕೋ-ಡ-ಗಾಮ-ಯಶವಂತಪುರ ರೈಲು ಕಡೂರಿನಲ್ಲಿ 1 ನಿಮಿಷ ನಿಲ್ಲಲಿದೆ.

ರೈಲು ಸಂಖ್ಯೆ 16220 ತಿರುಪತಿ-ಚಾಮರಾಜನಗರ ರೈಲು ಕಾಮಸಮುದ್ರಂನಲ್ಲಿ ನಿಲ್ಲಲಿದೆ.

ರೈಲು ಸಂಖ್ಯೆ 17209 ಎಸ್. ಎಂ. ವಿ. ಟಿ ಬೆಂಗಳೂರು-ಕಾಕಿನಾಡ ಟೌನ್ ಮತ್ತು ರೈಲು ಸಂಖ್ಯೆ 17210 ಕಾಕಿನಾಡ ಟೌನ್- ಎಸ್. ಎಂ. ವಿ. ಟಿ. ಬೆಂಗಳೂರು ರೈಲು ಟೇಕಲ್ ರೈಲು ನಿಲ್ದಾಣದಲ್ಲಿ ನಿಲ್ಲಲಿದೆ.

ರೈಲು ಸಂಖ್ಯೆ 22678 ಕೊಚುವೆಲಿ-ಯಶವಂತಪುರ ರೈಲು ಬಂಗಾರಪೇಟೆಯಲ್ಲಿ 1 ನಿಮಿಷ ನಿಲ್ಲಲು ಅವಕಾಶ ನೀಡಲಾಗಿದೆ.

ರೈಲು ಸಂಖ್ಯೆ 17303 ಎಸ್. ಎಸ್. ಎಸ್. ಹುಬ್ಬಳ್ಳಿ-ಕಾರಟಗಿ ಮತ್ತು ರೈಲು ಸಂಖ್ಯೆ 17304 ಕಾರಟಗಿ-ಎಸ್‌. ಎಸ್. ಎಸ್. ಹುಬ್ಬಳ್ಳಿ ರೈಲು ಬನ್ನಿಕೊಪ್ಪದಲ್ಲಿ 1 ನಿಮಿಷ ನಿಲ್ಲಲಿದೆ.

ಕಡೂರಿನ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಸಂಭ್ರಮಾಚರಣೆ: ಕಡೂರಿನಲ್ಲಿ ಶನಿವಾರದಿಂದ ನಿಲುಗಡೆಯಾಗುತ್ತಿರುವ ಯಶವಂತಪುರ- ವಾಸ್ಕೋ ರೈಲುಗಾಡಿಯು ಕಡೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದಾಗ ಪ್ರಯಾಣಿಕರು ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ಶನಿವಾರ ಸಂಜೆ 5-10 ಕ್ಕೆ ರೈಲು ಕಡೂರು ರೈಲು ನಿಲ್ದಾಣಕ್ಕೆ ಆಗಮಿಸಿದಾಗ ಪ್ರಯಾಣಿಕರು ನರೇಂದ್ರ ಮೋದಿ, ಸಚಿವೆ ಶೋಭಾ ಕರಂದ್ಲಾಜೆ ಮತ್ತು ಕಡೂರು ಶಾಸಕ ಬೆಳ್ಳಿಪ್ರಕಾಶ್‌ ಅವರಿಗೆ ಜಯಕಾರ ಕೂಗಿ ಸಂತಸ ವ್ಯಕ್ತಪಡಿಸಿದರು.

ಹೋಳಿ: ಬೆಂಗಳೂರು- ಕಣ್ಣೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರ

ಈ ಸಂದರ್ಭದಲ್ಲಿ ಶಾಸಕರ ಕಾರ್ಯದರ್ಶಿ ನವೀನ್‌ ವಿವರ ನೀಡಿ, ಈ ರೈಲು ನಿಲುಗಡೆಯಿಂದ ಚಿಕ್ಕಮಗಳೂರು ಮುಂತಾದ ಕಡೆ ಹೋಗುವ ಪ್ರಯಾಣಿಕರಿಗೆ, ನೌಕರರಿಗೆ, ಪ್ರವಾಸಿಗಳಿಗೆ ಬಹಳ ಅನುಕೂಲವಾಗಲಿದೆ. ಪ್ರಯಾಣಿಕರು ಈ ಬಗ್ಗೆ ಶಾಸಕರಾದ ಬೆಳ್ಳಿ ಪ್ರಕಾಶ್‌ ರವರಲ್ಲಿ ಮನವಿ ಸಲ್ಲಿಸಿದಾಗ ಈ ಕುರಿತು ಶಾಸಕರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯವರಿಗೆ ಕಡೂರಿನಲ್ಲಿ ಈ ರೈಲು ನಿಲುಗಡೆ ವಿಚಾರವಾಗಿ ಮನವಿ ಸಲ್ಲಿಸಿದರು. ಅವರು ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್‌ ಅವರೊಂದಿಗೆ ಪತ್ರವ್ಯವಹಾರ ನಡೆಸಿ ಮನವರಿಕೆ ಮಾಡಿ ಕೊಟ್ಟಿದ್ದರ ಫಲವಾಗಿ ಕಡೂರಿನಲ್ಲಿ ನಿಲುಗಡೆ ಅವಕಾಶ ದೊರೆತಿದೆ. ಇದರಿಂದ ಸಹಸ್ರಾರು ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.

ಭಾರತೀಯ ರೈಲ್ವೇಯ ತತ್ಕಾಲ್ ಟಿಕೆಟ್ ಬುಕಿಂಗ್ ಸೇವೆ ಸ್ಥಗಿತ, ಪ್ರಯಾಣಿಕರ ಆಕ್ರೋಶ!

ಇದೇ ಸಂದರ್ಭದಲ್ಲಿ ರೈಲು ಚಾಲಕರಾದ ಮೋಹಿತ್‌ ಮತ್ತು ವಿ.ಕೆ.ಸಿಂಗ್‌ ಅವರಿಗೆ ಹೂಗುಚ್ಚ ನೀಡಿ ಅಭಿನಂದಿಸಲಾಯಿತು. ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ, ಲೋಹಿತಾರಾಧ್ಯ, ಶಿಕ್ಷಕರಾದ ಅರೇಹಳ್ಳಿ ಮಲ್ಲಿಕಾರ್ಜುನ, ಪ್ರೊ.ತವರಾಜು, ರೈಲ್ವೆ ಮಜಾ ಟಾಕೀಸ್‌ ಬಳಗದ ಜಿ.ಎಂ.ರಾಜಶೇಖರಯ್ಯ, ರಾಧಾಕೃಷ್ಣ ಮತ್ತಿತರರು ಇದ್ದರು.

Follow Us:
Download App:
  • android
  • ios