ರೈತರಿಗೆ ಗುಡ್‌ನ್ಯೂಸ್: ಕೊನೆಗೂ ರಾಜ್ಯಕ್ಕೆ ಬರ್ತಿದೆ ನ್ಯಾನೋ ಯೂರಿಯಾ

* ಗುಜರಾತ್ ನ ಕಲೋಲ್ ಸ್ಥಾವರದಿಂದ ನ್ಯಾನೋ ಯೂರಿಯಾ ರಾಜ್ಯಕ್ಕೆ ಸಾಗಣೆ ಚಾಲನೆ 
* ರಾಜ್ಯಕ್ಕೆ ಬರ್ತಿದೆ ದ್ರವ ರೂಪದ ನ್ಯಾನೋ ಯೂರಿಯಾ 
* ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡರಿಂದ ಚಾಲನೆ

Union Minister DV Sadananda gowda flags off to nyano uriya fertilizer rbj

ಬೆಂಗಳೂರು, (ಜೂನ್.12): ರಾಜ್ಯದಲ್ಲೂ ನ್ಯಾನೋ ಯೂರಿಯಾ ಘಟಕ ಸ್ಥಾಪನೆಯಾಗುವ ಕಾಲ ಕೂಡಿಬಂದಿದ್ದು, ಇದರ ಭಾಗವಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಅವರು ದ್ರವ ರೂಪದ ನ್ಯಾನೋ ಯೂರಿಯಾಗೆ ಚಾಲನೆ ನೀಡಿದರು.

ಇಂದು (ಶನಿವಾರ) ತಮ್ಮ ನಿವಾಸದಿಂದ ವರ್ಚುವಲ್ ಮೂಲಕ ಗುಜರಾತ್ ನ ಕಲೋಲ್ ಸ್ಥಾವರದಿಂದ ನ್ಯಾನೋ ಯೂರಿಯಾ ರಾಜ್ಯಕ್ಕೆ ಸಾಗಣೆಕೆಗೆ ಚಾಲನೆ ನೀಡಿದರು.

ರೈತರಿಗೆ ಗುಡ್‌ನ್ಯೂಸ್: ಭತ್ತ ಸೇರಿ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ!

ಗುಜರಾತ್ ನ ಕಲೋಲ್ ಸ್ಥಾವರದಿಂದ ನ್ಯಾನೋ ಯೂರಿಯಾ ರಾಜ್ಯ ಬರಲಿದ್ದು, ಇಫ್ಕೋ ಉತ್ಪಾದಿತ ನ್ಯಾನೋ ಯೂರಿಯಾ ದಾಸ್ತಾನಿನ ಮೊದಲ ಕಂತು ಸಾಗಣೆಯಾಗಲಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನ್ಯಾನೋ ಯೂರಿಯಾ ಪರಿಸರ ಸ್ನೇಹಿ. ರಾಸಾಯನಿಕ ರಸಗೊಬ್ಬರಗಳಿಂದ ಪರಿಸರಕ್ಕೆ ಅಪಾಯ ಇದೆ ಎಂದು ತಿಳಿಸಿದರು.

ಇವತ್ತು ಇಫ್ಕೋ ಸಂಸ್ಥೆಯಿಂದ  ನ್ಯಾನೋ ಯೂರಿಯಾ ಬಿಡುಗಡೆ ಆಗಿದೆ. ಗುಜರಾತ್ ನ ಕಲೋಲ್ ಸ್ಥಾವರ ದಿಂದ 16,600 ಬಾಟಲ್ ನ್ಯಾನೋ ಯೂರಿಯಾ ತರಲಾಗ್ತಿದೆ. ರಾಜ್ಯದಲ್ಲೂ ನ್ಯಾನೋ ಯೂರಿಯಾ ಘಟಕ ಸ್ಥಾಪನೆಯಾಗುತ್ತಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios