ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ನಾಳೆ ಆಗಮಿಸಲಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟಲಿದೆ. ಸಂಚಾರಿ ಪೊಲೀಸರು ಹೆಚ್ಚಾಗಿ ಪರ್ಯಾಯ ಮಾರ್ಗವನ್ನು ಬಳಸುವಂತೆ ಸೂಚನೆ ನೀಡಿದ್ದಾರೆ.
ಬೆಂಗಳೂರು (ಫೆ.22): ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾಳೆ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಕೆಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ನಾಳೆ ಬೆಂಗಳೂರು ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟೋದಂತೂ ಖಚಿತವಾಗಿದೆ. ಫೆ. 23ರ ಮಧ್ಯಾಹ್ನದಿಂದ 24 ಮಧ್ಯಾಹ್ನದವರಗೆ ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸರಿಂದ ಬೆಂಗಳೂರು ವಾಹನ ಸವಾರರಿಗೆ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ಪರ್ಯಾಯ ಮಾರ್ಗ ಬಳಸಬೇಕು ಅನ್ನೋದನ್ನ ನೋಡೋದಾದರೆ. ನಾಳೆ ವಾಹನ ಸವಾರರಿಗೆ ಈ ರಸ್ತೆಗಳಲ್ಲಿ ಎರಡು ಬದಿಯಲ್ಲಿ ಎಲ್ಲೂ ಪಾರ್ಕಿಂಗ್ ವ್ಯವಸ್ಥೆ ಇರೋದಿಲ್ಲ. ಜೊತೆಗೆ ಈ ಮಾರ್ಗಗಳನ್ನು ಬಳಸದೇ ಇದ್ದರೆ ಸೂಕ್ತ ಎಂದು ಎಚ್ಚರಿಸಿದ್ದಾರೆ.
*ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್, ಕಾವೇರಿ ಥಿಯೇಟರ್ ಜಂಕ್ಷನ್,
*ರೇಸ್ ಕೋರ್ಸ್, ಟೌನ್ ಹಾಲ್, ತಾಜ್ ವೆಸ್ಟ್ ಎಂಡ್, ಲಾಲ್ ಬಾಗ್
*ಮಿನರ್ವ್ ಸರ್ಕಲ್, ಜೆಸಿ ರಸ್ತೆ, ಎನ್ ಆರ್ ಸರ್ಕಲ್, ಮೈಸೂರು ಬ್ಯಾಂಕ್
*ಪ್ಯಾಲೇಸ್ ರಸ್ತೆ, ಸಿಐಡಿ ಜಂಕ್ಷನ್, ಬಸವೇಶ್ವರ ಜಂಕ್ಷನ್, ಅಲಿ ಅಸ್ಕರ್ ರಸ್ತೆ, ಇನ್ ಪ್ಯಾಂಟ್ರಿ ರಸ್ತೆ
*ಕಾಫಿ ಬೋರ್ಡ್ ಜಂಕ್ಷನ್, ಮಣಿಪಾಲ್ ಜಂಕ್ಷನ್, ಎಂ.ಜಿ ರಸ್ತೆ, ಟ್ರಿನಿಟಿ ಸರ್ಕಲ್
*ಇಂದಿರಾನಗರ 100 ಮೀ ರಸ್ತೆ, ಕಮಾಂಡ್ ಹಾಸ್ಪಿಟಲ್, ದೊಮ್ಮಲೂರು,
*ಹೆಚ್ ಎಎಲ್ ಏರ್‌ಪೋರ್ಟ್ ರಸ್ತೆ ಯಲ್ಲಿ ವಾಹನ ನಿಲುಗಡೆ ನಿರ್ಬಂಧ
