Asianet Suvarna News Asianet Suvarna News

ಸಿಲಿಕಾನ್ ಸಿಟಿ ಜನರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ! ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿಗೆ ಗ್ರೀನ್ ಸಿಗ್ನಲ್!

ನಮ್ಮ ಮೆಟ್ರೋ ಮೂರನೇ ಹಂತದ ರೈಲು ಯೋಜನೆಯ 2 ಎಲಿವೇಟೆಡ್ ಕಾರಿಡಾರ್‌ಗಳಿಗೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ 

Union cabinet approves metro projects in Bengaluru today rav
Author
First Published Aug 16, 2024, 10:36 PM IST | Last Updated Aug 16, 2024, 10:51 PM IST

ಬೆಂಗಳೂರು (ಆ.16): ನಮ್ಮ ಮೆಟ್ರೋ ಮೂರನೇ ಹಂತದ ರೈಲು ಯೋಜನೆಯ 2 ಎಲಿವೇಟೆಡ್ ಕಾರಿಡಾರ್‌ಗಳಿಗೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ 

ಪ್ರಧಾನಿ ಮೋದಿ ನೇತೃತ್ವದಲ್ಲಿಂದು ನಡೆದ ಸಭೆಯಲ್ಲಿ ಬೆಂಗಳೂರು ನಮ್ಮ ಮೆಟ್ರೋ ಮೂರನೇ ಹಂತದ ಕಾರಿಡಾರ್‌ಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.  ಯೋಜನೆಯ ಹಂತು-3 ಹಾಗೂ  ಒಟ್ಟು 44.65 ಕಿಮೀ ಉದ್ದದ ಎರಡು ಕಾರಿಡಾರ್ ಗಳ ನಿರ್ಮಾಣವಾಗಲಿದೆ ಈ ಯೋಜನೆಗೆ ಅಂದಾಜು 15,611 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಲಾಗಿದೆ.

ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಚಾರ; ಒಂದೇ ದಿನ 9.17 ಲಕ್ಷ ಜನ ಪ್ರಯಾಣ!

ಈ ಹಿಂದೆ ಮೂರನೇ ಹಂತದ ಕಾಮಗಾರಿ ಆರಂಭಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ಬಿಎಂಆರ್‌ಸಿಎಲ್. ಇದೀಗ ಕ್ಯಾಬಿನೆಟ್ ಚರ್ಚೆ ಬಳಿಕ ಗ್ರೀನ್ ಸಿಗ್ನಲ್ ಸಿಕ್ಕಿದ್ದು. ಒಂದು ವೇಳೆ ಈ ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರಲ್ಲಿ 220.20ಕಿಮೀ ಆಕ್ಟಿವ್ ಮೆಟ್ರೋ ಮಾರ್ಗ ಇರಲಿದೆ. ಈ ಕಾಮಗಾರಿ 2029ರಿಂದ ಆರಂಭವಾಗಲಿದೆ.  ಕಾರಿಡಾರ್-1: ಜೆಪಿನಗರ ನಾಲ್ಕನೆ ಹಂತದಿಂದ ಔಟರ್‌ ರಿಂಗ್ ರೋಡ್ ವರೆಗಿನ ಕಾರಿಡಾರ್ ಆಗಿದ್ದು, 21 ಸ್ಟೇಷನ್ ಒಳಗೊಂಡ 32.15 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಕಾರಿಡಾರ್- 2: ಹೊಸಹಳ್ಳಿ ಟು ಕಡಬಗೆರೆವರೆಗೆ 9 ಸ್ಟೇಷನ್ ಒಳಗೊಂಡ 12.50 ಕಿ.ಮೀ ಮಾರ್ಗಕ್ಕೆ ಒಪ್ಪಿಗೆ.

Latest Videos
Follow Us:
Download App:
  • android
  • ios