ರಾಮಮಂದಿರಕ್ಕಾಗಿ ಕರ್ನಾಟಕದ ರಾಜ್ಯಪಾಲರರನ್ನ ಭೇಟಿಯಾದ ಪೇಜಾವರ ಶ್ರೀ

 ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಕರ್ನಾಟಕದ ರಾಜ್ಯಪಾಲ ಅವರನ್ನ ಭೇಟಿ ಮಾಡಿ, ಸಮಸ್ತ ಜನರ ಬೆಂಬಲ ಆಪೇಕ್ಷಿಸಿ ಪತ್ರ ಸಲ್ಲಿಸಿದರು

Udupi vishwa prasanna theertha swamiji Meets governor vajubhai vala For ayodhya ram mandir rbj

ಉಡುಪಿ, (ಡಿ.16):  ದಕ್ಷಿಣ ಭಾರತ ಪ್ರವಾಸದಲ್ಲಿದ್ದ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟಿನ ಸದಸ್ಯ, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಕರ್ನಾಟಕದ ರಾಜ್ಯಪಾಲ ವಾಜೂಭಾಯಿ ರುಡಾಭಾಯಿ ವಾಲಾ ಅವರನ್ನು ರಾಜಭವನದಲ್ಲಿ ಭೇಟಿಯಾಗಿ, ಅಯೋಧ್ಯಾ ರಾಮಮಂದಿರ ಕಾರ್ಯಕ್ಕೆ ನಾಡಿನ ಸಮಸ್ತ ಜನರ ಬೆಂಬಲ ಆಪೇಕ್ಷಿಸಿ ಪತ್ರ ಸಲ್ಲಿಸಿದರು.

ಶ್ರೀಗಳವರನ್ನು ಶ್ರದ್ಧಾಭಕ್ತಿಯಿಂದ ಬರಮಾಡಿಕೊಂಡು ಗೌರವ ಅರ್ಪಿಸಿದ ರಾಜ್ಯಪಾಲರು, ರಾಮಮಂದಿರದ ನಿರ್ಮಾಣ ಕಾರ್ಯದ ಬಗ್ಗೆ ವಿಚಾರಿಸಿದರು. ತಾವು ಸಕ್ರಿಯ ರಾಜಕಾರಣದಲ್ಲಿದ್ದಾಗ ಅಯೋಧ್ಯಾ ಆಂದೋಲನದ ವಿವಿಧ ಹಂತಗಳಲ್ಲಿ ಪಾಲ್ಗೊಂಡದ್ದನ್ನು ಸ್ಮರಿಸಿ, ರಾಮ ಮಂದಿರ ನಿರ್ಮಾಣದ ಕಾರ್ಯದಲ್ಲಿ ಪೂರ್ಣ ಬೆಂಬಲಿಸುವುದಾಗಿ ತಿಳಿಸಿದರು. 

ಅಯೋಧ್ಯೆ ರಾಮಮಂದಿರ ವಿನ್ಯಾಸಕ್ಕೆ 450 ಸಲಹೆ!

ಅಲ್ಲದೇ 1953 ರಲ್ಲಿ ಗುರೂಜಿ ಗೋಳ್ವಲ್ಕರ್ ರು ಗೋಹತ್ಯಾ ನಿಷೇಧಕ್ಕೆ ಕರೆ ಕೊಟ್ಟಾಗ ತಾನಿನ್ನೂ ಎಳೆಯ ಯುವಕನಾಗಿದ್ದೆ. ಆಗ ತನ್ನೊಂದಿಗೆ ಇನ್ನೋರ್ವ ಸ್ನೇಹಿತನನ್ನು ಕರೆದುಕೊಂಡು ಸೈಕಲ್ ನಲ್ಲಿ ಗುಜರಾತಿನ‌ಲ್ಲಿ ಮನೆ ಮನೆಗೆ ತೆರಳಿ ಸಹಿ ಸಂಗ್ರಹ ಮಾಡಿದ್ದು, ಸಾಕ್ಷರತೆಯ ಕೊರತೆ ಇದ್ದ ಆ ಕಾಲದಲ್ಲಿ ಜನರು ಹೆಬ್ಬೆಟ್ಟೊತ್ತಿ ಬೆಂಬಲಿಸಿದ್ದನ್ನು ರಾಜ್ಯಪಾಲರು ಸ್ಮರಿಸಿದರು.

ನಂತರ ಪೇಜಾವರ ಶ್ರೀಗಳು ರಾಜ್ಯಪಾಲರಿಗೆ ಶಾಲು ಹೊದೆಸಿ ಸ್ಮರಣಿಕೆ ಫಲಪುಷ್ಪ ಸಹಿತ ಆಶೀರ್ವದಿಸಿದರು.‌ ವಿ.ಹಿಂ.ಪ. ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ಶ್ರೀಗಳ ಆಪ್ತಕಾರ್ಯದರ್ಶಿಗಳಾದ ವಿಷ್ಣು ಆಚಾರ್ಯ, ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios