UDAN: ಹಾಸನದ ಜೊತೆ ರಾಯಚೂರು, ಕೋಲಾರಕ್ಕೂ ಉಡಾನ್‌ ವಿಮಾನ

ಪ್ರವಾಸಿ ತಾಣಗಳು ಸಮೀಪವಿರುವ ವಿಭಾಗದಲ್ಲಿ ರಾಯಚೂರು ಮತ್ತು ಧಾರ್ಮಿಕ ಕೇಂದ್ರಗಳು ಸಮೀಪಿದ ವಿಭಾಗದಲ್ಲಿ ಕೋಲಾರ ಮತ್ತು ಹಾಸನ ನಗರಗಳನ್ನು ಪರಿಗಣಿಸಲಾಗಿದೆ ಎಂದು ಮಾಹಿತಿ ನೀಡಿದ ಸಚಿವಾಲಯ 

UDAN Flight to Raichur, Kolar and Hassan grg

ನವದೆಹಲಿ(ಸೆ.09):  ದೇಶೀಯವಾಗಿ ವಿಮಾನಯಾನ ಸಂಪರ್ಕ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಜಾರಿ ಮಾಡಿರುವ ‘ಉಡಾನ್‌’ ಯೋಜನೆಯ ಮುಂದಿನ ಹಂತದಲ್ಲಿ ಕರ್ನಾಟಕದ ಕೋಲಾರ, ಹಾಸನ ಮತ್ತು ರಾಯಚೂರು ನಗರಗಳನ್ನು ಪರಿಗಣಿಸಲಾಗಿದೆ. ಉಡಾನ್‌ ಯೋಜನೆ ವ್ಯಾಪ್ತಿಗೆ ಬರಲು ಅರ್ಹವಾಗಿರುವ ದೇಶದ 54 ನಗರಗಳ ಪಟ್ಟಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಬಿಡುಗಡೆ ಮಾಡಿದ್ದು, ಅದರಲ್ಲಿ ಕರ್ನಾಟಕದ ಮೂರು ನಗರಗಳು ಸ್ಥಾನ ಪಡೆದುಕೊಂಡಿವೆ.

ಮುಂದಿನ ಹಂತದ ಉಡಾನ್‌ ಯೋಜನೆಗೆ ದೇಶದ 54 ಸ್ಥಳಗಳನ್ನು ಗುರುತಿಸಲಾಗಿದೆ. ಮುಖ್ಯವಾಗಿ ಪ್ರವಾಸಿ ತಾಣಗಳು, ವನ್ಯಜೀವಿ ಧಾಮ ಮತ್ತು ಧಾರ್ಮಿಕ ಕೇಂದ್ರಗಳ ಸಮೀಪದ ನಗರಗಳನ್ನು ಈ ಹಂತದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಿಗಣಿಸಲಾಗಿದೆ. ಈ ಪೈಕಿ ಪ್ರವಾಸಿ ತಾಣಗಳು ಸಮೀಪವಿರುವ ವಿಭಾಗದಲ್ಲಿ ರಾಯಚೂರು ಮತ್ತು ಧಾರ್ಮಿಕ ಕೇಂದ್ರಗಳು ಸಮೀಪಿದ ವಿಭಾಗದಲ್ಲಿ ಕೋಲಾರ ಮತ್ತು ಹಾಸನ ನಗರಗಳನ್ನು ಪರಿಗಣಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

Koppala; ಗಂಗಾವತಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕೂಗು

ವಿಮಾನಯಾನ ಇನ್ನೂ ಅಭಿವೃದ್ಧಿಯಾಗದ ಮಾರ್ಗಗಳಲ್ಲಿ ಹೊಸ ಸಂಪರ್ಕ ಕಲ್ಪಿಸುವ ಮತ್ತು ಪ್ರಾದೇಶಿಕವಾಗಿ ವಿಮಾನ ಸಂಪರ್ಕ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಉಡಾನ್‌ ಯೋಜನೆ ಘೋಷಿಸಿದೆ. ಈ ಮಾರ್ಗಗಳಲ್ಲಿ ವಿಮಾನದ ಟಿಕೆಟ್‌ ದರಕ್ಕೆ ಸರ್ಕಾರ ಗರಿಷ್ಠ ಮಿತಿ ನಿಗದಿ ಮಾಡಿರುತ್ತದೆ.
 

Latest Videos
Follow Us:
Download App:
  • android
  • ios