ಎಣ್ಣೆಗಾಗಿ ಪ್ರೊಟೆಸ್ಟ್​! ಎಣ್ಣೆ ಸಿಗದಿದ್ದರೆ ನಮ್ಮ ಗತಿ ಎನು ಶಿವಾ! ಜಿಲ್ಲಾಧಿಕಾರಿ ಕಚೇರಿ ಎದುರು ವಿಭಿನ್ನ ಪ್ರತೀಭಟನೆ! ಮದ್ಯಕ್ಕಾಗಿ ಆಗ್ರಹಿಸಿ ಕುಡುಕರ ಪ್ರತಿಭಟನೆ! ಯಾವುದೆ ಕಾರಣಕ್ಕು ಬಾರ್ ಬಂದ್ ಮಾಡದಂತೆ ಆಗ್ರಹಿಸಿದ ಮದ್ಯಪ್ರಿಯರು! ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಕುಡುಕರಿಂದ  ಪ್ರತಿಭಟನೆ

ಧಾರವಾಡ(ನ.22): ಪೇಡಾ ನಗರಿ ಧಾರವಾಡದಲ್ಲಿ ಮದ್ಯ ಬೇಕು, ಬೇಡಗಳ ಜಗಳ ಜೋರಾಗಿದೆ. ಒಂದು ಗುಂಪು ಇರೋ ಬಾರ್ ಬಂದ್ ಮಾಡಿ ಅಂತಾ ಹೇಳಿದ್ರೇ, ಮತ್ತೊಂದು ಗುಂಪು ಬಾರ್​​​​ ಬಂದ್ ಮಾಡಿದರೆ ನಾವು ಸುಮ್ಮನೇ ಇರೋದಿಲ್ಲ ಅಂತಾ ಬೀದಿಗಿಳಿದು ಹೋರಾಟ ಮಾಡ್ತಿದ್ದಾರೆ. 

"

ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿರೋ ಬಾರ್​ವೊಂದನ್ನು ಬಂದ್ ಮಾಡುವಂತೆ ಕೆಲವರು ಈ ಹಿಂದೆ ಪ್ರೊಟೆಸ್ಟ್​ ಮಾಡಿದ್ರು. ಸುತ್ತಮುತ್ತಲಿನ ಐದು ಹಳ್ಳಿಗಳಿಗೆ ಇದೊಂದೇ ಬಾರ್. ಇದರಿಂದ ಕುಡುಕರು ಗ್ರಾಮದಲ್ಲಿ ಗಲಾಟೆ ಮಾಡ್ತಾರೆ ಅಂತಾ ಜನರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. 

ಆದ್ರೆ, ಇದೀಗ ಈ ಪ್ರತಿಭಟನೆಗೆ ವಿರುದ್ಧವಾಗಿ ಇಂದು ಕುಡುಕರು ಪ್ರತಿಭಟನೆ ನಡೆಸಿ, ಅಚ್ಚರಿ ಮೂಡಿಸಿದರು. ನಾವು ದುಡಿಯೋಕೆ ದಿನಕ್ಕೆ ನೂರು ರೂಪಾಯಿ ಬೇಕು. ಬಾರ್​​​​ ಬಂದ್​​ ಆದ್ರೆ, ಧಾರವಾಡಕ್ಕೆ ಬಂದು ಕುಡಿದು ಹೋದರೆ ಬಸ್ ಚಾರ್ಜ್ ಗೆ ನಲವತ್ತು ರೂಪಾಯಿ ಬೇಕು. ಹೀಗಾಗಿ ಬಾರ್​​ ಬಂದ್​ ಮಾಡದಂತೆ ಕುಡುಕರು ಪ್ರತಿಭಟನೆ ಮಾಡಿದರು.