ಕಾರವಾರ (ಫೆ.13):  ಹೊಸನಗರ ರಾಮಚಂದ್ರಾಪುರ ಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ಹಾಲಕ್ಕಿ ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸಲು ಉದ್ದೇಶಿಸಿರುವ ಗುರುಕುಲಕ್ಕೆ ‘ತುಳಸಿ’ ಎಂದು ನಾಮಕರಣ ಮಾಡಲಾಗಿದೆ. ತುಳಸೀಕಟ್ಟೆಇಡೀ ಹಾಲಕ್ಕಿ ಸಂಸ್ಕೃತಿಯ ಜೀವಾಳ. ಭವಿಷ್ಯದಲ್ಲಿ ಈ ಗುರುಕುಲವನ್ನು ಹಾಲಕ್ಕಿ ಸಂಸ್ಕೃತಿಯ ಸಮಗ್ರ ಅಧ್ಯಯನ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸಾಂಕೇತಿಕವಾಗಿ ‘ತುಳಸಿ’ ಹೆಸರನ್ನೇ ಗುರುಕುಲಕ್ಕೆ ಇಡಲಾಗಿದೆ. 

ಹಾಲಕ್ಕಿ ಸಮಾಜದಲ್ಲಿ ತುಳಸಿಗೆ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಮಹತ್ವವಿದ್ದು, ಸಮಗ್ರ ಹಿಂದೂ ಸಂಸ್ಕೃತಿಯಲ್ಲೂ ತುಳಸಿಗೆ ವಿಶೇಷ ಸ್ಥಾನವಿದೆ. ಹಾಲಕ್ಕಿ ಸಮಾಜದ ಮಕ್ಕಳಲ್ಲಿ ತವರು ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸುವ ಜತೆಗೆ ಹಿಂದೂ ಸಂಸ್ಕೃತಿಯ ಒಳ್ಳೆಯ ಅಂಶಗಳನ್ನು ಹಾಗೂ ಉತ್ಕೃಷ್ಟಸಮಕಾಲೀನ ಶಿಕ್ಷಣವನ್ನೂ ನೀಡುವ ಉದ್ದೇಶದಿಂದ ಗುರುಕುಲ ಸ್ಥಾಪನೆಯಾಗುತ್ತಿದೆ ಎಂದು ಪೀಠಾಧೀಶ ಶ್ರೀರಾಘವೇಶ್ವರ ಭಾರತೀಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ಪರಿಶಿಷ್ಟ ಜಾತಿ, ಜನಾಂಗದವರಿಗೂ ರಾಮಚಂದ್ರಾಪುರ ಮಠದಲ್ಲಿ ಶಿಕ್ಷಣ ಲಭ್ಯ' .

ಮುಂದಿನ ಶೈಕ್ಷಣಿಕ ವರ್ಷದಿಂದ ಈ ಗುರುಕುಲದಲ್ಲಿ ಆರನೇ ತರಗತಿ ಆರಂಭಿಸಲಾಗುತ್ತಿದ್ದು, ಐದನೇ ತರಗತಿ ಉತ್ತೀರ್ಣರಾದವರು ಹಾಗೂ ಅರ್ಧಕ್ಕೆ ಶಾಲೆಬಿಟ್ಟ, 12 ವರ್ಷ ತುಂಬಿದ ಮಕ್ಕಳು ಪ್ರವೇಶ ಪಡೆಯಬಹುದು ಎಂದು ಪೀಠಾಧೀಶ ಶ್ರೀರಾಘವೇಶ್ವರ ಭಾರತೀಸ್ವಾಮೀಜಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

- ರಾಮ​ಚಂದ್ರಾ​ಪುರ ಮಠ​ದ ವಿಷ್ಣು​ಗುಪ್ತ ​ವಿ​ದ್ಯಾ​ಪೀ​ಠ​ದಲ್ಲಿ ಗುರು​ಕುಲ ಸ್ಥಾಪ​ನೆ

- ಹಾಲಕ್ಕಿ ಮಕ್ಕಳಲ್ಲಿ ತವರು ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸುವ ಉದ್ದೇ​ಶ