Asianet Suvarna News Asianet Suvarna News

ಡೀಸೆಲ್‌ ಏರಿಕೆ: ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಲಾರಿ ಮಾಲೀಕರ ಸಿದ್ಧತೆ

*  ಡೀಸೆಲ್‌ ದರ ಏರಿಕೆಯಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ಲಾರಿ ಮಾಲೀಕರು
*  ಕೇಂದ್ರ ಹಾಗೂ ರಾಜ್ಯ ಸರ್ಕಾರ ಡೀಸೆಲ್‌ ಮೇಲಿನ ತೆರಿಗೆ ಇಳಿಸಬೇಕು
*  ನವೆಂಬರ್‌ ಮೊದಲ ವಾರದಿಂದ ಮುಷ್ಕರ ಆರಂಭ 

Truck Owners Preparing for Indefinite Strike in Karnataka Due to Diesel Price Hike grg
Author
Bengaluru, First Published Oct 18, 2021, 9:19 AM IST

ಬೆಂಗಳೂರು(ಅ.18): ಡೀಸೆಲ್‌(Diesel) ದರ ಏರಿಕೆ ಖಂಡಿಸಿ ಮುಂದಿನ ತಿಂಗಳಿಂದ ರಾಜ್ಯಾದ್ಯಂತ(Karnataka) ಅನಿರ್ದಿಷ್ಟಾವಧಿ ಲಾರಿ ಮುಷ್ಕರ(Truck Strike) ನಡೆಸಲು ಲಾರಿ ಮಾಲೀಕರ ಸಂಘಟನೆಗಳು ಸಿದ್ಧತೆ ನಡೆಸುತ್ತಿವೆ.

ಡೀಸೆಲ್‌ ದರ ಏರಿಕೆಯಿಂದ ಲಾರಿ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. 2020ರ ಅಕ್ಟೋಬರ್‌ನಿಂದ(October) 2021ರ ಅಕ್ಟೋಬರ್‌ ಅವಧಿಯಲ್ಲಿ ಲೀಟರ್‌ ಡೀಸೆಲ್‌ ದರ ಬರೋಬ್ಬರಿ 26 ರು. ಹೆಚ್ಚಳವಾಗಿದೆ. ಪ್ರಸ್ತುತ ರಾಜ್ಯದಲ್ಲಿ ಆರು ಲಕ್ಷ ಲಾರಿಗಳಿದ್ದು, ಈ ಪೈಕಿ ಡೀಸೆಲ್‌ ದರ ಏರಿಕೆಯ ಹೊಡೆತ ತಡೆಯಲಾರದೆ ಶೇ.30ರಷ್ಟು ಲಾರಿಗಳು(Trucks) ಸಂಚಾರ ನಿಲ್ಲಿಸಿವೆ. ಲಾರಿ ಮಾಲೀಕರು, ಚಾಲಕರು ಹಾಗೂ ಅವಲಂಬಿತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಡೀಸೆಲ್‌ ದರ ಇಳಿಕೆ ಮಾಡದಿದ್ದರೆ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಮಾಡುವುದು ಅನಿವಾರ್ಯ ಎಂದು ಫೆಡರೇಶನ್‌ ಆಫ್‌ ಕರ್ನಾಟಕ ಲಾರಿ ಓನ​ರ್ಸ್‌ ಅಂಡ್‌ ಏಜೆಂಟ್ಸ್‌ ಅಸೋಸಿಯೇಷನ್‌(Federation of Karnataka Larry Owners and Agents Association) ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ ಹೇಳಿದರು.

ವಿಮಾನ ಇಂಧ​ನಕ್ಕಿಂತ ಪೆಟ್ರೋಲ್‌ ಬೆಲೆ ದುಬಾ​ರಿ!

ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಸಂಬಂಧ ಚರ್ಚಿಸಲು ರಾಜ್ಯದ ಎಲ್ಲ ಲಾರಿ ಮಾಲೀಕರ ಸಂಘಟನೆಗಳ ಅ.23ರಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ. ಡೀಸೆಲ್‌ ಮೇಲಿನ ತೆರಿಗೆ(Tax) ಇಳಿಕೆಗೆ ರಾಜ್ಯ ಸರ್ಕಾರಕ್ಕೆ(State Government) ಅ.30ರ ವರೆಗೆ ಗಡುವು ನೀಡಲಾಗುವುದು. ಅಷ್ಟರಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಇಲ್ಲವಾದರೆ, ನವೆಂಬರ್‌ ಮೊದಲ ವಾರದಿಂದ ಮುಷ್ಕರ ಆರಂಭಿಸಲಾಗುವುದು. ಮುಷ್ಕರದ ರೂಪುರೇಷೆಗಳ ಬಗ್ಗೆ ಲಾರಿ ಮಾಲೀಕರ ಸಂಘಟನೆಗಳ ಸಭೆಯಲ್ಲಿ ಚರ್ಚಿಸುವುದಾಗಿ ಅವರು ಹೇಳಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ(International Market)ಕಚ್ಚಾ ತೈಲ ದರ ಏರಿಕೆಯಾಗುತ್ತಿರುವುದರಿಂದ ತೈಲ ದರ ಏರಿಕೆಯಾಗುತ್ತಿದೆ ಎಂದು ಹೇಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ ಮಾಡುತ್ತಿವೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಡೀಸೆಲ್‌ ಮೇಲಿನ ತೆರಿಗೆ ಇಳಿಸಬೇಕು. ರಾಜ್ಯ ಸರ್ಕಾರ ತಕ್ಷಣ ತೆರಿಗೆ ಇಳಿಕೆಗೆ ಮುಂದಾಗಬೇಕು. ಇಲ್ಲವಾದರೆ, ರಾಜ್ಯಾದ್ಯಾಂತ ಸರಕು ಸಾಗಣೆ ಲಾರಿಗಳ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದಾಗಿ ಎಚ್ಚರಿಸಿದರು.
 

Follow Us:
Download App:
  • android
  • ios