ಬೆಂಗಳೂರು (ಆ.05):  ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ಕಲ್ಪಿಸುವ ವೇಳೆ ತೃತೀಯ ಲಿಂಗಿಗಳಿಗೆ ಒಬಿಸಿ (ಹಿಂದು​ಳಿ​ದ​) ಕೆಟಗರಿ ಅಡಿಯಲ್ಲಿ ಪರಿಗಣಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ರಾಜ್ಯ ವಿಶೇಷ ಮೀಸಲು ಕಾನ್‌ಸ್ಟೇ​ಬ​ಲ್‌ ಪಡೆ ಹಾಗೂ ಬ್ಯಾಂಡ್ಸ್‌ಮೆನ್‌ ಹುದ್ದೆಗಳ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸದಿರುವುದನ್ನು ಪ್ರಶ್ನಿಸಿ ಸಂಗಮ ಸ್ವಯಂ ಸೇವಾ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಈಚೆಗೆ ವಿಚಾರಣೆಗೆ ಬಂದಾಗ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯೆಲ್‌ ಅವರು ಸಲ್ಲಿಸಿರುವ ಪ್ರಮಾಣಪತ್ರವನ್ನು ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಒದಗಿಸಿದರು.

ನಾಗರಿಕ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯ ಕೀ-ಆನ್ಸರ್‌ ಪ್ರಕಟ ..

ವಾದ ಆಲಿಸಿದ ನ್ಯಾಯಪೀಠ ಪ್ರತಿಕ್ರಿಯಿಸಿ, ಸರ್ಕಾರ ನಿಜವಾಗಿಯೂ ಸರ್ಕಾರಿ ನೇಮಕಾತಿಗಳಲ್ಲಿ ಒಬಿಸಿ ಕೆಟಗರಿ ಅಡಿಯಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸುವ ಕೆಲಸ ಮಾಡಲಿದೆಯೇ? ಎಂದು ಪ್ರಶ್ನಿಸಿತು. ಜತೆಗೆ, ಒಂದೊಮ್ಮೆ ಆಯೋಗ ರಚನೆಯಾದರೆ, ಭಾರತದ ಸಂವಿಧಾನ ಪರಿಚ್ಛೇದ 342-ಎ ಅನುಸಾರ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಗೆ ಕೆಲ ವರ್ಗದವರನ್ನು ಸೇರಿಸಲು ಆಯೋಗ ಯಾವ ರೀತಿಯ ಪಾತ್ರ ನಿರ್ವಹಿಸಲಿದೆ? ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಉತ್ತರಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಅ.19ಕ್ಕೆ ಮುಂದೂಡಿತು.

ನಂತರ ವಾದ ಮಂಡಿಸಿದ ಸರ್ಕಾರದ ಪರ ವಕೀಲರು, ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿ ಕಲ್ಪಿಸುವ ವೇಳೆ ತೃತೀಯ ಲಿಂಗಿಗಳಿಗೆ ಇತರ ಹಿಂದುಳಿದ ವರ್ಗಗಳು (ಒಬಿಸಿ) ಕೆಟಗರಿ ಅಡಿಯಲ್ಲಿ ಪರಿಗಣಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕಾಯ್ದೆ ಪ್ರಕಾರ, ಹಿಂದುಳಿದ ವರ್ಗಗಳ ಪಟ್ಟಿಪರಿಷ್ಕರಿಸಬೇಕಾದರೆ, ಆಯೋಗದೊಂದಿಗೆ ಸಮಲೋಚನೆ ನಡೆಸುವುದು ಕಡ್ಡಾಯ ಎಂದರು.

ಅಲ್ಲದೆ, ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಅವಧಿ 2019ರ ಸೆ.21ಕ್ಕೆ ಮುಗಿದಿದೆ. ಹೊಸ ಅಧ್ಯಕ್ಷರ ಹಾಗೂ ಸದಸ್ಯರು ಇನ್ನೂ ನೇಮಕಗೊಂಡಿಲ್ಲ. ಅದರಂತೆ ಆಯೋಗದೊಂದಿಗೆ ಸಮಾಲೋಚನೆ ನಡೆಸಿದ ನಂತರವೇ ಸರ್ಕಾರ ನಿರ್ಧಾರ ಕೈಗೊಳ್ಳಲು ಸಾಧ್ಯ. ಇನ್ನೂ ಇದು ನೀತಿ-ನಿರ್ಣಯ ವಿಷಯವಾದ ಕಾರಣ ಅಗತ್ಯ ತಿದ್ದುಪಡಿ ತರಲು ಪ್ರಸ್ತಾವನೆ ಸಿದ್ಧಪಡಿಸಿ ಸಂಪುಟದ ಅನುಮೋದನೆ ಪಡೆಯಬೇಕಿದೆ. ಅದಕ್ಕಾಗಿ ಕಾಲಾವಕಾಶ ನೀಡಬೇಕೆಂದು ಸರ್ಕಾರಿ ವಕೀಲರು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರ ನಿಜವಾಗಿಯೂ ಸರ್ಕಾರಿ ನೇಮಕಾತಿಗಳಲ್ಲಿ ಒಬಿಸಿ ಕೆಟಗರಿ ಅಡಿಯಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸುವ ಕೆಲಸ ಮಾಡಲಿದೆಯೇ? ಎಂದು ಪ್ರಶ್ನಿಸಿತು. ಜತೆಗೆ, ಒಂದೊಮ್ಮೆ ಆಯೋಗ ರಚನೆಯಾದರೆ, ಭಾರತದ ಸಂವಿಧಾನ ಪರಿಚ್ಛೇದ 342-ಎ ಅನುಸಾರ ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಗೆ ಕೆಲ ವರ್ಗದವರನ್ನು ಸೇರಿಸಲು ಆಯೋಗ ಯಾವ ರೀತಿಯ ಪಾತ್ರ ನಿರ್ವಹಿಸಲಿದೆ? ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ಉತ್ತರಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಅ.19ಕ್ಕೆ ಮುಂದೂಡಿತು.