ಮೂವರು ಚಿಕ್ಕ ಮಕ್ಕಳಿಗೆ ಕೊರೋನಾ: ಕರುನಾಡಲ್ಲಿ ಮುಂದುವರಿದ ರುದ್ರ ನರ್ತನ...!
ಗುರುವಾರ ಒಂದೇ ಕುಟುಂಬದ ಮೂವರು ಚಿಕ್ಕ ಮಕ್ಕಳಿಗೆ ಕೊರೋನಾ ಮಾಹಾಮಾರಿ ವಕ್ಕರಿಸಿಕೊಂಡಿದ್ದು,ಕರುನಾಡಲ್ಲಿ ದಿನದಿಂದ ದಿನಕ್ಕೆ ಕರೋನಾ ವೈರಸ್ ರುದ್ರ ನರ್ತನ ಮುಂದುವರಿದೆ.
ಬೆಂಗಳೂರು, (ಏ.09): ಒಂದೆಡೆ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದು, ಮತ್ತೊಂದೆಡೆ ಅದರ ಸೊಂಕು ವ್ಯಾಪಿಸುತ್ತಲೇ ಇದೆ. ಅದರಲ್ಲೂ ಕರುನಾಡಲ್ಲಿ ಕೊರೋನಾ ವೈರಸ್ ರುದ್ರ ತಾಂಡವ ತೋರ್ತಿದೆ. ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನ ಹೆಚ್ಚಿಸಿಕೊಳ್ಳುತ್ತಿದೆ.
ಬೆಂಗಳೂರು, ಮೈಸೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಕೊರೋನಾ ವೈರಸ್ ಹಾಟ್‌ಸ್ಪಾಟ್ ಜಿಲ್ಲಾಗಳಾಗ್ಬಿಟ್ಟಿವೆ. ಇನ್ನು ಕೇವಲ ವಯಸ್ಸಾದವರಲ್ಲಿ ಈ ಸೋಂಕು ಕಾಣಿಸಿಕೊಳ್ಳತ್ತೇ ಎನ್ನಲಾಗಿತ್ತು. ವಿಪರ್ಯಾಸ ಅಂದ್ರೆ ಬಾಗಲಕೋಟೆ ಜಿಲ್ಲೆಯಲ್ಲಿ ಎರಡು ಚಿಕ್ಕ ಮಕ್ಕಳಿಗೂ ಈ ಮಾರಿ ಆವರಿಸಿಕೊಂಡಿದೆ.
ಇತ್ತೀಚೆಗೆ ಮೃತಪಟ್ಟ ವೃದ್ಧನ ಮನೆಯ ಪಕ್ಕದಲ್ಲಿರೋ ಕುಟುಂಬದ ಮೂವರು ಮಕ್ಕಳಿಗೆ ಸೋಂಕು ತಗುಲಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಭೀತಿ ತಂದಿದೆ. ಅದರಲ್ಲೂ ಮಕ್ಕಳಲ್ಲಿ ಕಾಣಿಸಿಕೊಂಡಿರುವುದು ತೀವ್ರ ಆತಂಕ ಮೂಡಿಸಿದೆ.
"
ಒಂದೇ ಕುಟುಂಬದ ಮೂವರು ಮಕ್ಕಳಲ್ಲಿ ಕೊರೊನಾ ಸೋಂಕು
"
ಚಿಕ್ಕಬಳ್ಳಾಪುರದಲ್ಲಿ ಕೊರೋನಾ ವೈರಸ್ ನರ್ತನ
"
ಬೆಳಗಾವಿಯಲ್ಲೂ ಕಾಣಿಸಿಕೊಂಡ ಮಾರಿ
"
ಸಕ್ಕರೆ ನಾಡು ಮಂಡ್ಯಕ್ಕೂ ವಕ್ಕರಿಸಿದ ಕೊರೋನಾ
"