ರಾಜೀವ್ ಗಾಂಧಿ ಜ್ಯೋತಿ ಯಾತ್ರೆ’ಯು ಸೋಮವಾರ ನಗರದ ಕೆಪಿಸಿಸಿ ಕಚೇರಿಯಿಂದ ತಮಿಳುನಾಡಿನ ಶ್ರೀಪೆರಂಬದೂರಿನತ್ತ ತೆರಳಲಿದ್ದು, ಬೆಳಗ್ಗೆ 10ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾತ್ರೆ ಉದ್ಘಾಟಿಸಲಿದ್ದಾರೆ.
ಬೆಂಗಳೂರು (ಮೇ.15) : ರಾಜೀವ್ ಗಾಂಧಿ ಜ್ಯೋತಿ ಯಾತ್ರೆ’ಯು ಸೋಮವಾರ ನಗರದ ಕೆಪಿಸಿಸಿ ಕಚೇರಿಯಿಂದ ತಮಿಳುನಾಡಿನ ಶ್ರೀಪೆರಂಬದೂರಿನತ್ತ ತೆರಳಲಿದ್ದು, ಬೆಳಗ್ಗೆ 10ಗಂಟೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾತ್ರೆ ಉದ್ಘಾಟಿಸಲಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ರಾಮಲಿಂಗಾರೆಡ್ಡಿ ಅವರು ಯಾತ್ರೆಗೆ ಚಾಲನೆ ನೀಡುವರು. ಬಳಿಕ ಶೇಷಾದ್ರಿಪುರದಲ್ಲಿನ ರಾಜೀವ್ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ಆರ್.ದೊರೈವೇಲು ನೇತೃತ್ವದಲ್ಲಿ ಕಾರ್ಯಕರ್ತರು ಜ್ಯೋತಿ ಯಾತ್ರೆ ಹೊರಡಲಿದ್ದಾರೆ.
ಚಿತ್ರಗಳಲ್ಲಿ, ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟ ಡಿಕೆಶಿ
ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮೈಸೂರು, ನಂಜನಗೂಡು, ಗುಂಡ್ಲುಪೇಟೆ, ಚಾಮರಾಜನಗರ ಮೂಲಕ ಅಲ್ಲಿಂದ ಸತ್ಯಮಂಗಲಂ ಮೂಲಕ ಮೂಲಕ ತಮಿಳುನಾಡು ಪ್ರವೇಶಿಸಲಿರುವ ಜ್ಯೋತಿಯು ರಾಜೀವ್ ಗಾಂಧಿ ಹುತಾತ್ಮರಾದ ದಿನವಾದ ಮೇ 21ರಂದು ಚೆನ್ನೈ ಮೂಲಕ ಶ್ರೀಪೆರಂಬದೂರು ತಲುಪಲಿದೆ. ಇದೇ ಊರಿನಲ್ಲಿ ರಾಜೀವ್ ಹತ್ಯೆ ನಡೆದಿತ್ತು.
ಅಲ್ಲಿ ತಮಿಳುನಾಡು ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಳಗಿರಿ ಹಾಗೂ ಹಿರಿಯ ನಾಯಕರು ಯಾತ್ರೆಯನ್ನು ಬರಮಾಡಿಕೊಳ್ಳುವರು. ಸಂಜೆ 6ಕ್ಕೆ ಹುತಾತ್ಮ ಸ್ಥಳದಲ್ಲಿ ಮೊಂಬತ್ತಿ ಬೆಳಗಿ ಗೌರವ ಸಲ್ಲಿಸಲಾಗುವುದು ಎಂದು ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿ ತಿಳಿಸಿದೆ.
