ಬೆಂಗಳೂರು, (ಏ.14): ಕರ್ನಾಟಕದಲ್ಲಿ  ಕೋವಿಡ್‌-19 ಸೋಂಕಿನಿಂದಾಗಿ ಕಳೆದ 24 ಗಂಟೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ.

ಇದರೊಂದಿಗೆ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ.

ಹುಬ್ಬಳ್ಳಿ ಸೋಂಕಿತನ ಬೆಚ್ಚಿಬೀಳಿಸುವ ಟ್ರಾವೆಲ್ ಹಿಸ್ಟರಿ, ಯಲ್ಲಾಪುರದಲ್ಲಿಯೂ ಆತಂಕ

ಕಲಬುರಗಿಯ 55 ವರ್ಷ ವಯಸ್ಸಿನ ವ್ಯಕ್ತಿ , ಬೆಂಗಳೂರಿನ 65 ವರ್ಷದ ವೃದ್ಧ ಹಾಗ ವಿಜಯಪುರ ಜಿಲ್ಲೆಯ 69 ವಯಸ್ಸಿನ ವೃದ್ಧ ಮೃತಪಟ್ಟವರು.

ಮಾತ್ರವಲ್ಲದೆ ಇಂದು (ಮಂಗಳವಾರ) 11 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ.
  ಬಾಗಲಕೋಟೆ ಹಾಗೂ ಕಲಬುರಗಿಯಲ್ಲಿ ತಲಾ ಮೂವರಿಗೆ ಮತ್ತು ಬೆಂಗಳೂರಿನ ಇಬ್ಬರಲ್ಲಿ ಸೋಂಕು ದೃಢ ಪಟ್ಟಿರುವುದರಿಂದ, ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ.

ಉಳಿದಂತೆ ಬೆಳಗಾವಿ, ವಿಜಯಪುರು ಹಾಗೂ ಚಿಕ್ಕಬಳ್ಳಾಪುರದ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ. ಇನ್ನು  65 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ಮೃತಪಟ್ಟವರು
* P257: 69 ವರ್ಷದ ಪುರುಷ, ವಿಜಯನಗರದಲ್ಲಿ ಮೃತ. P221(60 ವರ್ಷದ ಮಹಿಳೆ-ವಿಜಯಪುರದ ಮೊದಲ ಕೊರೋನಾ ರೋಗಿಯ ಪತಿ)
* P252: 65 ವರ್ಷದ ಬೆಂಗಳೂರು ನಿವಾಸಿ ವ್ಯಕ್ತಿ, ಬೆಂಗಳೂರಿನಲ್ಲಿ ಮೃತ. 
* P205:ಕಲಬುರಗಿ 55 ವರ್ಷದ ಪುರುಷ. ದೆಹಲಿಯಿಂದ ಬಂದಿದ್ದ ವ್ಯಕ್ತಿ. 

ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದರೂ 10,000ಕ್ಕೂ ಹೆಚ್ಚು ಮಂದಿಯಲ್ಲಿ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಲಾಕ್‌ಡೌನ್‌ ಅವಧಿಯನ್ನು ಮೇ 3ರ ವರೆಗೆ ವಿಸ್ತರಿಸಲಾಗಿದೆ.