ಬೆಂಗಳೂರು(ಅ.30): ಸತತವಾಗಿ ಸುರಿಯುತ್ತಿರುವ ಮಳೆ ಮತ್ತು ಜಾಗೃತಿಯ ಪರಿಣಾಮವೋ ಗೊತ್ತಿಲ್ಲ, ಹಿಂದಿನ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದರೆ ದೀಪಾವಳಿ ಹಬ್ಬದ ವೇಳೆ ಸುಡುವ ಪಟಾಕಿಯಿಂದ ಉಂಟಾಗುತ್ತಿದ್ದ ಮಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಈ ಬಾರಿ ಕೊಂಚ ಕಡಿಮೆ ಆಗಿದೆ.

ಹಬ್ಬದ ಪ್ರಾರಂಭದ ದಿನವಾದ ಭಾನುವಾರ ನಗರದಲ್ಲಿ ಮಳೆ ಸುರಿಯುತ್ತಿದ್ದರಿಂದ ಪಟಾಕಿ ಸದ್ದು ಕಡಿಮೆಯಾಗಿತ್ತು. ಅಲ್ಲದೆ, ಮಾಲಿನ್ಯಕ್ಕೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಪರಿಣಾಮ ಕಡಿಮೆ ಮಾಲಿನ್ಯವನ್ನುಂಟು ಮಾಡುವ ಪಟಾಕಿಗಳನ್ನು ಬಳಕೆ ಮಾಡಿದ್ದು ಸಹ ಕಂಡು ಬಂದಿದೆ. ಸೋಮವಾರ ಹೆಚ್ಚಿನ ಪ್ರಮಾಣದ ಪಟಾಕಿಗಳನ್ನು ಸಿಡಿಸಿದ್ದು, ಕೆಲ ಭಾಗಗಳಲ್ಲಿ ಮಾತ್ರ ಶಬ್ದ ಮತ್ತು ವಾಯು ಮಾಲಿನ್ಯ ಸುರಕ್ಷಿತ ಪ್ರಮಾಣಕ್ಕಿಂತ ತುಸು ಹೆಚ್ಚಿದೆ.

ದೀಪಾವಳಿ: ಬೆಂಗಳೂರಲ್ಲಿ ಒಂದೇ ದಿನ 99 ಮಂದಿಗೆ ಕಣ್ಣಿಗೆ ಹಾನಿ

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ ನಗರದ ವಿವಿಧ ಏಳು ಭಾಗಗಳಲ್ಲಿ ವಾಯು ಮಾಲಿನ್ಯ ತಪಾಸಣಾ ಮಾಪಕಗಳನ್ನು ಅಳವಡಿಸಿತ್ತು. ಈ ಭಾಗಗಳಲ್ಲಿ ಸಾಮಾನ್ಯ ಪ್ರಮಾಣದಲ್ಲಿ ಮಾಲಿನ್ಯ ಕಂಡು ಬಂದಿದೆ.

ನಗರ ಕೇಂದ್ರ ರೈಲು ನಿಲ್ದಾಣ, ಬಸವೇಶ್ವರನಗರದ ಸಾಣೆಗೊರವನಹಳ್ಳಿ, ಹೆಬ್ಬಾಳದ ಪಶು ವೈದ್ಯಕೀಯ ವಿಶ್ವವಿದ್ಯಾಲಯ, ಜಯನಗರ 5ನೇ ಹಂತ, ನಿಮ್ಹಾನ್ಸ್‌, ಮೈಸೂರು ರಸ್ತೆ ಕವಿಕ ಮತ್ತು ಸಿಲ್ಕ್ ಬೋರ್ಡ್‌ ಸೇರಿದಂತೆ ನಗರದಲ್ಲಿ 7 ಕಡೆಗಳಲ್ಲಿ ವಾಯು ಮಾಲಿನ್ಯ ತಪಾಸಣಾ ಮಾಪಕಗಳನ್ನು ಅಳವಡಿಸಲಾಗಿದೆ. ನಗರದ 17 ಭಾಗಗಳಲ್ಲಿ ಶಬ್ದ ಮಾಲಿನ್ಯ ತಪಾಸಣೆಗೆ ಮಾಪನಗಳನ್ನು ಅಳವಡಿಸಿದ್ದು, ಕೊನೆಯದಾಗಿ ಅ.21ರಂದು ಪರಿಶೀಲನೆ ನಡೆಸಲಾಗಿತ್ತು. ಮತ್ತೆ ಅ.27 ಮತ್ತು 28ರಂದು ಪರಿಶೀಲನೆ ನಡೆಸಿದ್ದು, ಮಾಲಿನ್ಯ ಪ್ರಮಾಣದಲ್ಲಿ ಏರಿಕೆಯಾಗಿರುವ ಕುರಿತು ವರದಿಯಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಬಿಬಿಎಂಪಿ ಕೆಲಸಕ್ಕೆ ಬಾಂಗ್ಲಾ ವಲಸಿಗರನ್ನು ನೇಮಿಸಬೇಡಿ: ಸಂಸದರ ಪತ್ರ.

ಬಸವೇಶ್ವರ ನಗರ, ಜಯನಗರ ಐದನೇ ಹಂತ ಮತ್ತು ಸಿಲ್ಕ್ ಬೋರ್ಡ್‌ನಲ್ಲಿ ಶಬ್ದ ಮಾಲಿನ್ಯ ಹೆಚ್ಚಳವಾಗಿರುವ ಕುರಿತು ಮಾಹಿತಿ ದಾಖಲಾಗಿದೆ. ಅಲ್ಲದೆ, ಬಸವೇಶ್ವರ ನಗರ ಮತ್ತು ವಿಜಯನಗರ ಕ್ಲಬ್‌, ಜಯನಗರ, ಮೈಸೂರು ರಸ್ತೆ ಭಾಗಗಳಲ್ಲಿ ವಾಯು ಮಾಲಿನ್ಯ ಸುರಕ್ಷಿತ ಪ್ರಮಾಣಕ್ಕಿಂತ ತುಸು ಹೆಚ್ಚು ಕಂಡು ಬಂದಿದೆ.

50 ಕ್ಯೂ. ಮೀಟರ್‌ಗಿಂತ ಅಧಿಕ ಇದ್ದರೆ ಹಾನಿ

ಪರಿಸರ ಇಲಾಖೆ ನಿಯಮಗಳ ಪ್ರಕಾರ ಗಾಳಿ ಗುಣಮಟ್ಟದ ಸೂಚ್ಯಂಕದ ಪ್ರಕಾರ ಪ್ರಮಾಣ ಮೈಕ್ರೋಗ್ರಾಂ ಪರ್‌ ಕ್ಯೂಬಿಕ್‌ ಮೀಟರ್‌ಗೆ 50 ಮಾತ್ರ ಇರಬೇಕು. ಅದಕ್ಕಿಂತ ಹೆಚ್ಚಾದಲ್ಲಿ ಆರೋಗ್ಯಕ್ಕೆ ಹಾನಿಕಾರ.

ವಾಯು ಮಾಲಿನ್ಯ ಸಮೀಕ್ಷೆಯಲ್ಲಿ ಎಸ್‌ಒ 2 (ಗಂಧಕದ ಡೈ ಆಕ್ಸೈಡ್‌), ಎನ್‌ಒ2 (ಸಾರಜನಕದ ಡೈ ಆಕ್ಸೈಡ್ಸ್‌), ಆರ್‌ಎಪಿಎಂ (ತೇಲಾಡುವ ದೂಳಿನ ಕಣಗಳು) ಎಂಬ ಮೂರು ರೀತಿಯಲ್ಲಿ ವಿಭಾಗ ಮಾಡಿ ಮೈಕ್ರೋಗ್ರಾಂ ಪರ್‌ ಕ್ಯೂಬಿಕ್‌ ಮೀಟರ್‌ನಲ್ಲಿ ಸಮೀಕ್ಷೆಯನ್ನು ನಡೆಸಲಿದೆ.

ದಾಖಲಾದ ವಾಯು ಮಾಲಿನ್ಯ ಪ್ರಮಾಣ (ಮೈಕ್ರೋಗ್ರಾಂ ಪರ್‌ ಕ್ಯೂಬಿಕ್‌ ಮೀಟರ್‌)

ಸ್ಥಳ ಅ.21 ಅ.27 ಅ.28

ನಗರ ರೈಲು ನಿಲ್ದಾಣ 110 114 108

ಬಸವೇಶ್ವರನಗರ 51 91 73

ಪಶುವೈದ್ಯಕೀಯ ವಿವಿ 46 69 86

ಜಯನಗರ 5ನೇ ಹಂತ 75 97 89

ಮೈಸೂರು ರಸ್ತೆ 73 68 88

ನಿಮ್ಹಾನ್ಸ್‌ 35 67 -

ಸಿಲ್‌್ಕ ಬೋರ್ಡ್‌ 90 98 60

ದಾಖಲಾದ ಶಬ್ದ ಮಾಲಿನ್ಯ ಪ್ರಮಾಣ (ಡೆಸಿಬಲ್‌ನಲ್ಲಿ)

ಸ್ಥಳ ಅ.21 ಅ.27 ಅ.28

ವೈಟ್‌ಫೀಲ್ಡ್‌ ಕೈಗಾರಿಕಾ ವಲಯ 63.7 61.6 64.7

ಪೀಣ್ಯ ಕೈಗಾರಿಕಾ ವಲಯ 62.4 62.7 61.1

ಯಶವಂತಪುರ ಪೊಲೀಸ್‌ ಠಾಣೆ 69.0 68.7 71.3

ಮಾರತ್‌ಹಳ್ಳಿ 70.7 73.4 70.6

ಬಸವೇಶ್ವರ ನಗರ 76.4 71.6 68.9

ನಿಮ್ಹಾನ್ಸ್‌ 71.1 69.7 52.3

ವಿಜಯನಗರ ಕ್ಲಬ್‌ 62.4 82.7 68.5

ಸಿಟಿ ಫೋಲ್ಡರ್‌ನಲ್ಲಿ ಫೋಟೋ ಇದೆ

ಶ್ರೀರಾಂಪುರ 3