ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ 25 ಸಾವಿರ ಅರ್ಜಿ! 68ಕ್ಕೆ ಇಳಿಸಲು ಸರ್ಕಾರ ಹರಸಾಹಸ!
ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ 25 ಸಾವಿರ ಅರ್ಜಿಗಳು ಬಂದಿವೆ. ಅದನ್ನು ಈಗ 68ಕ್ಕೆ ಇಳಿಸಲು ಕಳೆದೊಂದು ವಾರದಿಂದ ಕನ್ನಡ-ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮತ್ತು ಆಯ್ಕೆ ಸಮಿತಿ ಸದಸ್ಯರು ಸತತ ಪ್ರಯತ್ನದಲ್ಲಿದ್ದಾರೆ.

ಸೋಮರಡ್ಡಿ ಅಳವಂಡಿ
ಕೊಪ್ಪಳ (ಅ.23): ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ 25 ಸಾವಿರ ಅರ್ಜಿಗಳು ಬಂದಿವೆ. ಅದನ್ನು ಈಗ 68ಕ್ಕೆ ಇಳಿಸಲು ಕಳೆದೊಂದು ವಾರದಿಂದ ಕನ್ನಡ-ಸಂಸ್ಕೃತಿ ಇಲಾಖೆ ಅಧಿಕಾರಿಗಳು ಮತ್ತು ಆಯ್ಕೆ ಸಮಿತಿ ಸದಸ್ಯರು ಸತತ ಪ್ರಯತ್ನದಲ್ಲಿದ್ದಾರೆ.
ಅರ್ಜಿಗಳ ಸಂಖ್ಯೆಯನ್ನು ಅಳೆದು ತೂಗಿ ಕೇವಲ 258ಕ್ಕೆ ಇಳಿಸಲಾಗಿದೆ. ಇದನ್ನು ಈಗ 68ಕ್ಕೆ ಇಳಿಸಿ, ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಮಾಡುವುದು ಗಜಪ್ರಸವದಂತೆ ಆಗುತ್ತದೆ. ಪ್ರಾದೇಶಿಕವಾರು, ಸಾಹಿತ್ಯ, ಸಾಮಾಜಿಕ ಸೇವೆ, ಕಲೆ ಸೇರಿದಂತೆ ಕ್ಷೇತ್ರವಾರು ವಿಂಗಡಿಸಿ ಆಯ್ಕೆ ಮಾಡಬೇಕಾಗಿರುವುದು ಸವಾಲಾಗಿದೆ.
ಬೆಳಗಾವಿ: ಆರೋಗ್ಯದ ಹೆಸರಲ್ಲಿ ಮಹಾಕುತಂತ್ರ; ಎಚ್ಚೆತ್ತುಕೊಳ್ಳಬೇಕಿದೆ ಸಿದ್ದು ಸರ್ಕಾರ!
ಇದೇ ಮೊದಲ ಬಾರಿಗೆ ಉಪಸಮಿತಿ ರಚಿಸಲಾಗಿದೆ. ಮೊದಲ ಸುತ್ತಿನಲ್ಲಿ ಉಪಸಮಿತಿಗಳ ಮೂಲಕ ಅರ್ಜಿಯ ಸಂಖ್ಯೆ ಇಳಿಸಲಾಗಿದೆ. ಮೇಲ್ನೋಟಕ್ಕೆ ಅರ್ಜಿಯನ್ನು ಆಹ್ವಾನಿಸಿದ್ದರೂ ಸರ್ಕಾರ ಅರ್ಜಿ ಸಲ್ಲಿಸದ ಅರ್ಹತೆ ಇರುವವರನ್ನು ಆಯ್ಕೆ ಮಾಡಲು ಚಿಂತನೆ ನಡೆಸಿದೆ. ಇದಕ್ಕಾಗಿ ಸರ್ಕಾರವೇ ಒಂದಿಷ್ಟು ಹೆಸರುಗಳನ್ನು ತರಿಸಿಕೊಂಡಿದೆ. ಸುಮಾರು 20-30 ಹೆಸರುಗಳನ್ನು ಸರ್ಕಾರವೇ ಗುರುತಿಸಿದ್ದು, ಆಯ್ಕೆಯಲ್ಲೂ ಇವರಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಅಪ್ರತಿಮ ಸೇವೆಗೈದು, ಎಲೆಮರೆಯ ಕಾಯಿಯಂತೆ ಇರುವವರನ್ನು ಗುರುತಿಸಿ ಆಯ್ಕೆ ಮಾಡಲು ಮುಂದಾಗಿದೆ ಎನ್ನಲಾಗಿದೆ. ಅ. 26ರಂದು ನಿಗದಿಪಡಿಸಿದ ಸಭೆಯಲ್ಲಿ ಅಂತಿಮ ಗೊಳಿಸುವ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ. ಆದರೆ, ರಾಜ್ಯೋತ್ಸವ ಪ್ರಶಸ್ತಿಗೆ ಬರುತ್ತಿರುವ ಶಿಫಾರಸು, ಜಿಲ್ಲಾವಾರು ಬೇಡಿಕೆ ನೀಗಿಸುವುದೇ ಈ ಬಾರಿ ದೊಡ್ಡ ಸವಾಲಾಗಿದೆ.\
Bengaluru Police: ಪರೇಡ್ ಸೌಧನ್- ವಿಶ್ರಮ್‌ಗೆ ತಿಲಾಂಜಲಿ, ಕನ್ನಡದಲ್ಲಿ ಕಮಾಂಡಿಂಗ್ ಕೊಟ್ಟ ಪೊಲೀಸರು
ಸಂಸ್ಥೆಗಳ ಆಯ್ಕೆಗೆ ಚಿಂತನೆ: ವ್ಯಕ್ತಿಗಳ ಆಯ್ಕೆ ಜತೆಗೆ ಇದೇ ಮೊದಲ ಸಲ ರಾಜ್ಯೋತ್ಸವ ಪ್ರಶಸ್ತಿಗೆ ಸಂಸ್ಥೆಗಳನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. 68 ಸಾಧಕರ ಜತೆಗೆ 10 ಸಂಸ್ಥೆಗಳನ್ನು ಆಯ್ಕೆ ಮಾಡುವ ಕುರಿತು ಚರ್ಚೆ ನಡೆಯುತ್ತಿ ರುವುದು ಈ ಬಾರಿಯ ವಿಶೇಷ ಎನ್ನಲಾಗುತ್ತದೆ
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅ. 26ರಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ಯಾದಿ ಸಿದ್ಧಪಡಿಸಿಕೊಳ್ಳಲಾಗುತ್ತಿದೆ.
• ಶಿವರಾಜ ತಂಗಡಗಿ ಕನ್ನಡ-ಸಂಸ್ಕೃತಿ