ಈ ಬಾರಿ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇರೋದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಅವರು ಬಾಗಲಕೋಟೆಯ ನವನಗರದ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇರಲ್ಲ, ಬರಗಾಲ ಇದ್ದಾಗಲೇ ಲೋಡ್ ಶೆಡ್ಡಿಂಗ್ ಮಾಡಿಲ್ಲ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಬಾಗಲಕೋಟೆ (ಜ.22): ಈ ಬಾರಿ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇರೋದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಅವರು ಬಾಗಲಕೋಟೆಯ ನವನಗರದ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇರಲ್ಲ, ಬರಗಾಲ ಇದ್ದಾಗಲೇ ಲೋಡ್ ಶೆಡ್ಡಿಂಗ್ ಮಾಡಿಲ್ಲ. ಇವುಗಳ ಮಧ್ಯೆ ವಿದ್ಯುತ್ ಕೊರತೆ ಉಂಟಾದ್ರೆ ಬೇರೆ ಕಡೆಯಿಂದ ಖರೀದಿ ಮಾಡುತ್ತೇವೆ ಎಂದ ಜಾರ್ಜ್, ಈ ವರ್ಷವೂ ಡಿಮ್ಯಾಂಡ್ ಜಾಸ್ತಿಯಾಗ್ತಿದೆ, ಈಗ 16 ರಿಂದ 17 ಸಾವಿರ ಮೆಗಾವ್ಯಾಟ್ ಬೇಡಿಕೆ ಬರ್ತಾ ಇದೆ, ಒಂದೊಮ್ಮೆ ವಿದ್ಯುತ್ ಕೊರತೆ ಉಂಟಾದ್ರೆ ಬೇರೆ ಕಡೆಯಿಂದ ಖರೀದಿ ಮಾಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಆರ್.ಪಾಟೀಲ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಹೈಕಮಾಂಡ್ ತೀರ್ಮಾನ ಮಾಡುತ್ತದೆ: ರಾಜ್ಯದಲ್ಲಿ ಸಚಿವ ಸಂಪುಟ ವಿಚಾರವನ್ನು ಸಿಎಂ, ಡಿಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಇಂದನ ಸಚಿವ ಕೆಜೆ ಚಾರ್ಜ್ ಹೇಳಿದರು. ತಾಲೂಕಿನ ನೀರಗುಂದ ಗ್ರಾಮದಲ್ಲಿ ಬಳಿ ನಿರ್ಮಿಸಲಾಗಿದ್ದ ಎಲಿಪ್ಯಾಡ್‌ನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಲ್ಲಿ ಸೋಲಾರ್ ಪ್ಲಾಂಟ್ ಪರಿಶಿಲನೆಗೆ ಬಂದಿದ್ದೇನೆ. ಸಚಿವ ಸಂಪುಟ ಪುನಾರಚನೆ ಬಗ್ಗೆ ನಾನು ಏನು ಹೇಳಲಾಗದು ಎಂದು ತಿಳಿಸಲಾಗುವುದು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಜಗದೀಶ್ ಶಟ್ಟರ್ ರಾಜ್ಯದ ಮುಖ್ಯ ಮಂತ್ರಿಯಾಗಿದ್ದವರು ಅವರು ದಾಖಲೆ ಕೊಟ್ಟರೆ ತನಿಖೆ ಮಾಡಿಸಲು ನಮ್ಮ ಸರ್ಕಾರ ಸಿದ್ಧವಿದೆ ಯಾರು ತಪ್ಪಿತಸ್ಥರು ಇದ್ದರೆ ಅವರಿಗೆ ಶಿಕ್ಷೆ ಕೊಡಿಸಲು ಸಿದ್ದರಿದ್ದೇವೆ ಎಂದರು. ಸಂವಿಧಾನ ಕೈಲಿಡಿದು ಓಡಾಡುವವರು ದೇಶದ್ರೋಹಿಗಳೆಂದು ಪ್ರಹ್ಲಾದ್ ಜೋಶಿ ಟೀಕೆ ವಿಚಾರಕ್ಕೆ ಸಂಬಂದಿಸಿದಂತೆ ಸಂವಿಧಾನದ ಆಧಾರದ ಮೇಲೆ ನಮ್ಮ ದೇಶ ನಡೆಯುತ್ತಿದೆ ಸಂವಿಧಾನ ಕೈಲಿಡಿದು ಓಡಾಡಬೇಡಿ ಎನ್ನುವವರು ವಿರೋಧಿಗಳು ಎಂದರು.
ಹೆಚ್ಚುವರಿ ಎರಡು ಗಂಟೆ ವಿದ್ಯುತ್ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಿ: ಸಚಿವ ಕೆ.ಜೆ.ಜಾರ್ಜ್
ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ ವಿಚಾರಕ್ಕೆ ಸಂಬಂದಿಸಿದಂತೆ ಡಿ.ಕೆ.ರವಿ, ಗಣಪತಿ ಆತ್ಮಹತ್ಯೆ ಪ್ರಕರಣ ಬಗ್ಗೆ ಬಿಜೆಪಿ ಹಗಲು ರಾತ್ರಿ ಧರಣಿ ಮಾಡಿತ್ತು, ವಿಧಾನಸೌಧದಲ್ಲಿ ಧರಣಿ ಕುಳಿತರು, ಮಲಗಿದರು ನಾನು ಗಣಪತಿ ಆತ್ಮಹತ್ಯೆ ಪ್ರಕರಣ ವಿಚಾರದಲ್ಲಿ ನಾನು ಅಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಿದೆ ಸಿಐಡಿ ಬಿ ರಿಪೋರ್ಟ್ ನೀಡಿತು, ಸಿಬಿಐ, ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ಏನಾಯ್ತು ಮತ್ತೆ ಯಾರಾದರೂ ಆ ಪ್ರಕರಣಗಳ ಬಗ್ಗೆ ಮಾತಾಡಿದರಾ? ಪ್ರಿಯಾಂಕ್ ಖರ್ಗೆ ಸಚಿನ್ ಆತ್ಮಹತ್ಯೆಗೂ ಏನು ಸಂಬಂಧ? ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಅಗತ್ಯ ಇಲ್ಲ. ಬಿಜೆಪಿ ಆರೋಪಕ್ಕೆ ಯಾವುದೇ ಬೆಲೆ ಇಲ್ಲ ಎಂದರು.
