Asianet Suvarna News Asianet Suvarna News

 'ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ' ಎಂದು ಬೋರ್ಡ್ ಹಾಕಿಕೊಂಡ ಹಾಸನ ಬಿಇಒ ಕಚೇರಿ ಅಧಿಕಾರಿ!

ಟೇಬಲ್ ಮೇಲೆ ನಾನೂ ಭ್ರಷ್ಟನಲ್ಲ,  ಲಂಚ ಇಲ್ಲಿ ಸ್ವೀಕರಿಸುವುದಿಲ್ಲ ಎಂದು ಬೋರ್ಡ್‌ ಹಾಕಿಕೊಂಡಿರೋ ಅಧೀಕ್ಷಕ ಲೋಕೇಶ್. ಈ ಹಿಂದೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ  ಮಾಡಿದ್ದರು. ಮಾಜಿ ಶಾಸಕ ಪ್ರೀತಂ ಗೌಡರ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು. ಈಗ ಹಾಸನ ಬಿಇಒ ಕಚೇರಿಯಲ್ಲಿ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

The officer put a board saying that he is not corrupt the photo has gone viral at hassan rav
Author
First Published Nov 9, 2023, 4:45 PM IST | Last Updated Nov 9, 2023, 4:45 PM IST

ಹಾಸನ (ನ.9): ಭ್ರಷ್ಟಾಚಾರ ದೇಶದ ಬಹುದೊಡ್ಡ ಪಿಡುಗು. ಯಾವುದೇ ಸರ್ಕಾರಿ ಇಲಾಖೆಗೆ ಹೋದರೂ ಅಲ್ಲಿ ಲಂಚ ಇಲ್ಲದೇ ಯಾವ ಕೆಲಸವೂ ಆಗುವುದಿಲ್ಲ ಎಂಬಷ್ಟರ ಮಟ್ಟಿಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗುಮಾಸ್ತನಿಂದಿಡಿದು ಐಎಎಸ್ ಅಧಿಕಾರಿಗಳವರೆಗೂ ಭ್ರಷ್ಟಾಚಾರ ನಡೆಯುತ್ತಿದೆ. ಆಡಳಿತ ವ್ಯವಸ್ಥೆ ಹೀಗಿರುವಾಗ ಸರ್ಕಾರಿ ಅಧಿಕಾರಿಯೊಬ್ಬರು ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂದು ಸ್ವತಃ ಬೋರ್ಡ್ ಹಾಕಿಕೊಂಡಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ ಜೊತೆಗೆ ಅಧಿಕಾರಿಯ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಹಾಸನದ ಬಿಇಒ ಕಚೇರಿಯ ಅಧೀಕ್ಷಕರಾಗಿರುವ ಲೋಕೇಶ್ ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಅಂತ ಟೇಬಲ್ ಮೇಲೆ ಬೋರ್ಡ್ ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ. 

ಜಾತಿ ಗಣತಿ ವರದಿಗೆ ವಿರಶೈವ ಮಹಾಸಭಾ ವಿರೋಧ; ನಾವು ಯಾರೂ ಸಿಎಂ ಭೇಟಿಗೆ ಹೋಗಲ್ಲ; ಶಾಮನೂರು ಅಸಮಾಧಾನ

ಲೋಕೇಶ್ ಈ ಹಿಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಆಪ್ತ ಸಹಾಯಕರಾಗಿ, ಮಾಜಿ ಶಾಸಕ ಪ್ರೀತಂ ಗೌಡರ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು. ಈಗ ಹಾಸನ ಬಿಇಒ ಕಚೇರಿಯಲ್ಲಿ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.  ನಾನು ಭ್ರಷ್ಟನಲ್ಲ ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂದು ಟೇಬಲ್ ಮೇಲೆ ಬೋರ್ಡ್ ಹಾಕಿಕೊಂಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತರರಿಗೂ ಮಾದರಿಯಾಗಲಿ ಎಂದಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ ಭೇಟಿ ಮಾಡಿದ ಬೆನ್ನಲ್ಲೇ, ಸಚಿವ ಸತೀಶ್ ಜಾರಕಿಹೊಳಿ ಭೇಟಿ ಮಾಡಿದ ಸಂಸದ ಡಿಕೆ ಸುರೇಶ್!

Latest Videos
Follow Us:
Download App:
  • android
  • ios