Asianet Suvarna News Asianet Suvarna News

ಕೂಲಿಂಗ್‌ ಪಿರಿಯಡ್‌ ರದ್ದು ಮಾಡಿ ದಂಪತಿ ವಿಚ್ಛೇದನಕ್ಕೆ ಕೋರ್ಟ್ ಒಪ್ಪಿಗೆ

ಪ್ರಕರಣವೊಂದರಲ್ಲಿ ಪತಿ-ಪತ್ನಿ ಇಬ್ಬರು ದೂರವಾಗಿ ಪರಸ್ಪರ ವೃತ್ತಿಯ ಬಗ್ಗೆ ಗಮನ ಹರಿಸಲು ನಿರ್ಧರಿಸಿ ಸಮ್ಮತಿಯೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ವಿವಾಹ ವಿಚ್ಛೇದನ ಮಂಜೂರಾತಿಗೆ ಇರುವ ಒಂದು ವರ್ಷದ ಕಡ್ಡಾಯ ಅವಧಿಯನ್ನು (ಕೂಲಿಂಗ್‌ ಪಿರಿಯಡ್‌) ಮನ್ನಾ ಮಾಡಿ ವಿಚ್ಛೇದನಕ್ಕೆ ಹಾದಿ ಸುಗಮಗೊಳಿಸಿದೆ.

The High Court agreed to the couple's divorce after canceling the cooling period rav
Author
First Published Sep 7, 2023, 5:42 AM IST

ಬೆಂಗಳೂರು (ಸೆ.7) :  ಪ್ರಕರಣವೊಂದರಲ್ಲಿ ಪತಿ-ಪತ್ನಿ ಇಬ್ಬರು ದೂರವಾಗಿ ಪರಸ್ಪರ ವೃತ್ತಿಯ ಬಗ್ಗೆ ಗಮನ ಹರಿಸಲು ನಿರ್ಧರಿಸಿ ಸಮ್ಮತಿಯೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ವಿವಾಹ ವಿಚ್ಛೇದನ ಮಂಜೂರಾತಿಗೆ ಇರುವ ಒಂದು ವರ್ಷದ ಕಡ್ಡಾಯ ಅವಧಿಯನ್ನು (ಕೂಲಿಂಗ್‌ ಪಿರಿಯಡ್‌) ಮನ್ನಾ ಮಾಡಿ ವಿಚ್ಛೇದನಕ್ಕೆ ಹಾದಿ ಸುಗಮಗೊಳಿಸಿದೆ.

ನಗರದ ಎಂಜಿನಿಯರ್‌ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್‌ ಅವರ ನೇತೃತ್ವದ ವಿಭಾಗೀಯ ಪೀಠ, ವಿಚ್ಛೇದನ ಮಂಜೂರಾತಿಗೆ ನಿರಾಕರಿಸಿ ಮಧ್ಯಂತರ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

 

ವಕ್ಫ್ ಬೋರ್ಡ್‌ ಚುನಾವಣೆ ರದ್ದು ಕೋರಿದ್ದ ಅರ್ಜಿ ವಜಾ

ಹಾಗೆಯೇ, ಅರ್ಜಿದಾರ ದಂಪತಿ ಹೈಕೋರ್ಟ್ ಈ ಆದೇಶದ ದೃಢೀಕೃತ ಪ್ರಮಾಣ ಪತ್ರದೊಂದಿಗೆ ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಲು ಸ್ವತಂತ್ರರಾಗಿದ್ದಾರೆ. ಕೌಟುಂಬಿಕ ನ್ಯಾಯಾಲಯವು ಅರ್ಜಿದಾರರ ಮನವಿಯನ್ನು ಅದರ ಮೆರಿಟ್‌ ಮೇಲೆ ಪರಿಗಣಿಸಿ ಆದಷ್ಟುಶೀಘ್ರ ಸೂಕ್ತ ನಿರ್ಧಾರ ಕೈಗೊಂಡು ಇತ್ಯರ್ಥಪಡಿಸಬೇಕು ಎಂದು ತಿಳಿಸಿದೆ.

ನ್ಯಾಯಾಲಯದ ಮುಂದಿರುವ ಅರ್ಜಿದಾರರು 32ರಿಂದ 37 ವರ್ಷದ ವಯೋಮಾನದವರು. ಅವರಿಬ್ಬರೂ ಪರಸ್ಪರ ದೂರ ಸರಿದು, ಪ್ರತ್ಯೇಕವಾಗಿ ಜೀವನ ನಡೆಸಲು ಒಪ್ಪಿದ್ದಾರೆ. ತಮ್ಮ-ತಮ್ಮ ವೃತ್ತಿ ಜೀವನದ ಮೇಲೆ ಹೆಚ್ಚಿನ ಗಮನಹರಿಸಲು ತೀರ್ಮಾನಿಸಿದ್ದಾರೆ. ಅವರು ಕೈಗೊಂಡಿರುವ ನಿರ್ಧಾರ ಪ್ರಜ್ಞಾಪೂರ್ವಕವಾದುದು ಮತ್ತು ಆ ನಿರ್ಧಾರದ ಪರಿಣಾಮಗಳ ಬಗ್ಗೆ ಅವರಿಗೆ ಅರಿವಿದೆ. ಹಾಗಾಗಿ ಈ ಪರಿಸ್ಥಿತಿಯಲ್ಲಿ ಅವರಿಬ್ಬರ ನಡುವಿನ ಸಂಧಾನ ಸಾಧ್ಯತೆ ಮೂಡುವ ಸಾಧ್ಯತೆ ಕ್ಷೀಣಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಲ್ಲದೆ, ನಿಯಮದ ಪ್ರಕಾರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿಗೆ ಆರು ತಿಂಗಳಿಂದ ಒಂದು ವರ್ಷ ಸಮಯ (ಕೂಲಿಂಗ್‌ ಅವಧಿ) ನೀಡಲಾಗುತ್ತದೆ. ಕೋರ್ಚ್‌ ಮೆಟ್ಟಿಲೇರಿರುವ ಪತಿ-ಪತ್ನಿ ಮನಸ್ಸು ಬದಲಾವಣೆಯಾಗಬಹುದು ಎಂಬುದು ಈ ಕ್ರಮದ ಹಿಂದಿನ ಉದ್ದೇಶ. ಆರು ತಿಂಗಳ ನಂತರವೂ ಪತಿ-ಪತ್ನಿ ಇಬ್ಬರೂ ಮನಸ್ಸು ಬದಲಿಸದೆ, ವಿಚ್ಛೇದನ ಅರ್ಜಿಯನ್ನು ಮುಂದುವರಿಸಲು ಸಮ್ಮತಿಸಿದರೆ ಆಗ ನ್ಯಾಯಾಲಯ ಮುಂದಿನ ಆರು ತಿಂಗಳಲ್ಲಿ ಮೆರಿಟ್‌ ಆಧಾರದ ಮೇಲೆ ಅರ್ಜಿ ಪರಿಶೀಲಿಸಿ ಅಗತ್ಯ ಆದೇಶ ಹೊರಡಿಸುತ್ತದೆ. ಆದರೆ, ಸುಪ್ರೀಂಕೋರ್ಚ್‌ 2017ರಲ್ಲಿ ಅಮರ್‌ ದೀಪ್‌ ಸಿಂಗ್‌ ವರ್ಸಸ್‌ ಹವೀರ್‍ನ್‌ ಕೌರ್‌ ಪ್ರಕರಣದಲ್ಲಿ ಕೂಲಿಂಗ್‌ ಅವಧಿ ಕಡ್ಡಾಯವೇನಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಆದ್ದರಿಂದ ವಿಚ್ಛೇದನ ಮಂಜೂರು ಮಾಡುವಾಗ ಪ್ರಕರಣಗಳ ವಾಸ್ತವಾಂಶ ಹಾಗೂ ಸಂದರ್ಭಗಳಿಗೆ ಅನುಗುಣವಾಗಿ ನ್ಯಾಯಾಲಯಗಳು ವಿವೇಚನೆ ಬಳಸಬೇಕು. ಪಕ್ಷಗಾರರನ್ನು ಮತ್ತೆ ಒಂದುಗೂಡಿ ಸಂಸಾರ ನಡೆಸುತ್ತಾರೆಯೇ ಎಂದು ಕೇಳಬೇಕು. ಅವರು ಒಪ್ಪಲಿಲ್ಲ ಎಂದಾದರೆ ವಿಚ್ಛೇದನ ಮಂಜೂರು ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.

ದಂಪತಿ ಪರಸ್ಪರ ಒಪ್ಪಿ ವಿಚ್ಛೇದನಕ್ಕೆ ಅರ್ಜಿ

ಅಲ್ಲದೆ, ಈ ಪ್ರಕರಣದಲ್ಲಿ ಪತಿ-ಪತ್ನಿ ಎಂಜಿನಿಯರಿಂಗ್‌ ಪದವೀಧರರು. ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಬ್ಬರಿಗೂ ತಮ್ಮ ನಡುವಿನ ಪರಸ್ಪರ ಭಿನ್ನಾಭಿಪ್ರಾಯಗಳು, ಇಷ್ಟ-ಕಷ್ಟಗಳು ಅರ್ಥವಾಗಿವೆ. ಸಂಧಾನಕ್ಕೆ ಹಿರಿಯರು, ಕುಟುಂಬ ಸದಸ್ಯರು ಮಾಡಿರುವ ಪ್ರಯತ್ನಗಳು ವಿಫಲವಾಗಿವೆ. ಇಬ್ಬರೂ ಪರಸ್ಪರ ಯಾವುದೇ ಆರೋಪ-ಪ್ರತ್ಯಾರೋಪಗಳನ್ನು ಮಾಡದೆ ವಿವಾಹ ಬಂಧನ ಕಡಿದುಕೊಳ್ಳಲು ನಿರ್ಧರಿಸಿದ್ದಾರೆ. ಹಾಗಾಗಿ ಅವರನ್ನು ಮತ್ತಷ್ಟುಅವಧಿಗೆ ಕಾಯಿಸುವುದು ಸರಿಯಲ್ಲ. ನ್ಯಾಯಾಲಯ ಈ ಪ್ರಕರಣದಲ್ಲಿ ಅರ್ಜಿದಾರರ ಪರಸ್ಪರ ಒಪ್ಪಿಗೆ ಮೇರೆಗೆ ಕೂಲಿಂಗ್‌ ಅವಧಿ ಮನ್ನಾ ಮಾಡಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.

 

18 ತುಂಬುವವರೆಗಷ್ಟೇ ಪುತ್ರಿಗೆ ಜೀವನಾಂಶ, ಮದುವೆ ಆಗುವ ತನಕ ಅಲ್ಲ: ಹೈಕೋರ್ಟ್‌

ಪ್ರಕರಣದಲ್ಲಿ ಇಬ್ಬರು 2022 ನವೆಂಬರ್‌ ತಿಂಗಳಲ್ಲಿ ವಿವಾಹವಾಗಿದ್ದರು, ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಬೇರೆಯಾಗಲು ನಿರ್ಧರಿಸಿದ್ದರು. ಇಬ್ಬರನ್ನು ಒಂದು ಮಾಡಲು ನಡೆಸಿದ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿಲ್ಲ.

Follow Us:
Download App:
  • android
  • ios