ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆಯಾಗಿದೆ. ಬಿಜೆಪಿ ಪಾಲಿಗೆ ಈಗ ಉಳಿದುಕೊಂಡಿರುವುದು 12 ಕ್ಷೇತ್ರಗಳ ಟಿಕೆಟ್ ಮಾತ್ರ. ಇಂದು ಸಂಜೆ ಬಿಜೆಪಿ ಹೈಕಮಾಂಡ್ ಮೂರನೇ ಪಟ್ಟಿ ಬಿಡುಗಡೆ ಮಾಡಲಿದ್ದು, ಮೂರನೇ ಪಟ್ಟಿಯಲ್ಲಿ ಯಾರಿಗೆಲ್ಲ ಟಿಕೆಟ್ ಸಿಗಲಿದೆ ಎಂಬುದು ಸದ್ಯ ತೀವ್ರ ಕುತೂಹಲ ಕೆರಳಿಸಿದೆ. ಆದರೆ ಈ ಕ್ಷೇತ್ರಗಳಿಗೆ ಹೊಸಬರನ್ನು ಆಯ್ಕೆ ಮಾಡುವ ಲೆಕ್ಕಾಚಾರದಲ್ಲಿ ಹೈಕಮಾಂಡ್ ಚಿಂತನೆ ನಡೆಸಿದೆ.
ಬೆಂಗಳೂರು (ಏ.15) : ಕಾಂಗ್ರೆಸ್ ಹಾಗೂ ಜೆಡಿಎಸ್‌ಗಿಂತ ತಡವಾಗಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿದರೂ, ಬಿಜೆಪಿ ಪಾಲಿಗೆ ಈಗ ಉಳಿದುಕೊಂಡಿರುವುದು 12 ಕ್ಷೇತ್ರಗಳ ಟಿಕೆಟ್ ಮಾತ್ರ. ಇಂದು ಸಂಜೆ ಬಿಜೆಪಿ ಹೈಕಮಾಂಡ್ ಮೂರನೇ ಪಟ್ಟಿ ಬಿಡುಗಡೆ ಮಾಡಲಿದ್ದು, ಮೂರನೇ ಪಟ್ಟಿಯಲ್ಲಿ ಯಾರಿಗೆಲ್ಲ ಟಿಕೆಟ್ ಸಿಗಲಿದೆ ಎಂಬುದು ಸದ್ಯ ತೀವ್ರ ಕುತೂಹಲ ಕೆರಳಿಸಿದೆ. ಆದರೆ ಈ ಕ್ಷೇತ್ರಗಳಿಗೆ ಹೊಸಬರನ್ನು ಆಯ್ಕೆ ಮಾಡುವ ಲೆಕ್ಕಾಚಾರದಲ್ಲಿ ಹೈಕಮಾಂಡ್ ಚಿಂತನೆ ನಡೆಸಿದೆ.
ಬಹಳಷ್ಟು ಕುತೂಹಲ ಮೂಡಿಸಿದ ಬಿಜೆಪಿ ಮೂರನೆ ಪಟ್ಟಿಯಲ್ಲಿ ಮಹಾದೇವಪುರ, ಹುಬ್ಬಳ್ಳಿ ಸೆಂಟ್ರಲ್, ಶಿವಮೊಗ್ಗ , ಗೋವಿಂದರಾಜನಗರ ಕ್ಷೇತ್ರದ ಟಿಕೆಟ್ ಯಾರಿಗೆ ಒಲಿಯತ್ತೆ ಎಂಬುದೇ ಕಾತುರದಿಂದ ಕಾಯುವಂತೆ ಮಾಡಿದೆ. ಮಹಾದೇವಪುರದಲ್ಲಿ ಹೊಸ ಅಭ್ಯರ್ಥಿಗೆ ಮಣೆ ಹಾಕಿ ಅಚ್ಚರಿ ಮೂಡಿಸಲಿದೆಯಾ ಹೈಕಮಾಂಡ್? ಇನ್ನು ಗೋವಿಂದರಾಜನಗರದಲ್ಲಿ ಅರುಣ್ ಸೋಮಣ್ಣ ಹೆಸರು ಕೇಳಿಬಂದಿತ್ತಾದರೂ ಸಚಿವ ವಿ ಸೋಮಣ್ಣ ಶಿಷ್ಯ ಉಮೇಶ್ ಶೆಟ್ಟಿ ಹೆಸರು ಮುಂಚೂಣಿಯಲ್ಲಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಕಾರ್ಪೊರೇಟರ್ ಆಗಿರುವ ಉಮೇಶ್ ಶೆಟ್ಟಿಗೆ ಟಿಕೆಟ್ ಒಲಿಯಲಿದೆ ಎಂದೇ ಹೇಳಲಾಗುತ್ತಿದೆ.
ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಮಾತುಕತೆ ಆಗಿದೆ, ಶೆಟ್ಟರ್‌ಗೆ ಟಿಕೆಟ್ ಸಿಗುವ ವಿಶ್ವಾಸವಿದೆ : ಜೋಶಿ
ಶಿವಮೊಗ್ಗ ಕ್ಷೇತ್ರಕ್ಕೆ ಕೆಎಸ್ ಈಶ್ವರಪ್ಪರ ಮಗ ಕಾಂತೇಶ್ ಹೆಸರು ಮುನ್ನಲೆಗೆ ಬಂದಿದೆ. ಈಶ್ವರಪ್ಪ ಅವರು ಮಗನಿಗೆ ಟಿಕೆಟ್ ಕೊಡುವ ಕುರಿತು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದರು. ಹೈಕಮಾಂಡ್ ಸೂಚನೆಯಂತೆ ಚುನಾವಣೆ ನಿವೃತ್ತಿ ಪಡೆದಿರುವುದರಿಂದ ಈಶ್ವರಪ್ಪರ ಮಗ ಕಾಂತೇಶ್‌ರಿಗೆ ಹೈಕಮಾಂಡ್ ಟಿಕೆಟ್ ನಿಡುವ ಸಾಧ್ಯತೆ ಇದೆ.
ಕೃಷ್ಣರಾಜ ಕ್ಷೇತ್ರಕ್ಕೆ ರಾಜೀವ್, ಶ್ರೀವತ್ಸ ಹೆಸರು ಚಲಾವಣಿಯಲ್ಲಿದ್ದು ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.
ಹುಬ್ಬಳ್ಳಿ ಸೆಂಟ್ರಲ್: ಪಟ್ಟು ಬಿಡದ ಶೆಟ್ಟರ್:
ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರ(Hubballi central constituency)ದ ಟಿಕೆಟ್ ಕಗ್ಗಂಟಾಗಿದ್ದು, ಶೆಟ್ಟರ್ ತಮಗೆ ಟಿಕೆಟ್ ಬೇಕೇಬೇಕು ಎಂಬ ಬಿಗಿ ಪಟ್ಟಿನ ನಡುವೆಯೂ ಟಿಕೆಟ್ ಮಿಸ್ ಆಗಲಿದೆಯಾ? ಈಗಾಗಲೇ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿರುವ ಜಗದೀಶ್ ಶೆಟ್ಟರ್(Jagadish shettar) ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಅಲ್ಲದೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಹೈಕಮಾಂಡ್‌ಗೆ ಮನವರಿಕೆ ಮಾಡಿದ್ದು ಜಗದೀಶ್ ಶೆಟ್ಟರ್ ಟಿಕೆಟ್ ಸಿಗಲಿದೆ ಎಂದು ಸ್ವತಃ ಪ್ರಲ್ಹಾದ್ ಜೋಶಿಯವರೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಹೈಕಮಾಂಡ್ ಮಹೇಶ್ ಟೆಂಗಿನಕಾಯಿ(Mahesh tenginakayi) ಅವರಿಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸುವ ಸಾಧ್ಯತೆಯೂ ಇದೆ. ಈಗಾಗಲೇ ಮಹೇಶ್ ಟೆಂಗಿನಕಾಯಿ ಅವರಿಗೆ ಟಿಕೆಟ್ ಎಂಬ ಮಾತು ಸದ್ದು ಮಾಡುತ್ತಿದೆ.
ದೆಹಲಿಯಲ್ಲಿ ಟಿಕೆಟ್‌ಗಾಗಿ ಮಾಜಿ ಸಿಎಂ ಶೆಟ್ಟರ್ ಅಲೆದಾಟ, ಜೋಶಿ ಬಳಿಕ ಜೆಪಿ ನಡ್ಡಾ ಮನೆಗೆ ತೆರಳಿ ಚರ್ಚೆ!
ನಾಗಠಾಣ ಕ್ಷೇತ್ರಕ್ಕೆ ಮಾಜಿ ಪೊಲೀಸ್ ಅಧಿಕಾರಿ ಮಹೇಂದ್ರ ನಾಯಕ್ ಹೆಸರು ಚಾಲ್ತಿಯಲ್ಲಿದೆ. ಆದರೆ ಅಚ್ಚರಿ ಎಂಬಂತೆ ರಮೇಶ್ ಜಿಗಜಿಣಗಿ ಹೆಸರು ಕೇಳಿಬರುತ್ತಿದೆ ಇಬ್ಬರಲ್ಲಿ ಯಾರಿಗೆ ಒಲಿಯಲಿದೆ ಎಂಬುದು ತೀವ್ರ ಕೂತುಹಲ ಹುಟ್ಟಿಸಿದೆ. ಇನ್ನ ಸೇಡಂ ವಿಧಾನಸಭಾ ಕ್ಷೇತ್ರಕ್ಕೆ ರಾಜಕುಮಾರ್ ತೇಲ್ಕರ್ ಅಥವಾ ಅವರ ಪತ್ನಿಗೆ ಟಿಕೆಟ್ ಸಿಗುವ ಸಾಧ್ಯತೆ. ರೋಣ ವಿಧಾನಸಭಾ ಕ್ಷೇತ್ರಕ್ಕೆ ರವಿ ದಂಡಿನ್ ಹೆಸರು ಮುನ್ನಲೆಯಲ್ಲಿದೆ ಹಾಗಾದರೆ ಕಳಕಪ್ಪ ಬಂಡಿಗೆ ಟಿಕೆಟ್ ಇಲ್ಲ? ಸಂಜೆವರೆಗೆ ಕಾದು ನೋಡಬೇಕಿದೆ.
ಶೆಟ್ಟರ್‌ಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಪಾಲಿಕೆ 16 ಸದಸ್ಯರ ರಾಜೀನಾಮೆ!
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಪಕ್ಷ ಟಿಕೆಟ್ ನಿರಾಕರಣೆ ಮಾಡಿರುವುದಕ್ಕೆ ಆಕ್ರೋಶ ತಾರಕಕ್ಕೇರಿದೆ. ಶುಕ್ರವಾರ ರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಸೆಂಟ್ರಲ್ ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಾಲಿಕೆಯ ಉಪ ಮೇಯರ್ ಸೇರಿದಂತೆ 16 ಜನ ಬಿಜೆಪಿ ಸದಸ್ಯರು, 50ಕ್ಕೂ ಹೆಚ್ಚು ಪಕ್ಷದ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ.
ಸದ್ಯಕ್ಕೆ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌ಗೆ ರಾಜೀನಾಮೆ ಪತ್ರ ಕೊಟ್ಟಿರುವ ಪಾಲಿಕೆ ಸದಸ್ಯರು, 3ನೆಯ ಪಟ್ಟಿಯಲ್ಲಿ ಶೆಟ್ಟರ್‌ಗೆ ಟಿಕೆಟ್ ಕೊಡಲೇಬೇಕೆಂದು ಒತ್ತಾಯಿಸಿದ್ದಾರೆ. ಈ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಿದಂತಾಗಿದೆ. ಈ ನಡುವೆ ಪಾಲಿಕೆ ಸದಸ್ಯರ ನಿಯೋಗವು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿತ್ತು. ಶೆಟ್ಟರ್ ಅವರು ತಮ್ಮ ಬೆಂಬಲಿಗರ ಸಭೆಯನ್ನು ಇಂದು ಏ.15ರಂದು ತಮ್ಮ ಗೃಹದಲ್ಲಿ ಕರೆದಿದ್ದಾರೆ. ಇದೀಗ ಈಗಿನ ಈ ಎಲ್ಲ ಬೆಳವಣಿಗೆಗಳು ಶೆಟ್ಟರ್ ನಡೆ ಕುರಿತು ಕುತೂಹಲಕ್ಕೆ ಕಾರಣವಾಗಿದೆ.
