Asianet Suvarna News Asianet Suvarna News

ಶಿಕ್ಷಕರ ವರ್ಗಾವಣೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಹೆಚ್ಚುವರಿ, ಕಡ್ಡಾಯ, ಕೋರಿಕೆ, ಪರಸ್ಪರ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟಿಸಿದ್ದು, ವರ್ಗಾವಣೆಯಲ್ಲಿ 2017-18ನೇ ಸಾಲಿಗಿಂತ 2018-19ನೇ ಸಾಲಿನಲ್ಲಿನ ದಾಖಲಾತಿ ಹೆಚ್ಚಾದ ಶಾಲೆಗಳಲ್ಲಿ ದಾಖಲಾತಿ ಪರಿಗಣಿಸಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುತ್ತದೆ.

Teachers transfer revised table released
Author
Bengaluru, First Published Sep 18, 2018, 10:38 AM IST

ಬೆಂಗಳೂರು: ಶಿಕ್ಷಣ ಇಲಾಖೆಯು 2017-18ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವೃಂದದ ವರ್ಗಾವಣೆಯ ಗಣಕೀಕೃತ ಕೌನ್ಸೆಲಿಂಗ್‌ನ ಹೆಚ್ಚುವರಿ, ಕಡ್ಡಾಯ, ಕೋರಿಕೆ ಮತ್ತು ಪರಸ್ಪರ ವರ್ಗಾವಣೆಗಳ ಪರಿಷ್ಕೃತ ವೇಳಾಪಟ್ಟಿಪ್ರಕಟಿಸಿದೆ.

ವರ್ಗಾವಣೆಯಲ್ಲಿ 2017-18ನೇ ಸಾಲಿಗಿಂತ 2018-19ನೇ ಸಾಲಿನಲ್ಲಿನ ದಾಖಲಾತಿ ಹೆಚ್ಚಾದ ಶಾಲೆಗಳಲ್ಲಿ ದಾಖಲಾತಿ ಪರಿಗಣಿಸಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುತ್ತದೆ. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಂದಿ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಪರಿಗಣಿಸಲಾಗುತ್ತದೆ.

ಹೆಚ್ಚುವರಿ ಶಿಕ್ಷಕರ ವರ್ಗಾವಣೆ: ಸೆ.22ರಂದು ಶಾಲಾವಾರು ಖಾಲಿ ಹುದ್ದೆಗಳ ಮತ್ತು ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಮತ್ತು ಎಲ್ಲಾ ತಾಲೂಕುಗಳ ಬಿಇಒಗಳ ಕಚೇರಿಯಲ್ಲಿ ತಾತ್ಕಾಲಿಕ ಪಟ್ಟಿಪ್ರಕಟಣೆ.

ಸೆ.22ರಿಂದ 24 ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆ, ಸೆ.25- ಆಕ್ಷೇಪಣೆಗಳ ಪುರಸ್ಕರಿಸುವುದು ಮತ್ತು ತಿರಸ್ಕರಿಸುವುದು. ಸೆ.26- ಖಾಲಿ ಹುದ್ದೆಗಳ ಅಂತಿಮ ಪಟ್ಟಿಪ್ರಕಟ. ಸೆ.27,28 ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಕೌನ್ಸೆಲಿಂಗ್‌, ಸೆ.29 ಶಿಕ್ಷಕರ ಮಾಹಿತಿಯನ್ನು ಟಿಡಿಎಸ್‌ನಲ್ಲಿ ಅಳವಡಿಸಿ ಪ್ರಾಥಮಿಕಿ ಶಿಕ್ಷಣ ನಿರ್ದೇಶಕರಿಗೆ ಸಲ್ಲಿಸುವುದು.

ಕಡ್ಡಾಯ ವರ್ಗಾವಣೆ: ಸೆ.29ರಿಂದ ಆ.4- ‘ಎ’ ವಲಯದಲ್ಲಿ ಕನಿಷ್ಠ 10 ವರ್ಷಕ್ಕಿಂತಲೂ ಹೆಚ್ಚಿನ ಸೇವೆ ಸಲ್ಲಿಸಿರುವ ಶಿಕ್ಷಕರ ಪಟ್ಟಿಪ್ರಕಟ. ಅ.5ರಂದು ಆಕ್ಷೇಪಣೆಗಳನ್ನು ಪರಿಗಣಿಸಿ ಅಂತಿಮ ಪಟ್ಟಿಪ್ರಕಟ. ಅ.13ರಿಂದ15- ‘ಎ’ ವಲಯದಿಂದ ‘ಸಿ’ ವಲಯದ ಕೌನ್ಸೆಲಿಂಗ್‌. ಅ.16- ಕ್ರಿಮಿನಲ್‌ ಪ್ರಕರಣ ಶಿಕ್ಷಕರ ವರ್ಗಾವಣೆ ನಡೆಸಲಾಗುತ್ತದೆ.

ಕೋರಿಕೆ ವರ್ಗಾವಣೆ ಪ್ರಕ್ರಿಯೆಯು ಸೆ.30ರಿಂದ ಅ.11ರೊಳಗೆ ನಡೆಸಲಾಗುವುದು. ಪರಸ್ಪರ ವರ್ಗಾವಣೆಯು ಅ.16ರಿಂದ ನ.4ರ ಅವಧಿಯಲ್ಲಿ ನಡೆಸಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಪಿ.ಸಿ. ಜಾಫರ್‌ ಆದೇಶ ತಿಳಿಸಿದ್ದಾರೆ.

Follow Us:
Download App:
  • android
  • ios