ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಶಾಲಾ ಶಿಕ್ಷಕನೇ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಆರೋಪಿ ಶಿಕ್ಷಕನನ್ನು ಬಂಧಿಸಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಸಾಸಲುಕುಂಟೆ ಗ್ರಾಮದಲ್ಲಿ ನಡೆದಿದೆ.

ತುಮಕೂರು (ಅ.13): ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಶಾಲಾ ಶಿಕ್ಷಕನೇ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಆರೋಪಿ ಶಿಕ್ಷಕನನ್ನು ಬಂಧಿಸಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಸಾಸಲುಕುಂಟೆ ಗ್ರಾಮದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿಕ್ಷಕ ಪಿ ನಾಗಭೂಷಣ್ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ ಬಡವನಹಳ್ಳಿ ಪೊಲೀಸರು. ಪಾವಗಡ ತಾಲೂಕಿನ ಸಾಸಲುಕುಂಟೆ ಸರ್ಕಾರಿ ಫ್ರೌಢಶಾಲೆಯ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಆರೋಪಿ ನಾಗಭೂಷಣ್‌ ಈ ಹಿಂದೆ ಮಧುಗಿರಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ಕರ್ತವ್ಯದ ವೇಳೆ ಕೃತ್ಯ ಎಸಗಿದ್ದರು. ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪಿ.

ಪಾಠ ಮಾಡಿ ಮೇಷ್ಟ್ರೇ ಅಂದ್ರೆ, ಮೈ-ಕೈ ಮುಟ್ತಿದ್ದ: ಶಿಕ್ಷಕನ ರಂಗಿನಾಟಕ್ಕೆ ಬೇಸತ್ತು ಗೂಸಾ ಕೊಟ್ರು

ಇದೇ ಆರೋಪದಲ್ಲಿ ಅಮಾನತಾಗಿ ಪಾವಗಡ ತಾಲ್ಲೂಕಿನ ಸಾಸಲುಕುಂಟೆ ಸರ್ಕಾರಿ ಪ್ರೌಢಶಾಲೆಗೆ ವರ್ಗಾವಣೆ ಮಾಡಲಾಗಿತ್ತು‌. ಆದರೆ ಶಿಕ್ಷಕನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಆದರೆ ಅನಂತರ ನಾಗಭೂಷಣ್ ವಿರುದ್ಧ ಪೋಕ್ಸೊ ಪ್ರಕರಣದಡಿ ದೂರು ನೀಡಿದ್ದ ವಿದ್ಯಾರ್ಥಿನಿಯ ತಾಯಿ. ಇತ್ತ ನಾಗಭೂಷಣ್ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿದ ಡಿಡಿಪಿಐ ಎಂ.ಆರ್. ಮಂಜುನಾಥ್.

ಪಾಠ ಮಾಡಿ ಮೇಷ್ಟ್ರೇ ಅಂದ್ರೆ, ಮೈ-ಕೈ ಮುಟ್ತಿದ್ದ: ಶಿಕ್ಷಕನ ರಂಗಿನಾಟಕ್ಕೆ ಬೇಸತ್ತು ಗೂಸಾ ಕೊಟ್ರು