Asianet Suvarna News Asianet Suvarna News

ಬೆಂಗಳೂರು ಸಾರಿಗೆಗೆ ಅತ್ಯಾಧುನಿಕ ತಂತ್ರಜ್ಞಾನ, BMTCಗೆ ಟಾಟಾದ 100 ಇವಿ ಬಸ್ ಸೇರ್ಪಡೆ!

ಬೆಂಗಳೂರು ನಗರ ಮಾಲಿನ್ಯ ತಗ್ಗಿಸಲು, ಮುಕ್ತ ಹಾಗೂ ಆರಾಮದಾಯಕ ಸಾರಿಗೆಗೆ ಅತ್ಯಾಧುನಿಕ ತಂತ್ರಜ್ಞಾನದ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಬಸ್ ಸೇವೆ ಆರಂಭಗೊಂಡಿದೆ. ಟಾಟಾ ಮೋಟಾರ್ಸ್ ಸಂಸ್ಥೆಯ 100 ಸ್ಟಾರ್ ಎಲೆಕ್ಟ್ರಿಕ್ ಬಸ್ ಇದೀಗ ಬಿಎಂಟಿಸಿ ಸೇರಿಕೊಂಡಿದೆ.

Tata Motors electrifies BMTC Bengaluru urban commuting with 100 Starbus EVs ckm
Author
First Published Dec 27, 2023, 7:45 PM IST

ಬೆಂಗಳೂರು(ಡಿ.27) ದೇಶದ ಬಹುತೇಕ ನಗರಗಳು ಮಾಲಿನ್ಯ ಸಮಸ್ಯೆ ಎದುರಿಸುತ್ತಿದೆ. ಇಂಧನ ದರ ಏರಿಕೆಯಿಂದ ಸಾರ್ವಜನಿಕ ಸಾರಿಗೆಯ ವೆಚ್ಚವೂ ದುಬಾರಿಯಾಗುತ್ತಿದೆ. ಇದೀಗ ಮಾಲಿನ್ಯ ನಿಯಂತ್ರಣ, ಸುಲಭ ಹಾಗೂ ಕೈಗೆಟುಕುವ ದರದ ಸಾರಿಗೆಗೆ ಎಲೆಕ್ಟ್ರಿಕ್ ಬಸ್‌ ಬಳಕೆ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರು ನೈಸರ್ಗಿಕ ಸೌಂದರ್ಯ ಉಳಿಸಿ, ಮಾಲಿನ್ಯ ಪ್ರಮಾಣ ತಗ್ಗಿಸಲು ಹಾಗೂ ಸಾರ್ವಜನಿಕರಿಗೆ ಸುಲಭ ಸಾರಿಗೆ ವ್ಯವಸ್ಥೆಗೆ 100 ಎಲೆಕ್ಟ್ರಿಕ್ ಬಸ್ ಸೇವೆ ಆರಂಭಗೊಂಡಿದೆ. ಟಾಟಾ ಮೋಟಾರ್ಸ್ ಸಂಸ್ಥೆಯ 100 ಸ್ಟಾರ್ ಇವಿ ಬಸ್ ಇದೀಗ ಬಿಎಂಟಿಸಿಗೆ ಸೇರ್ಪಡೆಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಕೆಲ ಸಚಿವರು 100 ಇವಿ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಬಿಎಂಟಿಸಿಗೆ ಸೇರ್ಪಡೆಗೊಳಿಸಿದ್ದಾರೆ. 

ಬಿಗ್‌ ಡೀಲ್‌, 1350 ಬಸ್‌ಗಳ ಆರ್ಡರ್‌ ಪಡೆದುಕೊಂಡ ಟಾಟಾ ಮೋಟಾರ್ಸ್‌!

ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಿಸಿರುವ ಟಾಟಾ ಇವಿ ಬಸ್ 12 ಮೀಟರ್ ಲೋ-ಫ್ಲೋರ್ ನ ಎಲೆಕ್ಟ್ರಿಕಲ್ ಬಸ್ ಗಳಾಗಿವೆ.  ನಗರದ ನಾಗರಿಕರಿಗೆ ಆರಾಮದಾಯಕ, ಅನುಕೂಲಕರ ಮತ್ತು ಶೂನ್ಯ ಮಾಲಿನ್ಯದ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆ ಅಡಿಯಲ್ಲಿ ನಿರ್ಮಿಸಿರುವ ಸ್ಟಾರ್ ಬಸ್, ನಗರ ಸಾರಿಗೆಗೆ ಸೂಕ್ತವಾಗಿದೆ. ಒಪ್ಪಂದದ ಪ್ರಕಾರ ಮುಂದಿನ 12 ವರ್ಷಗಳ ಅವಧಿಯಲ್ಲಿ 921 ಬಸ್ ಗಳನ್ನು ಪೂರೈಕೆ ಮಾಡಿ ಅವುಗಳ ನಿರ್ವಹಣೆ ಮತ್ತು ಕಾರ್ಯಾಚರಣೆ ಜವಾಬ್ದಾರಿಯನ್ನು ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲೂಶನ್ಸ್ ಲಿಮಿಟೆಡ್ ನೋಡಿಕೊಳ್ಳಲಿದೆ.  

 

ದೀಪಾವಳಿ ಹಬ್ಬಕ್ಕೆ ಆಯ್ದ ಟಾಟಾ ಕಾರುಗಳಿಗೆ 1.4 ಲಕ್ಷ ರೂ ಡಿಸ್ಕೌಂಟ್, ಆಫರ್ ಕೆಲ ದಿನ ಮಾತ್ರ!

ಟಾಟಾ ಮೋಟರ್ಸ್ ಇದುವರೆಗೆ ದೇಶದ ಹಲವು ನಗರಗಳಿಗೆ 1,500 ಬಸ್ ಗಳನ್ನು ಪೂರೈಕೆ ಮಾಡಿದೆ. ಈ ಬಸ್ ಗಳು 10 ಕೋಟಿ ಕಿಲೋಮೀಟರ್ ಗೂ ಅಧಿಕ ದೂರದವರೆಗೆ ಕ್ರಮಿಸಿವೆ. ಶೇ.95 ರಷ್ಟು ಕಾರ್ಯಕ್ಷಮತೆಯನ್ನು ಹೊಂದಿರುವುದು ಸಾಬೀತಾಗಿದೆ. ಟಾಟಾ ಸ್ಟಾರ್ ಬಸ್ ಇವಿ ಒಂದು ಕಟ್ಟಿಂಗ್ ಎಡ್ಜ್ ಇ-ಬಸ್ ಆಗಿದ್ದು, ನಗರ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದರ ಪೂರ್ಣ-ಎಲೆಕ್ಟ್ರಿಕ್ ಡ್ರೈವ್ ಟೋನ್ ನೊಂದಿಗೆ ಈ ಅತ್ಯಾಧುನಿಕ ವಾಹನವು ಶಕ್ತಿ ಬಳಕೆಯನ್ನು ಉತ್ತಮಗೊಳಿಸುತ್ತದೆ. ಇದು ಕಡಿಮೆ ಶಕ್ತಿಯ ಬಳಕೆ ಮತ್ತು ಕಾರ್ಯಾಚರಣೆ ವೆಚ್ಚಗಳಿಗೆ ಕಾರಣವಾಗುತ್ತದೆ. ಇದರ ಬೋರ್ಡಿಂಗ್ ಸುಲಭವಾಗಿರುತ್ತದೆ. ಆರಾಮದಾಯಕವಾದ ಆಸನ ವ್ಯವಸ್ಥೆ ಮತ್ತು ಚಾಲಕ ಸ್ನೇಹಿ ಕಾರ್ಯಾಚರಣೆಗಳಂತಹ ವೈಶಿಷ್ಟ್ಯತೆಗಳನ್ನು ಹೊಂದಿದೆ. ಸಂಪೂರ್ಣವಾಗಿ ಶೂನ್ಯ ಹೊರಸೂಸುವಿಕೆಯನ್ನು ಖಚಿತಪಡಿಸುವುದರಿಂದ ಇದು ಪರಿಸರಸ್ನೇಹಿ ವಾಹನವಾಗಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಶನ್, ಏರ್ ಸಸ್ಪೆನ್ಷನ್, ಇಂಟಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಂ, ಪ್ಯಾನಿಕ್ ಬಟನ್ ನಂತಹ ಇನ್ನಿತರ ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಹೊಂದಿದೆ. ಈ ಮೂಲಕ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಈ ಎಲೆಕ್ಟ್ರಿಕ್ ಬಸ್ ಸ್ವಚ್ಛವಾದ ಸಾರ್ವಜನಿಕ ಬದ್ಧತೆಯನ್ನು ಸಾಕಾರಗೊಳಿಸುತ್ತದೆ ಮತ್ತು ನಗರ ಪ್ರಯಾಣಿಕರ ಸಾರಿಗೆ ಅಗತ್ಯತೆಗಳಿಗೆ ಸೂಕ್ತವಾದ ಆಯ್ಕೆಯಾಗಿದೆ.

Follow Us:
Download App:
  • android
  • ios