Asianet Suvarna News Asianet Suvarna News

ಪಿ.ಸುಶೀಲಾ, ಎಲ್ ಆರ್ ಈಶ್ವರಿ ಅವರಿಗೆ  'ಸ್ವರ ಸಾಮ್ರಾಜ್ಞೆ' ಬಿರುದು

 ಹಿರಿಯ ಚಿತ್ರಸಂಗೀತ ನಿರ್ದೇಶಕ ರತ್ನಂ, ಹಾಗೂ ಪ್ರಖ್ಯಾತ ಗಾಯಕರುಗಳಾದ ಪಿ.ಬಿ. ಶ್ರೀನಿವಾಸ್ ಮತ್ತು ಎಸ್.ಪಿ. ಬಾಲಸುಬ್ರಮಣ್ಯಂ ರವರ  ಸಂಸ್ಮರಣಾರ್ತ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು,  ಸಂಗೀತರತ್ನ ವಿದ್ಯಾಲಯದ ಬೆಳ್ಳಿ ಹಬ್ಬದ ಪ್ರಯುಕ್ತ ಸಂಗೀತರತ್ನ ವಿದ್ಯಾಲಯ  ಹಾಗೂ ಚಿ.ಉದಯಶಂಕರ್ ಪ್ರತಿಷ್ಠಾನ ವತಿಯಿಂದ ಈ ಕಾರ್ಯಕ್ರಮ ನಡೆಯಿತು.

swarasamrajne award for p susheela and lr ishwari in raveendra kalakshetra bengaluru rav
Author
First Published Jul 17, 2023, 2:16 PM IST | Last Updated Jul 17, 2023, 2:16 PM IST

ಬೆಂಗಳೂರು (ಜು.17):  ಹಿರಿಯ ಚಿತ್ರಸಂಗೀತ ನಿರ್ದೇಶಕ ರತ್ನಂ, ಹಾಗೂ ಪ್ರಖ್ಯಾತ ಗಾಯಕರುಗಳಾದ ಪಿ.ಬಿ. ಶ್ರೀನಿವಾಸ್ ಮತ್ತು ಎಸ್.ಪಿ. ಬಾಲಸುಬ್ರಮಣ್ಯಂ ರವರ  ಸಂಸ್ಮರಣಾರ್ತ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು,  ಸಂಗೀತರತ್ನ ವಿದ್ಯಾಲಯದ ಬೆಳ್ಳಿ ಹಬ್ಬದ ಪ್ರಯುಕ್ತ ಸಂಗೀತರತ್ನ ವಿದ್ಯಾಲಯ  ಹಾಗೂ ಚಿ.ಉದಯಶಂಕರ್ ಪ್ರತಿಷ್ಠಾನ ವತಿಯಿಂದ ಈ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ,  ಭಾರತದ ಮಹಾನ್ ಗಾಯಕಿಯರಾದ  ಪದ್ಮಭೂಷಣ ಪ್ರಶಸ್ತಿ ವಿಜೇತೆ ಪಿ. ಸುಶೀಲ ಮತ್ತು ಕಲೈಮಾಮಣಿ ಎಲ್.ಆರ್.ಈಶ್ವರಿ  ಅವರುಗಳಿಗೆ ಸನ್ಮಾನಸಿ ಗೌರವ ಸಮರ್ಪಣೆ ಮಾಡಲಾಯ್ತು. 

ಚಿ‌ ಉದಯಶಂಕರ್ ಪ್ರತಿಷ್ಠಾನದ ಗೌರವ ಅಧ್ಯಕ್ಷ ಡಾ, ಸಿ ಸೋಮಶೇಖರ್ ಹಾಗೂ ಸಂಗೀತ ರತ್ನ ವಿದ್ಯಾಲಯದ ಅಧ್ಯಕ್ಷ ವೆಂಕಟ ರಾಮಯ್ಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಟೆ ಭಾರತಿ ವಿಷ್ಣು ವರ್ಧನ್ ,  ಬಿ ಸರೋಜ ದೇವಿ ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆ ತುಂಬಿದರು.

ಇಡೀ ಕುಟುಂಬವೇ ಜಸ್ಟಿನ್ ಬೈಬರ್‌ ಫ್ಯಾನ್ಸ್‌: ಓ ಬೇಬಿ ಹಾಡಿಗೆ ದನಿಗೂಡಿಸಿದ ಅಜ್ಜಿ: ವೀಡಿಯೋ ವೈರಲ್

ಚಿತ್ರರಂಗದ ಕಲಾವಿದರು, ನಿರ್ದೆಶಕರುಗಳು ಆಗಮಿಸಿ ಸನ್ಮಾನಿತರಿಗೆ ಗೌರವ ಸೂಚಿಸಿದ್ರು. ಗಾಯಕಿ ಸುಶೀಲಾ ಅವರು ವೇದಿಕೆಯಲ್ಲಿ ವಿರಹಾ ನೂರು ನೂರು ತರಹ ಹಾಗೂ ಬಾಳ ಬಂಗಾರ ನೀನು ಹಾಡುಗಳನ್ನು ಹಾಡಿದರು ಅವರ ಗಾನ ಮಾಧುರ್ಯಕ್ಕೆ ನೆರೆದಿದ್ದ ಸಭಿಕರು ಸಂತಸಗೊಂಡರು. ಇದೆ ಸಂದರ್ಭದಲ್ಲಿ ಮಾತನಾಡಿದ ಅವರು 'ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ, ಕರ್ನಾಟಕದಲ್ಲಿ ನನಗೆ ಸನ್ಮಾನಿಸಿರುವುದು ತುಂಬಾ ಸಂತೋಷವಾಗಿದೆ' ಎಂದರು.

'ಬಂದಾಗ ಅವ ಬಂದಾನೆ, ಸುವಿ ಸುವ್ವಲಾಲಿ' ಮತ್ತಿತರ ಹಾಡುಗಳ ಮೂಲಕ ಪ್ರೇಕ್ಷರನ್ನು ರಂಜಿಸಿದ ಈಶ್ವರಿ ಅವರು ಮಾತನಾಡಿ, `ನನ್ನಗಾಯನಕ್ಕೆ ಅ೦ದಿನಿಂದ ಇಂದಿನವರೆಗೂ ಪ್ರೋತ್ಸಾಹ ನೀಡುತ್ತಿರುವ ನಿಮಗೆ ಧನ್ಯವಾದಗಳು ನನ್ನ ಸಾಧನೆಗೆ ನೀವೆ ಕಾರಣ ಎಂದು ಸ್ಮರಿಸಿಕೊಂಡರು. 

ಚಿ ಉದಯಶಂಕರ್ ಪ್ರತಿಷ್ಠಾನದ ಡಾ.‌ಸೋಮಶೇಖರ್ ಮಾತನಾಡಿ ಪಿ. ಸುಶೀಲಾ ಮತ್ತು ಎಲ್ ಆರ್ ಈಶ್ವರಿಯವರು  ಮಹಾನ್ ಸಾಧಕಿಯರಾಗಿದ್ದು, ಸಂಗೀತ ತಪಸ್ವಿಗಳಾಗಿದ್ದಾರೆ ಅವರನ್ನು ಗೌರವಿಸುವ ಭಾಗ್ಯ ನಮ್ಮದಾಗಿದೆ ಎಂದರು. 

ನಟರು ಮಾತ್ರವಲ್ಲದೆ ಉತ್ತಮ ಗಾಯಕರೂ ಹೌದು ಈ ಬಾಲಿವುಡ್ ಸೆಲೆಬ್ರೆಟಿಗಳು!

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ದೊಡ್ಡರಂಗೇಗೌಡ ಅವರು ಮಾತನಾಡಿ  ಐದಾರು ದಶಕದಿಂದ ಸಂಗೀತದ ಔತಣವನ್ನು ನೀಡುತ್ತಾ ಬಂದಿರುವ ಮಹಾನ್ ಗಾಯಕಿಯರು, ನಾಡಿನಲ್ಲಿ  ಸಾಂಸ್ಕತಿಕ ಇತಿಹಾಸದ ಹೆಜ್ಜೆ ಗುರುತುಗಳನ್ನು ಸುಶೀಲಾ, ಹಾಗೂ ಎಲ್ ಆರ್ ಈಶ್ವರಿ ಅವರು  ಮೂಡಿಸಿದ್ದಾರೆ ಎಂದರು. ಇದೇ ವೇಳೆ ಪಿ ಸುಶೀಲಾ ಹಾಗೂ ‌ಎಲ್ ಆರ್ ಈಶ್ವರಿ ಅವರಿಗೆ ಸ್ವರ ಸಾಮ್ರಾಜ್ಞ ಬಿರುದು ನೀಡಿ ಗೌರವಿಸಲಾಯ್ತು.

Latest Videos
Follow Us:
Download App:
  • android
  • ios