ರಾಮಚಂದ್ರಾಪುರ ಮಠದ ಪರ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

ಎದುರ್ಕಳ ಈಶ್ವರ ಭಟ್ ಮತ್ತಿತರರು ಶ್ರೀರಾಮಚಂದ್ರಾಪುರ ಮಠದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, ಶ್ರೀಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿ; ಶ್ರೀಮಠದ ಅರ್ಜಿಯನ್ನು ಮಾನ್ಯ ಮಾಡಿದ  ಘನ ಸರ್ವೋಚ್ಚ ನ್ಯಾಯಾಲಯ, ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನಿರ್ದೇಶಿಸಿದೆ.
 

Supreme court upholds Ramachandrapura Mutt appeal regarding Gokarna temple

ಬೆಂಗಳೂರು (ಫೆ. 25):  ಎದುರ್ಕಳ ಈಶ್ವರ ಭಟ್ ಮತ್ತಿತರರು ಶ್ರೀರಾಮಚಂದ್ರಾಪುರ ಮಠದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, ಶ್ರೀಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿ; ಶ್ರೀಮಠದ ಅರ್ಜಿಯನ್ನು ಮಾನ್ಯ ಮಾಡಿದ  ಘನ ಸರ್ವೋಚ್ಚ ನ್ಯಾಯಾಲಯ, ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನಿರ್ದೇಶಿಸಿದೆ.

ಗೋಕರ್ಣದಲ್ಲಿ ಚಾಣಕ್ಯ ವಿಶ್ವವಿದ್ಯಾಪೀಠ

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಶ್ರೀಮಠದ ವಿರುದ್ಧ ಹೂಡಿರುವ ದಾವೆಯು ನ್ಯಾಯಯುತವಾಗಿದ್ದಲ್ಲವೆಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದು, ಇಂದು ಕೂಲಂಕುಶವಾಗಿ ಅರ್ಜಿಯನ್ನು ವಿಚಾರಣೆ ನಡೆಸಿದ ಮಾನ್ಯ ಸರ್ವೋಚ್ಚ ನ್ಯಾಯಾಲಯವು, ಉಚ್ಚ ನ್ಯಾಯಾಲಯದಲ್ಲಿರುವ ಪ್ರಕರಣದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶಿಸಿರುತ್ತದೆ.

ಈ ಹಿಂದೆ ಟಿ.ಟಿ. ಹೆಗಡೆ ಮತ್ತು ಪ್ರಶಾಂತ್ ಮತ್ತು ಲೋಕೇಶ್ ಎಂಬುವವರು ಸೆಕ್ಷನ್ 92 ಅಡಿಯಲ್ಲಿ ಶ್ರೀಮಠದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ, ಸೆಷನ್ ಕೋರ್ಟ್ ಬೆಂಗಳೂರಿನಲ್ಲಿ ದಾವೆ ಹೂಡಿದ್ದರು. ಸದರಿ ಎರಡೂ ಅರ್ಜಿಗಳೂ ವಜಾ ಆಗಿರುವುದನ್ನು  ವಾದದ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತರಲಾಗಿದ್ದು, ಸೆಕ್ಷನ್ 92 ಮೊಕದ್ದಮೆ ಬಾಕಿ ಇರುವಾಗ ಅಥವಾ ವಜಾಗೊಳಿಸಿದಾಗ ಪಿಐಎಲ್‌ನಲ್ಲಿ ಅಂತಹ ಪ್ರಾರ್ಥನೆಗಳನ್ನು ನೀಡಬಹುದೇ ಎಂದು ನಾವು ಪರಿಶೀಲಿಸುತ್ತೇವೆ ಎಂದು ನ್ಯಾಯಾಧೀಶರು ಹೇಳಿರುವುದು ಇಲ್ಲಿ ಗಮನಾರ್ಹವಾಗಿದೆ.

ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ತೊಡಗಿಸಿಕೊಂಡಿರುವ ಶ್ರೀಶಂಕರಾಚಾರ್ಯ ಪರಂಪರೆಯ ಶ್ರೀರಾಮಚಂದ್ರಾಪುರ ಮಠದ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದವರಿಗೆ ತೀವ್ರ ಹಿನ್ನೆಡೆಯಾಗಿದ್ದು, ಸರ್ವೋಚ್ಚ ನ್ಯಾಯಾಲಯ ಶ್ರೀಮಠದ ಅರ್ಜಿಯನ್ನು ಪುರಸ್ಕರಿಸಿದೆ.

 

Latest Videos
Follow Us:
Download App:
  • android
  • ios