ಬೆಂಗಳೂರು(ಜ.07): ಮಾರುಕಟ್ಟೆಗೆ ಹೆಚ್ಚಿನ ಪೂರೈಕೆ ಆಗುತ್ತಿರುವುದಿಂದ ಈರುಳ್ಳಿ, ಕ್ಯಾರೆಟ್‌, ಬೀನ್ಸ್‌ ಸೇರಿದಂತೆ ಕೆಲ ತರಕಾರಿಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ಕಳೆದ ಕೆಲ ತಿಂಗಳ ಹಿಂದೆ ಪೂರೈಕೆ ಕೊರತೆಯಿಂದ ಈರುಳ್ಳಿ, ಬೀನ್ಸ್‌, ಕ್ಯಾರೆಟ್‌ ದರ ಕೇಜಿಗೆ ನೂರರ ಗಡಿ ತಲುಪಿತ್ತು. ಆದರೆ, ಈ ತರಕಾರಿಗಳು ಕೆ.ಜಿ. .50 ಒಳಗೆ ಮಾರಾಟವಾಗುತ್ತಿವೆ. ನವೆಂಬರ್‌ನಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ತರಕಾರಿ ಇಳುವರಿ ಉತ್ತಮವಾಗಿದ್ದು, ಸಾಕಷ್ಟುಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ.

ಕೊರೋನಾ ನಂತರ ಉದ್ಯೋಗ ನಷ್ಟಹೊಂದಿದ್ದ ಯುವಜನತೆ ಸಹ ಕೃಷಿಯಲ್ಲಿ ಬದುಕು ಕಂಡುಕೊಂಡಿದ್ದಾರೆ. ಇದರಿಂದಾಗಿ ಮಾರುಕಟ್ಟೆಗಳಲ್ಲಿ ಅವರೆಕಾಯಿ, ಬಟಾಣಿ, ಬೀನ್ಸ್‌ ಹೀಗೆ ವಿವಿಧ ತರಕಾರಿಗಳ ಸರಬರಾಜು ಹೆಚ್ಚಾಗಿದೆ. ಜತೆಗೆ ಚಳಿಗಾಲವೂ ಇರುವುದರಿಂದ ತರಕಾರಿ, ಸೊಪ್ಪಿನ ದರದಲ್ಲಿ ಇಳಿಕೆಯಾಗಿದೆ.

ರಾಜ್ಯ ಹಾಗೂ ನೆರೆಯ ರಾಷ್ಟ್ರಗಳಾದ ಮಹಾರಾಷ್ಟ್ರ, ಗುಜರಾತ್‌ನಲ್ಲಿ ಈರುಳ್ಳಿ ಹೊಸ ಬೆಳೆ ಬಂದಿದೆ. ಹೀಗಾಗಿ ಗುಣಮಟ್ಟದ ಈರುಳ್ಳಿ ದರವೂ ಕುಸಿದಿದೆ. ಸಗಟು ದರ ಕೆ.ಜಿ. .22ರಿಂದ

30 ನಿಗದಿಯಾಗಿದ್ದರೆ, ಚಿಲ್ಲರೆ ದರ .40 ಇದೆ. .200 ತ​ಲು​ಪಿದ್ದ ಸಾಂಬಾರು ಈ​ರುಳ್ಳಿ ಇ​ದೀಗ .130-150ಕ್ಕೆ ಖರೀದಿಯಾಗುತ್ತಿದೆ. ಪೋಷಕಾಂಶವುಳ್ಳ ನುಗ್ಗೆಕಾಯಿ ಚಳಿಗಾಲದಲ್ಲಿ ಕಡಿಮೆ. ಆದರೆ, ಬೇಡಿಕೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ಕೆ.ಜಿ. .160ರಿಂದ .200 ಒಳಗಿದೆ. ತೆಂಗಿನಕಾಯಿ ಸಾಧಾರಣ ಗಾತ್ರದ್ದು .25ರಿಂದ 30, ದೊಡ್ಡ ಗಾತ್ರದ್ದು .35-40ಕ್ಕೆ ಮಾರಾಟ ಮಾಡಲಾಗುತ್ತಿದೆ.

ಹಾ​ಪ್‌​ಕಾ​ಮ್ಸ್‌, ತ​ರ​ಕಾ​ರಿ ದರ (​ಕೆ.​ಜಿ.​ಗ​ಳ​ಲ್ಲಿ​)

ಹುರುಳಿಕಾಯಿ 32

ಬೀಟ್ರೂಟ್‌ 36

ಹಾಗಲಕಾಯಿ 37

ಸೋರೆಕಾಯಿ 37

ಸೌತೆಕಾಯಿ 21

ದಪ್ಪ ಮೆಣಸಿನಕಾಯಿ 145

ಎಲೆಕೋಸು 22

ನುಗ್ಗೇಕಾಯಿ 160

ಮೂಲಂಗಿ 30

ಹೀರೇಕಾಯಿ 40

ಪಡವಲಕಾಯಿ 32

ಟೊಮೆಟೋ 20

ಅವರೆಕಾಯಿ 45

ಪುದೀನ 42

ಸಾಂಬಾರ್‌ ಈ​ರು​ಳ್ಳಿ 135

ಬೆಂಡೆ​ಕಾಯಿ 34

ಆ​ಲೂ​ಗಡ್ಡೆ 45

ಈ​ರುಳ್ಳಿ 45

ಮೊಟ್ಟೆಒಂದಕ್ಕೆ 6

ಹಣ್ಣುಗಳು (ಕೆ.ಜಿ.ಗಳಲ್ಲಿ)

ಪಚ್ಚಬಾಳೆ 20

ಚಂದ್ರಬಾಳೆ 60

ರಸಬಾಳೆ 52

ನೇಂದ್ರಬಾಳೆ 35

ಸೀತಾಫಲ 46

ಸೀಬೆ 55

ಅನಾನಸ್‌ 38

ಮೂಸಂಬಿ 90