Asianet Suvarna News Asianet Suvarna News

ಈ ಬಾರಿ ಮಳೆಗಾಲದಲ್ಲೂ ಕರ್ನಾಟಕದಲ್ಲಿ ಸೆಕೆ ವಾತಾವರಣ..!

ಕಳೆದ ನಾಲ್ಕೈದು ದಿನಗಳಿಂದ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಮೂಲಕ ಬರುವ ಮಾರುತಗಳಿಂದ ಮಳೆಯಾಗುತ್ತಿಲ್ಲ. ಭೂ ಪ್ರದೇಶದಲ್ಲಿ ಉಷ್ಣಾಂಶ ಮತ್ತು ತೇವಾಂಶದಿಂದ ಸೃಷ್ಟಿಯಾಗುವ ಮೋಡಗಳಿಂದ ಮಳೆಯಾಗುತ್ತಿದೆ. ಮುಂದಿನ ಎರಡ್ಮೂರು ದಿನ ಇದೇ ರೀತಿಯ ವಾತಾವರಣ ಇರಲಿದೆ. ಮುಂಗಾರು ಮಾರುತಗಳು ಆಗಮಿಸಿದರೆ ಸೆಕೆ, ಬಿಸಿಲು ಕಡಿಮೆಯಾಗಲಿದೆ: ಹವಾಮಾನ ತಜ್ಞ ಶ್ರೀನಿವಾಸ್‌ ರೆಡ್ಡಿ 
 

Sunny weather in Karnataka even in rainy season grg
Author
First Published Aug 20, 2024, 7:08 AM IST | Last Updated Aug 20, 2024, 10:28 AM IST

ಬೆಂಗಳೂರು(ಆ.20): ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಅವಧಿಯ ಮಾದರಿಯಲ್ಲಿ ವಾತಾವರಣ ಸೃಷ್ಟಿಯಾಗಿರುವುದರಿಂದ ಬಿಸಿಲು, ಮಳೆ ಹಾಗೂ ಸೆಕೆಯ ವಾತಾವರಣ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದೆ. ಬೆಳಗ್ಗಿನ ಅವಧಿಯಲ್ಲಿ ಬಿಸಿಲು ಕಾಣಿಸಿಕೊಂಡರೆ, ಮಧ್ಯಾಹ್ನ ಅಥವಾ ರಾತ್ರಿ ವೇಳೆ ಮೋಡ ಕವಿದು ಮಳೆ ಸುರಿಯುತ್ತಿದೆ. ಈ ಕಾರಣಕ್ಕೆ ಸೆಕೆ ಹೆಚ್ಚಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಮೂಲಕ ಬರುವ ಮಾರುತಗಳಿಂದ ಮಳೆಯಾಗುತ್ತಿಲ್ಲ. ಭೂ ಪ್ರದೇಶದಲ್ಲಿ ಉಷ್ಣಾಂಶ ಮತ್ತು ತೇವಾಂಶದಿಂದ ಸೃಷ್ಟಿಯಾಗುವ ಮೋಡಗಳಿಂದ ಮಳೆಯಾಗುತ್ತಿದೆ. ಮುಂದಿನ ಎರಡ್ಮೂರು ದಿನ ಇದೇ ರೀತಿಯ ವಾತಾವರಣ ಇರಲಿದೆ. ಮುಂಗಾರು ಮಾರುತಗಳು ಆಗಮಿಸಿದರೆ ಸೆಕೆ, ಬಿಸಿಲು ಕಡಿಮೆಯಾಗಲಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ್‌ ರೆಡ್ಡಿ ‘ಕನ್ನಡಪ್ರಭ’ಕ್ಕೆ ವಿವರಿಸಿದ್ದಾರೆ.

ಬೆಂಗಳೂರು: 12 ಗಂಟೆಯಲ್ಲಿ 52MM ಮಳೆ : ಇನ್ನು 5 ದಿನ ಮುಂದುವರಿಯಲಿದೆ ವರ್ಷಧಾರೆ : ಯೆಲ್ಲೋ ಅಲರ್ಟ್

ಆಗಸ್ಟ್‌ ಅಂತ್ಯದಿಂದ ಮಳೆ ಹೆಚ್ಚಳ:

ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಆಗಸ್ಟ್‌ನಲ್ಲಿ ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದೆ. ಒಳನಾಡು ಪ್ರದೇಶದಲ್ಲಿ ಮಳೆಯಾಗುತ್ತಿದೆ. ಮುನ್ಸೂಚನೆ ಪ್ರಕಾರ ಆಗಸ್ಟ್‌ ಕೊನೆಯ ವಾರ ಮತ್ತು ಸೆಪ್ಟಂಬರ್‌ನಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಶ್ರೀನಿವಾಸ್‌ ರೆಡ್ಡಿ ಮಾಹಿತಿ ನೀಡಿದ್ದಾರೆ. 

Latest Videos
Follow Us:
Download App:
  • android
  • ios