ಕೊರೊನಾ ಹತೋಟಿಗೆ ತರಲು ರಾಜ್ಯಾದ್ಯಂತ ಸಂಡೇ ಲಾಕ್‌ಡೌನ್‌ಗೆ ಸರ್ಕಾರ ನಿರ್ಧರಿಸಿದೆ. ವೀಕೆಂಡ್ ಜನರ ಸಂಚಾರ ಎಂದಿಗಿಂತ ಹೆಚ್ಚಾಗಿರುವುದರಿಂದ ಕೊರೊನಾ ಇನ್ನಷ್ಟು ಹರಡಬಹುದೆಂಬ ಉದ್ದೇಶದಿಂದ ಭಾನುವಾರ ಲಾಕ್‌ಡೌನ್‌ಗೆ ನಿರ್ಧರಿಸಲಾಗಿದೆ. ಈ ಲಾಕ್‌ಡೌನ್‌ಗೆ ಕೆಲವು ಕಡೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಇನ್ನು ಕೆಲವು ಕಡೆ ಜನ ಡೋಂಟ್ ಕೇರ್ ಅಂತಿದ್ದಾರೆ. ಜಿಲ್ಲಾವಾರು ಚಿತ್ರಣ ಇಲ್ಲಿದೆ ನೋಡಿ..!

ಶಿವಮೊಗ್ಗದಲ್ಲಿ ಸಂಡೇ ಲಾಕ್‌ಡೌನ್‌ಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಆಟೋ ಹಾಗೂ ಬೈಕ್ ಸಂಚಾರ ವಿರಳವಾಗಿದೆ. 

"

ಪೊಲೀಸ್ ಗಸ್ತು ಇದ್ದರೂ ಬೀದರ್‌ನಲ್ಲಿ ಸಂಡೇ ಲಾಕ್‌ಡೌನ್‌ಗೆ ಡೋಂಟ್ ಕೇರ್..! ಜನ ಎಂದಿನಂತೆ ಓಡಾಡುತ್ತಿದ್ದಾರೆ. 

ಉಡುಪಿಯಲ್ಲಿ ಸಂಡೇ ಲಾಕ್‌ಡೌನ್‌ಗೆ ಮಳೆಯೂ ಸಾಥ್ ನೀಡಿದೆ. ಮಳೆಯಿಂದಾಗಿ ಜನ ರಸ್ತೆಗೆ ಇಳಿದಿಲ್ಲ. 

ಬಾಗಲಕೋಟೆಯಲ್ಲಿ ಸಂಡೇ ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. 

ಕುಂದಾನಗರಿಯಲ್ಲಿ ಸಕಾರಾತ್ಮಕವಾಗಿ ಪ್ರತಿಕ್ರಿಯೆ ಸಿಗುತ್ತಿದೆ. ಖಾಸಗಿ ಬಸ್, ಆಟೋ ಹಾಗೂ ಕ್ಯಾಬ್ ಸಂಚಾರ ಬಂದ್ ಆಗಿದೆ. 

ಮಂಡ್ಯದ ಚಿತ್ರಣವಿದು

ವೀಕೆಂಡ್ ಲಾಕ್‌ಡೌನ್‌ಗೆ ಕೋಟೆನಾಡು ಚಿತ್ರದುರ್ಗ ಸಂಪೂರ್ಣ ಸ್ತಬ್ಧ 

ಕೊಪ್ಪಳದಲ್ಲಿ ಲಾಕ್‌ಡೌನ್‌ಗೆ ಡೋಂಟ್‌ ಕೇರ್..!

ಬಳ್ಳಾರಿಯಲ್ಲಿ ಅನಗತ್ಯವಾಗಿ ಓಡಾಡುವವರಿಗೆ ಖಾಕಿ ಏಟಿನ ಪಾಠ ಕಲಿಸಿದೆ. 

ಲಾಕ್‌ಡೌನ್‌ ಇದ್ರೂ ಆನೇಕಲ್‌ನಲ್ಲಿ ಎಂದಿನಂತಿದೆ ವಾಹನ ಸಂಚಾರ