ಆತ್ಮ*ತ್ಯೆ ದಾರಿ ಹಿಡಿಯುವವರಿಗೆ ಇದೊಂದು ಇಂಜೆಕ್ಷನ್ ಸಂಜೀವಿನಿಯಾಗಿ ಅವರ ಜೀವವನ್ನು ಉಳಿಸುತ್ತದೆ. ಯಾವುದು ಆ ಇಂಜೆಕ್ಷನ್, ಎಲ್ಲಿ ಈ ಚಿಕಿತ್ಸೆ ಸಿಗುತ್ತೆ ಎನ್ನುವುದು ಗೊತ್ತಾಗಬೇಕಾದರೆ ನೀವು ಈ ಸ್ಟೋರಿ ನೋಡಲೇ ಬೇಕು.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.12): ಇಂದು ಬದುಕಿನಲ್ಲಿ ಸಣ್ಣಪುಟ್ಟ ಸಂಕಷ್ಟಗಳು ಎದುರಾದರೂ ಸಾಕು, ಅದನ್ನು ನಿಭಾಯಿಸಲು ಸಾಧ್ಯವೇ ಇಲ್ಲ ಎಂದು ಎಷ್ಟೋ ಜನರು ತಮ್ಮ ಬದುಕನ್ನೇ ಕೊನೆಗಾಣಿಸಿಕೊಳ್ಳುತ್ತಾರೆ. ಅದರಲ್ಲೂ ಎಲ್ಲವೂ ಸುಲಭವಾಗಿ ಕೈಗೆಟಕಬೇಕು ಎಂದು ಬಯಸುವ ಯುವಜನರಂತು ಚಿಕ್ಕ ಸಮಸ್ಯೆಯನ್ನೂ ನಿಭಾಯಿಸಲಾಗದೆ ಬೇಗ ಆತ್ಮ*ತ್ಯೆ ದಾರಿ ಹಿಡಿಯುತ್ತಾರೆ. ಹೀಗೆ ಆತ್ಮ*ತ್ಯೆ ದಾರಿ ಹಿಡಿಯುವವರಿಗೆ ಇದೊಂದು ಇಂಜೆಕ್ಷನ್ ಸಂಜೀವಿನಿಯಾಗಿ ಅವರ ಜೀವವನ್ನು ಉಳಿಸುತ್ತದೆ. ಯಾವುದು ಆ ಇಂಜೆಕ್ಷನ್, ಎಲ್ಲಿ ಈ ಚಿಕಿತ್ಸೆ ಸಿಗುತ್ತೆ ಎನ್ನುವುದು ಗೊತ್ತಾಗಬೇಕಾದರೆ ನೀವು ಈ ಸ್ಟೋರಿ ನೋಡಲೇ ಬೇಕು.
ಬದುಕು ಸಾಕಷ್ಟು ವೇಗವಾಗಿರುವ ಆಧುನಿಕ ಜಗತ್ತಿನಲ್ಲಿ ಸಣ್ಣ ಸಮಸ್ಯೆ ಬಂದರೂ ಅದನ್ನು ನಿಭಾಯಿಸಲು ಸಾಧ್ಯವಾಗದೆ ಆತ್ಮ*ತ್ಯೆ ದಾರಿ ಹಿಡಿಯುವವರ ಸಂಖ್ಯೆ ಇಂದು ಕಡಿಮೆ ಇಲ್ಲ ಅಲ್ವಾ.? ಆದರೆ ಹೀಗೆ ಆತ್ಮ*ತ್ಯೆಯ ದಾರಿ ಹಿಡಿಯುವವರನ್ನು ಕಳೆದ ಮೂರು ತಿಂಗಳಲ್ಲಿ ಕೊಡಗು ವೈದ್ಯಕೀಯ ಕಾಲೇಜು ಮತ್ತು ಬೋಧಕ ಆಸ್ಪತ್ರೆ ಮನೋವೈದ್ಯರ ತಂಡ 20 ಜನರನ್ನು ಆತ್ಮ*ತ್ಯೆಯಿಂದ ಹಿಂದೆ ಸರಿಸಿ ಅವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. ಅದು ಕೂಡ ಆ ಒಂದು ಇಂಜೆಕ್ಷನ್ ಮೂಲಕ. ಹೌದು ಪದೇ ಪದೇ ಆತ್ಮ*ತ್ಯೆಗೆ ಯತ್ನಿಸುತ್ತಿದ್ದ ಮತ್ತು ಖಿನ್ನತೆಗೆ ಒಳಗಾಗಿ ಆತ್ಮ*ತ್ಯೆ ಮಾಡಿಕೊಳ್ಳಬೇಕೆಂಬ ಮನಸ್ಥಿತಿಯಲ್ಲಿದ್ದ 20 ಜನರನ್ನು ಕೊಡಗಿನ ವೈದ್ಯರ ತಂಡ ರಕ್ಷಿಸಿದೆ.
ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ರೂಪೇಶ್ ಮತ್ತು ತಂಡ 20 ಜನರ ಜೀವವನ್ನು ಉಳಿಸಿದೆ. ಅಷ್ಟೇ ಅವರ ಮುಂದೆ ಆತ್ಮ*ತ್ಯೆಗೆ ಮಾಡಿಕೊಳ್ಳುವುದಿಲ್ಲ ಎನ್ನುವಂತೆ ಅವರ ಮನಸ್ಸನ್ನು ಬದಲಾಯಿಸಿದೆ. ಆತ್ಮ*ತ್ಯೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದ ವ್ಯಕ್ತಿಗಳಿಗೆ ಅರಳಿಕೆ ತಜ್ಞರು ಮತ್ತು ಫಿಜಿಷಿಯನ್ ವೈದ್ಯರ ಸಲಹೆ ಮೇರೆಗೆ ಆಪರೇಷನ್ ಥಿಯೇಟರ್ನಲ್ಲಿ ಡ್ರಿಪ್ ಮೂಲಕ ಇಂಜೆಕ್ಷನ್ ಅನ್ನು ವ್ಯಕ್ತಿಯ ದೇಹಕ್ಕೆ ಇಂಜೆಕ್ಟ್ ಮಾಡಲಾಗುತ್ತದೆ. ಹೀಗೆ ಇಂಜೆಕ್ಟ್ ಮಾಡಲು ಆರಂಭಿಸಿದ 30 ನಿಮಿಷಗಳಲ್ಲೇ ವ್ಯಕ್ತಿಯು ಆತ್ಮ*ತ್ಯೆಯ ಮನಸ್ಥಿತಿಯಿಂದ ಹಿಂದೆ ಸರಿಯಲು ಆರಂಭಿಸುತ್ತಾನೆ.
ಒಮ್ಮೆ ಈ ಇಂಜೆಕ್ಷನ್ ಮಾಡಿದ ಬಳಿಕ ಎರಡು ವಾರಗಳವರೆಗೆ ಅದು ವ್ಯಕ್ತಿಯನ್ನು ಆತ್ಮ*ತ್ಯೆ ಮಾಡಿಕೊಳ್ಳುವ ಮನಸ್ಥಿತಿಯಿಂದ ಹಿಂದೆ ಸರಿಯುವಂತೆ ಮಾಡುತ್ತದೆ. ಆ ವೇಳೆಯಲ್ಲಿ ವೈದ್ಯರು ಮಾತ್ರೆ, ವಿದ್ಯುತ್ ಶಾಕ್ ಮತ್ತು ಕೌನ್ಸಿಂಗ್ ಮೂಲಕ ಸಂಪೂರ್ಣ ಬದಲಾಯಿಸಲಾಗುತ್ತದೆ. ಹೀಗೆ ಮಾಡುವುದಕ್ಕೆ ಬಿಪಿಎಲ್ ಕಾರ್ಡು ಇರುವವ ವ್ಯಕ್ತಿಗಳಿಗಾದರೆ ಉಚಿತವಾಗಿ ಚಿಕಿತ್ಸೆ ದೊರೆಯುತ್ತದೆ ಎನ್ನುತ್ತಾರೆ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ರೂಪೇಶ್ ಗೋಪಾಲ್. ಅಷ್ಟಕ್ಕೂ ವ್ಯಕ್ತಿಗಳು ಆತ್ಮ*ತ್ಯೆ ಮಾಡಿಕೊಳ್ಳುವುದಕ್ಕೆ ಕಾರಣವೇನು ಎಂದು ನೋಡಿದರೆ, ಸಮಸ್ಯೆಗಳು ಏನೇ ಇದ್ದರೂ ಮಾನಸಿಕ ಒತ್ತಡವೇ ಆತ್ಮ*ತ್ಯೆಗೆ ಕಾರಣ ಎನ್ನುತ್ತಾರೆ ವೈದ್ಯರು.
20 ರಿಂದ 40 ವಯಸ್ಸಿನ ಒಳಗಿನ ಯುವಜನರೇ ಹೆಚ್ಚು
ಮಾನಸಿಕ ಒತ್ತಡದಿಂದ ಮಿದುಳಿನಲ್ಲಿ ರಾಸಾಯನಿಕ ಬಿಡುಗಡೆಯಾಗುತ್ತದೆ. ಈ ರಾಸಾಯನಿಕ, ವ್ಯಕ್ತಿಯನ್ನು ಆತ್ಮ*ತ್ಯೆಗೆ ಪ್ರಚೋದಿಸುತ್ತದೆ. ಇದು ಆತ್ಮ*ತ್ಯೆಗೆ ಕಾರಣವಾಗುತ್ತದೆ ಎನ್ನುತ್ತಾರೆ. ವ್ಯಕ್ತಿ ಆತ್ಮ*ತ್ಯೆಗೆ ಯತ್ನಿಸುತ್ತಿದ್ದಾನೆಂದು ತಿಳಿದರೆ ಇಲ್ಲಿ ಚಿಕಿತ್ಸೆಗೆ ದಾಖಲಿಸಬಹುದು. ಕೆಲವು ವ್ಯಕ್ತಿಗಳು ಪದೇ ಪದೇ ಆತ್ಮ*ತ್ಯೆಗೆ ಯತ್ನಿಸುತ್ತಾರೆ. ಅಂತವರನ್ನು ಕರೆತಂದರೆ ಚಿಕಿತ್ಸೆ ನೀಡಿ ಆತ್ಮ*ತ್ಯೆ ತಡೆಯಬಹುದು. ಅದರಲ್ಲೂ ಇಂದು 20 ರಿಂದ 40 ವಯಸ್ಸಿನ ಒಳಗಿನ ಯುವಜನರೇ ಹೆಚ್ಚು ಆತ್ಮ*ತ್ಯೆಗೆ ಒಳಗಾಗುತ್ತಿದ್ದಾರೆ. ಈ ಚಿಕಿತ್ಸೆ ನೀಡಿದರೆ ಖಂಡಿತಾ ಅವರನ್ನು ಆತ್ಮ*ತ್ಯೆಯಿಂದ ಸಂಪೂರ್ಣ ಹಿಂದೆ ಸರಿಯುವಂತೆ ಮಾಡಬಹುದು ಎನ್ನುತ್ತಾರೆ ಮನೋವೈದ್ಯರು.
