Asianet Suvarna News Asianet Suvarna News

'ಇನ್ಮುಂದೆ ರೆಮ್‌ಡೆಷಿವರ್ ಬಳಕೆ ಸರಳೀಕರಣ'

 ರೆಮ್ಡಿಷಿವರ್ ಸೇರಿದಂತೆ ಯಾವುದೇ ಔಷಧ ದುರುಪಯೋಗ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.   ಸಮಸ್ಯೆಗಳ ಬಗ್ಗೆ ನಿನ್ನೆ ಸಿಎಂ ಯಡಿಯೂರಪ್ಪ ನಡೆಸಿದ ಸಭೆಯಲ್ಲಿ ಚರ್ಚೆ ಆಗಿದೆ.  ಲೋಪಗಳ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಸರಳ ವ್ಯವಸ್ಥೆ ತರಲಾಗುವುದು ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಹೇಳಿದರು. 

Strict Action On Using remdesivir Says DCM Ashwath Narayan snr
Author
Bengaluru, First Published May 5, 2021, 12:49 PM IST

ಬೆಂಗಳೂರು (ಮೇ.05):   ರೆಮಿಡಿಷಿವರ್ ಬಳಕೆಯನ್ನು ಸರಳೀಕರಣ ಮಾಡಲು ತಿರ್ಮಾನ ಮಾಡಲಾಗಿದೆ. ಅಗತ್ಯ ಇರುವ ಕಡೆ ರೆಮ್ಡಿಷಿವರ್ ಸಿಗುವಂತಾಗಲು ಸೂಕ್ತ ಕ್ರಮ ತೆಗೆದುಕೊಂಡಿದ್ದೇವೆ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ ಹೇಳಿದರು. 

 ಬೆಂಗಳೂರಿನಲ್ಲಿಂದು ಮಾತನಾಡಿದ ಡಿಸಿಎಂ ರೆಮ್‌ಡಿಷಿವರ್ ಸೇರಿದಂತೆ ಯಾವುದೇ ಔಷಧ ದುರುಪಯೋಗ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.   ಸಮಸ್ಯೆಗಳ ಬಗ್ಗೆ ನಿನ್ನೆ ಸಿಎಂ ಯಡಿಯೂರಪ್ಪ ನಡೆಸಿದ ಸಭೆಯಲ್ಲಿ ಚರ್ಚೆ ಆಗಿದೆ.  ಲೋಪಗಳ ಬಗ್ಗೆ ಮಾಹಿತಿ ಪಡೆಯಲಾಗಿದ್ದು, ಸರಳೀಕೃತ ವ್ಯವಸ್ಥೆ ತರಲಾಗುವುದು ಎಂದರು. 

ಕಾಳಸಂತೆಯಲ್ಲಿ ಔಷಧ ಮಾರಾಟ ಆಗದಂತೆ ಗೃಹ ಇಲಾಖೆಯ ಸಹಕಾರ ಪಡೆಯಲಾಗಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.  

ಐದು ಸಚಿವರಿಗೆ ಕೋವಿಡ್ ಹೊಣೆ, ಉಸ್ತುವಾರಿ ಸಚಿವರು ತಕ್ಷಣ ತಮ್ಮ ಜಿಲ್ಲೆಗೆ ತೆರಳಲು ಸೂಚನೆ ...

24 ಸಾವಿರ ರೆಮ್ಡಿಷಿವರ್ ಪ್ರತಿದಿನ ಕೊಡಲು ಅವಕಾಶ ಇದೆ. ಬೇಡಿಕೆ ಹೆಚ್ಚಾದರೂ ಅಗತ್ಯ ಇರುವಷ್ಟು ಔಷಧ ಮಾತ್ರೆ ರೆಡಿಯಾಗಿ ಇಡುತ್ತಿದ್ದೇವೆ.  ಕಾಳಸಂತೆ ಮಾರಾಟದ ಬಗ್ಗೆ ಎಚ್ಚರಿಕೆ ವಹಿಸಿದ್ದೇವೆ ಎಂದರು. 

ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ನಮ್ಮಲ್ಲೇ ಬಳಕೆ ಮಾಡುವ ವಿಚಾರ ಮಾಡಲಾಗುತ್ತಿದ್ದು ಸದ್ಯ  ನಮ್ಮಿಂದ 300 ಮೆಟ್ರಿಕ್ ಟನ್ ಹೊರಗೆ ಹೋಗುತ್ತಿದೆ.  ಬೇರೆ ರಾಜ್ಯದಿಂದಲೂ ನಾವು ಪಡೆಯುತ್ತಲೂ ಇದ್ದೇವೆ ಎಂದರು.  

ಇನ್ನು ತಮ್ಮ ಉಸ್ತುವಾರಿಯ ರಾಮನಗರ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಡಿಸಿಎಂ ರಾಮನಗರದಲ್ಲಿ 550 ಜನ ಶೊಂಕಿತರು ಇದ್ದಾರೆ.  ಆಕ್ಸಿಜನ್ ಕೊರತೆ ಇಲ್ಲ.  ಕುಮಾರಸ್ವಾಮಿ ಅವರು ಆಕ್ಸಿಜನ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ತಪ್ಪಲ್ಲ. ಎಷ್ಟೇ ಜಾಗ್ರತೆ ಮಾಡಿದರೂ ಕಷ್ಟ.  ರಾಮನಗರ ಜಿಲ್ಲೆಯಲ್ಲಿ ಆಕ್ಸಿಜನ್ ಟ್ಯಾಂಕ್ ಮಾಡಲಾಗುತ್ತಿದೆ.  ತಾಲೂಕು ಕೇಂದ್ರದಲ್ಲಿ ಸಹ ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತಿದೆ. ಈ  ಯಾವುದೇ ರೀತಿಯ ಭಯ ಬೇಡ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios