Asianet Suvarna News Asianet Suvarna News

ಶಾಲೆ ಸೇರದ ಮಕ್ಕಳ ಬಗ್ಗೆ ವರದಿಗೆ ಹೈಕೋರ್ಟ್‌ನಿಂದ 2 ವಾರ ಗಡುವು

ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕುರಿತು ಉನ್ನತಾಧಿಕಾರ ಸಮಿತಿ ನಡೆಸಿರುವ ಸಭೆಯ ನಡಾವಳಿ ಕುರಿತು ಅಂತಿಮ ವರದಿ ಸಲ್ಲಿಸಲು ಪ್ರಕರಣ ಸಂಬಂಧ ನೇಮಕಗೊಂಡಿರುವ ಕೋರ್ಟ್‌ ಸಹಾಯಕರಿಗೆ (ಅಮಿಕಸ್‌ ಕ್ಯೂರಿ) ಹೈಕೋರ್ಟ್‌ 2 ವಾರ ಕಾಲಾವಕಾಶ ನೀಡಿದೆ. 

State seeks two weeks from karnataka high court over enrolment of dropouts gvd
Author
Bangalore, First Published Jul 28, 2022, 4:30 AM IST

ಬೆಂಗಳೂರು (ಜು.28): ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕುರಿತು ಉನ್ನತಾಧಿಕಾರ ಸಮಿತಿ ನಡೆಸಿರುವ ಸಭೆಯ ನಡಾವಳಿ ಕುರಿತು ಅಂತಿಮ ವರದಿ ಸಲ್ಲಿಸಲು ಪ್ರಕರಣ ಸಂಬಂಧ ನೇಮಕಗೊಂಡಿರುವ ಕೋರ್ಟ್‌ ಸಹಾಯಕರಿಗೆ (ಅಮಿಕಸ್‌ ಕ್ಯೂರಿ) ಹೈಕೋರ್ಟ್‌ 2 ವಾರ ಕಾಲಾವಕಾಶ ನೀಡಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ವಿಚಾರವಾಗಿ 2013ರಲ್ಲಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು. 

ಅಮಿಕಸ್‌ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ವಕೀಲ ಕೆ.ಎನ್‌. ಫಣೀಂದ್ರ ಅವರು ವಿಚಾರಣೆಗೆ ಹಾಜರಾಗಿ, 2022ರ ಜು.6ರಂದು ಹೈಕೋರ್ಟ್‌ ನೀಡಿದ ನಿರ್ದೇಶನದಂತೆ ಉನ್ನತಾಧಿಕಾರ ಸಮಿತಿ ಜು.16ರಂದು ನಡೆಸಿದ ಸಭೆಯ ನಡಾವಳಿ ಕುರಿತ ಕರಡು ಪಟ್ಟಿಯನ್ನು ತಮಗೆ ಕಳುಹಿಸಿಕೊಡಲಾಗಿದೆ. ಅದನ್ನು ಅಂತಿಮಗೊಳಿಸಿ ವರದಿ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಎರಡು ವಾರ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು. ಅರ್ಜಿಯು ಜು.6ರಂದು ನಡೆದ ವಿಚಾರಣೆಗೆ ವೇಳೆ ರಾಜ್ಯದಲ್ಲಿ ಅಂಗನವಾಡಿಗಳಿಂದ 6 ವರ್ಷದೊಳಗಿನ 9.8 ಲಕ್ಷಕ್ಕೂ ಅಧಿಕ ಮಕ್ಕಳು ಹಾಗೂ 14 ವರ್ಷ ವಯೋಮಾನದ ಅಂದಾಜು 25 ಸಾವಿರ ಮಕ್ಕಳು ಶಾಲೆಗಳಿಂದ ಹೊರಗುಳಿದಿದ್ದಾರೆ. 

ಅರ್ಹರಿಗೆ ಭೂಸ್ವಾಧೀನ ಪರಿಹಾರ ವಿಳಂಬ ಸಲ್ಲದು: ಹೈಕೋರ್ಟ್‌ ಚಾಟಿ

ಒಟ್ಟಾರೆ 10 ಲಕ್ಷಕ್ಕೂ ಅಧಿಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಅಮಿಕಸ್‌ ಕ್ಯೂರಿ ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದರು.  ಆ ವರದಿ ದಾಖಲಿಸಿಕೊಂಡಿದ್ದ ನ್ಯಾಯಪೀಠ, ಈ ಪ್ರಕರಣದಲ್ಲಿ ಹೈಕೋರ್ಟ್‌ ರಚಿಸಿರುವ ಉನ್ನತಾಧಿಕಾರ ಸಮಿತಿಯು ಜು.16ರಂದು ಸಭೆ ನಡೆಸಿ ಶಾಲೆಯಿಂದ ಹೊರಗುಳಿದ ಅದರಲ್ಲೂ ವಿಶೇಷವಾಗಿ ಅಂಗನವಾಡಿಗಳಿಂದ ಹೊರಗುಳಿದ 3ರಿಂದ 6 ವರ್ಷದೊಳಗಿನ ಮಕ್ಕಳನ್ನು ಕರೆ ತರುವ ಬಗ್ಗೆ ಯಾವೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಸಲಹೆ ನೀಡಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತ್ತು.

ಧೈರ್ಯ​ವಿ​ದ್ದರೆ ಹೈ. ನ್ಯಾಯಾ​ಧೀ​ಶ​ರಿಂದ ತನಿಖೆ ನಡೆ​ಸಲಿ: ಬಿಜೆಪಿ ನೇತೃ​ತ್ವದ ರಾಜ್ಯ ಸರ್ಕಾರಕ್ಕೆ ಧೈರ್ಯ​ವಿ​ದ್ದರೆ ಸರ್ಕಾರಿ ಇಲಾ​ಖೆ​ಯ ವಿವಿಧ ಹುದ್ದೆ​ಗಳ ನೇಮ​ಕಾತಿ ಪರೀಕ್ಷೆ​ಯಲ್ಲಿ ನಡೆ​ದಿ​ರುವ ಅಕ್ರಮಗಳ ಕುರಿತು ಹೈಕೋರ್ಟ್‌ ನ್ಯಾಯಾ​ಧೀ​ಶ​ರ ಮೂಲಕ ತನಿಖೆ ಮಾಡಿಸಿ ತೋರಿ​ಸಲಿ ಎಂದು ಸಂಸದ ಡಿ.ಕೆ.​ಸು​ರೇಶ್‌ ಸವಾಲು ಹಾಕಿ​ದರು. ತಾಲೂ​ಕಿನ ಅವ್ವೇ​ರ​ಹಳ್ಳಿ ಗ್ರಾಮ​ದಲ್ಲಿ ಆರೋಗ್ಯ ಮೇಳ ಕಾರ್ಯ​ಕ್ರ​ಮ​ದಲ್ಲಿ ಪಾಲ್ಗೊ​ಳ್ಳು​ವು​ದಕ್ಕೂ ಮುನ್ನ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಪೊಲೀಸ್‌, ಲೋಕೋ​ಪ​ಯೋಗಿ ಇಲಾಖೆ ಜತೆಗೆ ಶಿಕ್ಷಣ ಇಲಾ​ಖೆ​ಯ​ಲ್ಲಿಯೂ ನೇಮ​ಕಾತಿ ಪರೀ​ಕ್ಷೆ​ಯಲ್ಲಿ ಅಕ್ರಮ ನಡೆ​ದಿ​ರುವ ಕೂಗು ಕೇಳಿ ಬರು​ತ್ತಿದೆ. ಬಿಜೆಪಿ ಸರ್ಕಾರ ಭ್ರಷ್ಟಾ​ಚಾರ ನಡೆ​ಸಿಲ್ಲ ಎನ್ನು​ವು​ದಾ​ದರೆ ಹೈಕೋರ್ಟ್‌ ನ್ಯಾಯಾ​ಧೀ​ಶ​ರ ಮೂಲಕ ತನಿಖೆ ಮಾಡಿಸಲಿ ಎಂದರು.

ಪತ್ನಿ ದುಡಿಮೆಯಲ್ಲಿ ಜೀವನ ನಡೆಸೋ ಗಂಡ, ಡಿವೋರ್ಸ್ ನೀಡಿದ ಕೋರ್ಟ್

ಸರ್ಕಾರಿ ಹುದ್ದೆ​ಗಳ ನೇಮ​ಕಾತಿ ಪರೀ​ಕ್ಷೆ​ಯ​ಲ್ಲಿನ ಅಕ್ರ​ಮ​ಗ​ಳನ್ನು ನೋಡುತ್ತಿ​ದ್ದರೆ ರಾಜ್ಯ ಸರ್ಕಾರ ಪಟ್ಟ​ಭ​ದ್ರ​ಶ​ಕ್ತಿ​ಗಳ ಕೈ ಕೆಳಗೆ ಕೆಲಸ ಮಾಡು​ತ್ತಿದ್ದು, ಯಾವುದೇ ರೀತಿ ಹತೋಟಿ ಹೊಂದಿ​ಲ್ಲ​ದಿ​ರ​ವುದು ಸ್ಪಷ್ಟ​ವಾ​ಗಿದೆ. ಯಾವ ಮುನ್ನೆ​ಚ್ಚ​ರಿಕೆ ಕ್ರಮ​ಕೈ​ಗೊಂಡು ಪ್ರತಿ​ಭಾ​ನ್ವಿ​ತ​ರಿಗೆ ನ್ಯಾಯ ಒದ​ಗಿ​ಸುವ ಕೆಲಸ ಮಾಡು​ತ್ತಿಲ್ಲ ಎಂದು ಕಿಡಿ​ಕಾ​ರಿ​ದ​ರು. ಯಾವ ಪಕ್ಷ ಯುವ​ಕ​ರಿಗೆ ಉದ್ಯೋಗ ನೀಡುವ ಭರ​ವಸೆ ನೀಡಿ ಅಧಿ​ಕಾ​ರಕ್ಕೆ ಬಂದಿ​ದೆಯೋ ಅದೇ ಪಕ್ಷದ ಸರ್ಕಾರ ಇಂದು ಉದ್ಯೋ​ಗ​ಗ​ಳನ್ನು ವ್ಯಾಪಾ​ರಕ್ಕೆ ಇಟ್ಟಿದೆ. ಎಲ್ಲಾ ಇಲಾ​ಖೆ​ಗಳಲ್ಲು ಅಕ್ರ​ಮದ ವಾತಾ​ವ​ರಣ ಸೃಷ್ಟಿ​ಯಾ​ಗಿದೆ. ಆದ್ದ​ರಿಂದ ಸರ್ಕಾರಿ ಹುದ್ದೆ​ಗಳ ನೇಮ​ಕಾತಿ ಪರೀಕ್ಷೆ ಅಕ್ರ​ಮ​ವನ್ನು ಹೈಕೋರ್ಟ್‌ ನ್ಯಾಯಾ​ಧೀ​ಶ​ರಿಂದ ತನಿಖೆ ಮಾಡಿ​ಸ​ಬೇಕು ಎಂದ​ರು.

Follow Us:
Download App:
  • android
  • ios