ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಪ್ರಕಟ
ಡಾ. ಬಿ.ಆರ್. ಅಂಬೇಡ್ಕರ್, ಮಾಜಿ ಸಚಿವ ಬಿ.ರಾಚಯ್ಯ, ಬಿ.ಬಸವಲಿಂಗಪ್ಪ, ಪ್ರೊ.ಬಿ.ಕೃಷ್ಣಪ್ಪ ಅವರುಗಳ ಹೆಸರಿನಲ್ಲಿ "ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿ" ಗಳನ್ನು ಸುದ್ದಿ ಮಾಧ್ಯಮ ಕ್ಷೇತ್ರದ ದಲಿತ ಸಂವೇದನೆಯುಳ್ಳ ದಲಿತೇತರ ವೃತ್ತಿಪರ ಪತ್ರಕರ್ತರನ್ನು ಗುರುತಿಸಿ ಗೌರವಿಸಲಿದೆ.
ಬೆಂಗಳೂರು(ನ.19): ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ ಬೆಂಗಳೂರು ಪ್ರತಿ ವರ್ಷದಂತೆ ಈ ವರ್ಷವೂ 2024 ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಡಾ. ಬಿ.ಆರ್. ಅಂಬೇಡ್ಕರ್, ಮಾಜಿ ಸಚಿವ ಬಿ.ರಾಚಯ್ಯ, ಬಿ.ಬಸವಲಿಂಗಪ್ಪ, ಪ್ರೊ.ಬಿ.ಕೃಷ್ಣಪ್ಪ ಅವರುಗಳ ಹೆಸರಿನಲ್ಲಿ "ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿ" ಗಳನ್ನು ಸುದ್ದಿ ಮಾಧ್ಯಮ ಕ್ಷೇತ್ರದ ದಲಿತ ಸಂವೇದನೆಯುಳ್ಳ ದಲಿತೇತರ ವೃತ್ತಿಪರ ಪತ್ರಕರ್ತರನ್ನು ಗುರುತಿಸಿ ಗೌರವಿಸಲಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಸುವರ್ಣ ನ್ಯೂಸ್‌ನ ಎಂ.ಸಿ. ಶೋಭಾ ನೇಮಕ !
ಹಿರಿಯ ಪತ್ರಕರ್ತ, ಜಿ.ಎನ್ ಮೋಹನ್, ಬಿ.ಎಂ.ಹನೀಫ್, ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಪತ್ರಕರ್ತೆ ಹುಲಿಕುಂಟೆ ಮಂಜುಳಾ ಅವರಿಗೆ ದತ್ತಿ ಪ್ರಶಸ್ತಿ ಘೋಷಿಸಲಾಗಿದೆ. ಇದೇವೇಳೆ, ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಗೌರವ ಪ್ರಶಸ್ತಿಗಳಿಗೆ ಮಲ್ನಾಡ್ವಾಣಿ ಪತ್ರಿಕೆ ಸಂಪಾದಕ ಕೆ. ಏಕಾಂತಪ್ಪ, ವಿಶಾಲವಾರ್ತೆ ಪತ್ರಿಕೆ ಸಂಪಾದಕ ಸೊಗಡು ವೆಂಕಟೇಶ್, ಜನೋದಯ ಪತ್ರಿಕೆ ಸಂಪಾದಕ ಮಂಜುಳಾ ಕಿರುಗಾವಲು, ಹೈದ್ರಾಬಾದ್- ಕರ್ನಾಟಕ ಮುಂಜಾವು ಪತ್ರಿಕೆ ಸಂಪಾದಕ ಸುರೇಶ್ ಸಿಂಧ್ಯೆ ಅವರಿಗೆ ಘೋಷಿಲಾಗಿದೆ.
ನವೆಂಬರ್ 29 ರಂದು ಬೆಂಗಳೂರಿನ ಗಾಂಧಿಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕ ರವಿಕುಮಾರ್ ಟೆಲೆಕ್ಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.