ಗಾನಚಂದ್ರಿಕಾ ಕಲ್ಚರಲ್ ಫೌಂಡೇಷನ್‌ನಿಂದ ರಾಜ್ಯಮಟ್ಟದ ಭಾವಗೀತೆ ಸ್ಪರ್ಧೆ: ಭಾಗವಹಿಸಿ, ಬಹುಮಾನ ಗೆಲ್ಲಿ..

ಗಾನಚಂದ್ರಿಕಾ ಕಲ್ಚರಲ್ ಫೌಂಡೇಷನ್ ಕಡೆಯಿಂದ ರಾಜ್ಯಮಟ್ಟದ ಭಾವಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸ್ಫರ್ಧೆಗೆ ಸಂಬಂಧಿಸಿದಂತೆ ಭಾಗವಹಿಸುವ ಮಕ್ಕಳಿಗೆ ನಿಬಂಧನೆಗಳನ್ನು ಹೊರಡಿಸಲಾಗಿದೆ.

State Level Lyric Competition by Gaanachandrika Cultural Foundation gvd

ಬೆಂಗಳೂರು (ಜ.05): ಗಾನಚಂದ್ರಿಕಾ ಕಲ್ಚರಲ್ ಫೌಂಡೇಷನ್ ಕಡೆಯಿಂದ ರಾಜ್ಯಮಟ್ಟದ ಭಾವಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸ್ಫರ್ಧೆಗೆ ಸಂಬಂಧಿಸಿದಂತೆ ಭಾಗವಹಿಸುವ ಮಕ್ಕಳಿಗೆ ನಿಬಂಧನೆಗಳನ್ನು ಹೊರಡಿಸಲಾಗಿದೆ.

ಮೊದಲನೆ ವಿಭಾಗ ವಯಸ್ಸು - 7 ವರ್ಷದ ಒಳಗಿನ ಮಕ್ಕಳು (2ನೇ ತರಗತಿಯವರೆಗಿನ ಮಕ್ಕಳು)
ನಿಬಂಧನೆ:
ಕಡ್ಡಾಯವಾಗಿ ಶಿಶುಗೀತೆಗಳನ್ನು ಮಾತ್ರ ಹಾಡಬೇಕು. ಉದಾ- ರೊಟ್ಟಿ ಅಂಗಡಿ ಕಿಟ್ಟಪ್ಪ, ಓ ಪುಟಾಣಿ ನೀಲಿ ಹಕ್ಕಿ, ಇತರೆ..
ಹಾಡು - 2 ನಿಮಿಷದ ಒಳಗೇ ಮುಗಿಯಬೇಕು.
ಮೊದಲನೆ ವಿಭಾಗದ ಲಿಂಕ್

ಎರಡನೇವಿಭಾಗ 8-13ವರ್ಷ (3ನೇ ತರಗತಿಯಿಂದ 8ನೇ ತರಗತಿ)
ನಿಬಂಧನೆ:
ತಮ್ಮಧ್ವನಿಗೆ, ವಯಸ್ಸಿಗೆ ಹೊಂದುವ ಯಾವುದಾದರು ಭಾವಗೀತೆ. ನಾಡುನುಡಿಗೀತೆ ಹಾಡುವಂತಿಲ್ಲ. ಹಾಡು - 2 ನಿಮಿಪದ ಒಳಗೇ ಮುಗಿಯುಬೇಕು.
(ಒಂದು ಪಲ್ಲವಿ, ಒಂದು ಚರಣ ಸಾಕು)
ಎರಡನೆ ವಿಭಾಗದ ಲಿಂಕ್

ಮೂರನೇ ವಿಭಾಗ 14-18 ವರ್ಷ (9ನೇ ತರಗತಿಯಿಂದ...)
ನಿಬಂಧನೆ:
ತಮ್ಮಧ್ವನಿಗೆ, ವಯಸ್ಸಿಗೆ ಹೊಂದುವ ಯಾವುದಾದರು ಭಾವಗೀತೆ. ನಾಡುನುಡಿಗೀತೆ ಹಾಡುವಂತಿಲ್ಲ.
ಹಾಡು - 2 ನಿಮಿಷದ ಒಳಗೇ ಮುಗಿಯಬೇಕು
(ಒಂದು ಪಲ್ಲವಿ , ಒಂದು ಚರಣ ಸಾಕು)
ಮೂರನೆ ವಿಭಾಗದ ಲಿಂಕ್

ಇತರ ನಿಬಂಧನೆಗಳು
1) ಹಾಡು ಕಡ್ಡಾಯವಾಗಿ 2 ನಿಮಿಷದ ಒಳಗೆ ಅಥವಾ 2 ನಿಮಿಷ ಇರಬೇಕು. ಹೆಚ್ಚಾದರೆ ಅಂತಹವುಗಳನ್ನು ಅಮಾನ್ಯ ಮಾಡಲಾಗುವುದು.

2) ಹಾಡುಗಳನ್ನು ತಂಬೂರಿಯ ಜತೆಗೆ ಮಾತ್ರ ಹಾಡಬೇಕು. ಕರೋಕೆಯೊಂದಿಗೆ ಬೇಡ.

3) ಮೊದಲನೆ ಸುತ್ತಿನಲ್ಲಿ ಆಯ್ಕೆಯಾಗಿ ಮುಂದಿನ ಸುತ್ತಿಗೆ ಹೋದವರಿಗೆ ಕರೆ ಮಾಡಿ ತಿಳಿಸಲಾಗುವುದು.

4) ಅಂತಿಮ ಸುತ್ತಿನಲ್ಲಿ ಆಯ್ಕೆಯಾದ ಮೊದಲ ಹಾಗೂ ಎರಡನೇ ಸ್ಪರ್ಧಿಗಳಿಗೆ ತಲಾ 2000, 1000 ರೂ ಬಹುಮಾನ, ಪಾರಿತೋಷಕ, ಪ್ರಮಾಣ ಪತ್ರ ಇತ್ಯಾದಿ ಕೊಡಲಾಗುವುದು. ಸಮಾಧಾನಕರ ಬಹುಮಾನಗಳೂ
ಇರಲಿವೆ. ಕಡೆಯ ಸುತ್ತಿಗೆ ಆಯ್ಕೆಯಾದ ಎಲ್ಲಾ ಮಕ್ಕಳಿಗೂ ಪ್ರಮಾಣಪತ್ರ ನೀಡಲಾಗುವುದು.

5) ವಿಡಿಯೋದಲ್ಲಿ ಮೊದಲಿಗೆ ತಮ್ಮ ಹೆಸರು ಹೇಳಿ ಹಾಡು ಶುರು ಮಾಡಬೇಕು. ಇತರ ವಿವರಗಳನ್ನು ತಪ್ಪಿಲ್ಲದೆ ಗೂಗಲ್ ಫಾರ್ಮಲ್ಲಿ ನಮೂದಿಸಬೇಕು.

6) ತೀರ್ಪುಗಾರರ ತೀರ್ಮಾನವೇ ಅಂತಿಮ 

7) ಗಮನಿಸಿ..!! ನೋಂದಾವಣೆ ಶುಲ್ಕ ಇರುವುದಿಲ್ಲ 

8) ಇದರೊಂದಿಗೆ ಕೊಟ್ಟಿರುವ, ತಮ್ಮವಯಸ್ಸಿಗೆ ಸರಿಹೊಂದುವ ಲಿಂಕ್ ಒತ್ತಿ, ತಮ್ಮ ವಿವರಗಳು ಹಾಗೂ ವಿಡಿಯೋ ಕಳಿಸಬೇಕು.

9) ತಮ್ಮ ವಿಡಿಯೋ ನಮಗೆ ತಲುಪಬೇಕಾದ ಕೊನೆಯ ದಿನಾ೦ಕ 12/01/2024

ಅಪ್ಲೈ ಮಾಡಲು ಈ ಲಿಂಕ್‌ ಒತ್ತುವ ಮುಖಾಂತರ ನೊಂದಣಿ ಮಾಡಿ
ಮೊದಲನೆ ವಿಭಾಗದ ಲಿಂಕ್

ಎರಡನೆ ವಿಭಾಗದ ಲಿಂಕ್

ಮೂರನೆ ವಿಭಾಗದ ಲಿಂಕ್

Latest Videos
Follow Us:
Download App:
  • android
  • ios