ರಾಜ್ಯದಲ್ಲಿ 5 ಗ್ಯಾರಂಟಿಗಳ ಅನುಷ್ಠಾನದ ಬೆನ್ನಲ್ಲೇ ಮದ್ಯಪ್ರಿಯರಿಗೆ ಶಾಕ್ ನೀಡುತ್ತಾ ಸರ್ಕಾರ!?

ರಾಜ್ಯದಲ್ಲಿ ಐದು ಗ್ಯಾರಂಟಿಗಳ ಘೋಷಣೆಯಾದ ಬೆನ್ನಲ್ಲೇ ಮದ್ಯಪ್ರಿಯರಿಗೆ ಸರ್ಕಾರ ಶಾಕ್​ ಕೊಟ್ಟಿದೆ. ಇದೀಗ ಮದ್ಯದ ದರದಲ್ಲಿ ಪ್ರತಿ ಬಾಟಲ್‌ಗೆ ರೂ.10 ರಿಂದ 20ರವರೆಗೆ ಹೆಚ್ಚಳವಾಗಿದ್ದು, ಬಿಯರ್ ಸೇರಿದಂತೆ ಹಾರ್ಡ್ ಡ್ರಿಂಕ್ಸ್‌ಗಳ ಬೆಲೆಯಲ್ಲಿ ಹೆಚ್ಚಿಸುವ ಸಾಧ್ಯತೆ ಇದೆ. 

State Government Increased The Price of Liquors gvd

ಬೆಂಗಳೂರು (ಜೂ.07): ರಾಜ್ಯದಲ್ಲಿ ಐದು ಗ್ಯಾರಂಟಿಗಳ ಘೋಷಣೆಯಾದ ಬೆನ್ನಲ್ಲೇ ಮದ್ಯಪ್ರಿಯರಿಗೆ ಸರ್ಕಾರ ಶಾಕ್​ ಕೊಡುವ ಸಾಧ್ಯತೆ ಇದೆ. ಇದೀಗ ಮದ್ಯದ ದರದಲ್ಲಿ ಪ್ರತಿ ಬಾಟಲ್‌ಗೆ ರೂ.10 ರಿಂದ 20ರವರೆಗೆ ಹೆಚ್ಚಿಸುವ ಶಿಫಾರಸ್ ಅನ್ನು ಅಬಕಾರಿ ಇಲಾಖೆ ಸರಕಾರದ ಮುಂದಿಡಲು ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ. ಬಿಯರ್ ಸೇರಿ ಹಾರ್ಡ್ ಡ್ರಿಂಕ್ಸ್‌ ಬೆಲೆಯಲ್ಲಿ ಹೆಚ್ಚಳವಾಗಲಿದೆ. ಬಡ್ ವೈಸರ್ ಬಿಯರ್ ದರ ರೂ.198 ರಿಂದ 220ಕ್ಕೆ ಹೆಚ್ಚಿಸುವ ಸಾಧ್ಯತೆ ಇದ್ದು, ಕಿಂಗ್ ಫಿಶರ್ ಬಿಯರ್ ದರವನ್ನು ರೂ.160ರಿಂದ 170ರೂ.ಗೆ ಏರಿಸಬಹುದು. ಯುಬಿ ಪ್ರೀಮಿಯಂ ದರ ರೂ.125ರಿಂದ 135, ಸ್ಟ್ರಾಂಗ್ ದರ ರೂ.130ರಿಂದ 135ಗೆ ಹೆಚ್ಚಳವಾಗಬಹುದು ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಗಬೇಕಾಗಿದೆ. 

ಸತತ 2ನೇ ತಿಂಗಳೂ ವಿದ್ಯುತ್‌ ದರ ಏರಿಕೆ ಶಾಕ್‌: ರಾಜ್ಯದಲ್ಲಿ ಮೇ ತಿಂಗಳ 12 ರಂದು ಪ್ರತಿ ಯುನಿಟ್‌ಗೆ 70 ಪೈಸೆಯಷ್ಟುವಿದ್ಯುತ್‌ ದರ ಹೆಚ್ಚಳ ಮಾಡಿ ಶಾಕ್‌ ನೀಡಿದ್ದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಇದೀಗ ಮತ್ತೆ ‘ಇಂಧನ ಮತ್ತು ವಿದ್ಯುತ್‌ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ’ (ಎಫ್‌ಪಿಪಿಸಿಎ) ಹೆಸರಿನಲ್ಲಿ ಪ್ರತಿ ಯುನಿಟ್‌ಗೆ ವಿವಿಧ ಎಸ್ಕಾಂಗಳ ಗ್ರಾಹಕರಿಗೆ ಯುನಿಟ್‌ 41 ಪೈಸೆಯಿಂದ 50 ಪೈಸೆವರೆಗೆ ಶುಲ್ಕ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಪರಿಷ್ಕೃತ ಶುಲ್ಕವನ್ನು ಜುಲೈನಿಂದ ಸಂಗ್ರಹಿಸಲು ತಿಳಿಸಿರುವುದರಿಂದ ‘ಗೃಹ ಜ್ಯೋತಿ’ ಫಲಾನುಭವಿ ಗ್ರಾಹಕರು ಈ ಹೊರೆಯಿಂದ ಪಾರಾಗಲಿದ್ದಾರೆ ಎಂದು ಕೆಇಆರ್‌ಸಿ ಮೂಲಗಳು ತಿಳಿಸಿವೆ. 

ಹೊಸ ಸರ್ಕಾರ ಬರ್ತಿದ್ದಂಗೆ ಪೊಲೀಸ್ ಇಲಾಖೆಗೆ ಆನೆ ಬಲ: 2 ಹಂತಗಳಲ್ಲಿ 454 ಹುದ್ದೆಗಳ ನೇಮಕ

ಆದರೆ, ವಾಣಿಜ್ಯ ಸಂಪರ್ಕ ಹೊಂದಿರುವವರು ಹಾಗೂ ಗೃಹಜ್ಯೋತಿ ಫಲಾನುಭವಿಗಳು ಅಲ್ಲದ ಗ್ರಾಹಕರಿಗೆ ಶುಲ್ಕ ಹೊರೆ ಬೀಳಲಿದೆ. ಮೇ 12 ರಂದು ಏಪ್ರಿಲ್‌ 1 ರಿಂದ ಪೂರ್ವಾನ್ವಯವಾಗುವಂತೆ ಈಗಾಗಲೇ ಪ್ರತಿ ಯುನಿಟ್‌ಗೆ 70 ಪೈಸೆಯಷ್ಟುವಿದ್ಯುತ್‌ ದರ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಏಪ್ರಿಲ್‌ ಹಾಗೂ ಮೇ ತಿಂಗಳ ಎರಡೂ ಹೆಚ್ಚುವರಿ ಶುಲ್ಕವನ್ನು ಜೂನ್‌ ತಿಂಗಳಲ್ಲಿ ವಿಧಿಸಲಾಗುತ್ತದೆ. ಹೀಗಾಗಿ ಜೂನ್‌ ತಿಂಗಳ ಬಳಕೆಗೆ ಜುಲೈನಲ್ಲಿ ಬರುವ ಬಿಲ್‌ನಲ್ಲಿ ‘ಗೃಹಜ್ಯೋತಿ’ ಫಲಾನುಭವಿಗಳಲ್ಲದವರಿಗೆ ಪ್ರತಿ ಯುನಿಟ್‌ಗೆ 1.90 ರು.ಗಳಷ್ಟುಹೆಚ್ಚುವರಿ ಶುಲ್ಕ ಬೀಳಲಿದೆ.

ಏನಿದು ಶುಲ್ಕ ಹೆಚ್ಚಳ ಆದೇಶ?: ಜನವರಿ 1ರಿಂದ ಮಾಚ್‌ರ್‍ 31ರವರೆಗೆ ಇಂಧನ ಇಲಾಖೆಗೆ ಹೊರೆಯಾಗಿರುವ ಹೆಚ್ಚುವರಿ ಇಂಧನ ಹಾಗೂ ವಿದ್ಯುತ್‌ ಖರೀದಿ ವೆಚ್ಚವನ್ನು ಏಪ್ರಿಲ್‌ನಿಂದ ಜೂನ್‌ ನಡುವಿನ ಮೂರು ತಿಂಗಳ ಅವಧಿಯಲ್ಲಿ ಗ್ರಾಹಕರಿಂದ ಸಂಗ್ರಹಿಸಬೇಕಾಗಿತ್ತು. ಈ ಸಂಬಂಧ ಮಾ.13ರಂದೇ ಆದೇಶ ಹೊರಡಿಸಿದ್ದ ಕೆಇಆರ್‌ಸಿಯು ಎಸ್ಕಾಂಗಳ ಗ್ರಾಹಕರಿಂದ 3 ತಿಂಗಳ ಅವಧಿಗೆ ಸೀಮಿತವಾಗಿ ಬರೋಬ್ಬರಿ ಪ್ರತಿ ಯುನಿಟ್‌ಗೆ 101 ಪೈಸೆವರೆಗೂ ಹೆಚ್ಚುವರಿ ಶುಲ್ಕ ಸಂಗ್ರಹಿಸಲು ಆದೇಶಿಸಿತ್ತು.

ಜೋಯಿಡಾದಲ್ಲಿ ಕೊಂಕಣಿ ಕಲಿತ ರಿಷಬ್‌ ಶೆಟ್ಟಿ: ಕುಣಬಿ ಜನರ ಜತೆ ಭಾಷಾಭ್ಯಾಸ

ಆದರೆ, ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ತಾಂತ್ರಿಕ ಕಾರಣಗಳನ್ನು ನೀಡಿ ದರ ಹೆಚ್ಚಳ ಅನುಷ್ಠಾನಗೊಳಿಸಿರಲಿಲ್ಲ. ಹೀಗಾಗಿ ಜನವರಿಯಿಂದ ಮಾ.31ರವರೆಗಿನ ಹೊಂದಾಣಿಕೆ ಶುಲ್ಕವನ್ನು ಜುಲೈನಿಂದ ಸೆಪ್ಟೆಂಬರ್‌ವರೆಗೆ ಪ್ರತಿ ತಿಂಗಳು ಯುನಿಟ್‌ಗೆ 101 ಪೈಸೆಯಂತೆ ಹೆಚ್ಚುವರಿ ಶುಲ್ಕ ವಿಧಿಸಿ ಸಂಗ್ರಹಿಸಬೇಕಾಗಿತ್ತು. ಇದು ಹೊರೆಯಾಗುವ ಸಾಧ್ಯತೆಯಿರುವುದರಿಂದ ಬೆಸ್ಕಾಂ ಜುಲೈನಿಂದ ಸೆಪ್ಟೆಂಬರ್‌ವರೆಗೆ ಹಾಗೂ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಎರಡು ತ್ರೈಮಾಸಿಕಗಳಲ್ಲಿ ತಲಾ ಅರ್ಧದಷ್ಟುಶುಲ್ಕ ಸಂಗ್ರಹಿಸಲು ಅವಕಾಶ ಮಾಡಿಕೊಡುವಂತೆ ಕೆಇಆರ್‌ಸಿಗೆ ಮನವಿ ಮಾಡಿತ್ತು. ಅದರಂತೆ ಕೆಇಆರ್‌ಸಿಯು ಶನಿವಾರ ಆದೇಶ ಹೊರಡಿಸಿದೆ.

Latest Videos
Follow Us:
Download App:
  • android
  • ios