Asianet Suvarna News Asianet Suvarna News

ಹಾಸನಾಂಬೆ ದೇವಿ ದರ್ಶನಕ್ಕೆ ನಿಂತವರಿಗೆ ಕರೆಂಟ್‌ ಶಾಕ್‌, ಕಾಲ್ತುಳಿತ, 17 ಮಂದಿ ಅಸ್ವಸ್ಥ

ಹಾಸನಾಂಬೆ ದೇಗುಲ ಬಳಿ ವಿದ್ಯುತ್‌ ಅವಘಡದಿಂದ  ಕರೆಂಟ್‌ ಶಾಕ್‌ ಹೊಡೆದು ನೂಕು ನುಗ್ಗಲು ಕಾಲ್ತುಳಿತ. ಹಲವರು ಅಸ್ವಸ್ಥ.

stampede in hasanamba temple darshan after  electric shock gow
Author
First Published Nov 10, 2023, 2:22 PM IST

ಹಾಸನ (ನ.10) : ಹಾಸನಾಂಬೆ ದೇಗುಲ ಬಳಿ ವಿದ್ಯುತ್‌ ಅವಘಡದಿಂದ  ಕರೆಂಟ್‌ ಶಾಕ್‌ ಹೊಡೆದು ನೂಕು ನುಗ್ಗಲು ಆದ ಘಟನೆ ನಡೆದಿದೆ. ಘಟನೆ ಬಳಿಕ ಧರ್ಮ‌ ದರ್ಶನ ಸರತಿ ಸಾಲಿನ ಬಳಿ ಮಹಿಳೆಯರ ನರಳಾಟ ನಡೆಸುತ್ತಿರುವ ವಿಡಿಯೋ ವೈರಲ್‌ ಆಗಿದೆ. 

ಕೆಲವರಿಗೆ ಕರೆಂಟ್ ಶಾಕ್ ಆಗಿ ಕುಸಿದು ಬಿದ್ದು ಅವಾಂತರ ಸೃಷ್ಟಿಯಾಯ್ತು. ಒಬ್ಬರ ಮೇಲೆ ಒಬ್ಬರು ಬಿದ್ದು ಮಹಿಳೆಯರು ಓಡಿದರು. ಈ ವೇಳೆ  ಕೆಲವರನ್ನು ಸ್ಥಳೀಯರು ಹೊರಗೆಳೆದು ತಂದರು.

ವರ್ಷಕ್ಕೊಮ್ಮೆ ತೆರೆವ ಹಾಸನಾಂಬೆ ದೇಗುಲದಲ್ಲಿ ನ.14 ವರೆಗೆ ದರ್ಶನ

ಎಲ್‌ಇಡಿ ಗೆ ಸ್ಕ್ರೀನ್‌ ಅಳವಡಿಕೆ ಮಾಡಲಾಗಿತ್ತು. ಈ ವೇಳೆ ತಂತಿಯಿಂದ  ಘಟನೆ ನಡೆದಿದ್ದು, ಅದು ಅಲ್ಲಿದ್ದ ಕಬ್ಬಿಣದ ಬ್ಯಾರಿಕೇಡ್‌ನಲ್ಲಿ ಸಣ್ಣದಾಗಿ ಹರಿದಿದೆ. ಇಬ್ಬರಿಗೆ ಕರೆಂಟ್‌ ಶಾಕ್‌ ಆಯ್ತು. ತಕ್ಷಣ  ಸುದ್ದಿ ಹರಡಿತು. ಇದನ್ನು ಕೇಳಿ ಗಾಬರಿಗೊಂಡ ಭಕ್ತಾದಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಮಹಿಳೆಯರು, ವೃದ್ಧರು ಸೇರಿ ಭಕ್ತರು ಎದ್ನೋ ಬಿದ್ನೋ ಎಂಬಂತೆ ಭಯಗೊಂಡು ಓಡಿ ಹೋಗಿದ್ದಾರೆ. 

ದೊಡ್ಡ ಪ್ರಮಾಣದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಸುದ್ದಿ ಕೇಳಿ ಶಾಕ್‌ ಅಲ್ಲಿಂದ ಹೊರಬರಲು ಕಾಲ್ತುಳಿತ, ತಳ್ಳಾಟ ನೂಕಾಟ ನಡೆಯಿತು. ಅದರಲ್ಲಿ  17 ಮಂದಿ  ಆಘಾತದಿಂದ ಅಸ್ವಸ್ಥರಾದರು ಎಂದು ವರದಿ ತಿಳಿಸಿದೆ.

ವರ್ಷದ ಬಳಿಕ ಬಾಗಿಲು ತೆರೆದ ಹಾಸನಾಂಬೆ ದೇಗುಲ, ನ.14ರವರೆಗೆ ದೇವರ ದರ್ಶನ

ಹಾಸನಾಂಬೆ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಬಂದು ಈ ಅವಾಂತರ ಸೃಷ್ಟಿಯಾಯ್ತು. ಇನ್ನೇನು ಕೆಲವೇ ದಿನಗಳು ದರ್ಶನಕ್ಕೆ ಅವಕಾಶ ಇದ್ದು ದಿನಗಟ್ಟಲೆ ಕಾದರೂ ಹಾಸನಾಂಬೆ ದರ್ಶನ ಸಿಗುತ್ತಿಲ್ಲ. ಹಾಸನದ ಸಂತೇಪೇಟೆಯ ಧರ್ಮ ದರ್ಶನ ಸರತಿ ಸಾಲಿನ ಬಳಿ ಘಟನೆ ನಡೆದಿದ್ದು, ಯಾವುದೇ ಭಯ ಪಡುವ ಆತಂಕ ಇಲ್ಲ. ಈಗ ಮತ್ತೆ ದರ್ಶನ ಆರಂಭವಾಗಿದೆ.

Follow Us:
Download App:
  • android
  • ios