ಸಿದ್ಧಾಂತದಲ್ಲಿ ಪಾಂಡಿತ್ಯ ಪಡೆದಿದ್ದ ವಿಶ್ವನಂದನ ತೀರ್ಥ ಶ್ರೀಪಾದರು ವಿಧಿವಶ!
ಹನಸೋಗೆ. ಶ್ರೀ ವಿಶ್ವನಂದನ ತೀರ್ಥ ಶ್ರೀಪಾದರು ಗುರುವಾರ ಮಧ್ಯರಾತ್ರಿ ಶ್ರೀ ಹರಿಪಾದ ಸೇರಿದರು. 22ನೇ ಚಾತುರ್ಮಾಸ್ಯವ್ರತ ಆಚರಿಸುತ್ತಿದ್ದ ಶ್ರೀಪಾದರು ತಮ್ಮ 50ನೇ ವರ್ಷದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಸನ್ಯಾಸ ದೀಕ್ಷೆ ಪಡೆದಿದ್ದರು.

ಹನಸೋಗೆ. ಶ್ರೀ ವಿಶ್ವನಂದನ ತೀರ್ಥ ಶ್ರೀಪಾದರು ಗುರುವಾರ ಮಧ್ಯರಾತ್ರಿ ಶ್ರೀ ಹರಿಪಾದ ಸೇರಿದರು. 22ನೇ ಚಾತುರ್ಮಾಸ್ಯವ್ರತ ಆಚರಿಸುತ್ತಿದ್ದ ಶ್ರೀಪಾದರು ತಮ್ಮ 50ನೇ ವರ್ಷದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಸನ್ಯಾಸ ದೀಕ್ಷೆ ಪಡೆದಿದ್ದರು. ಪ್ರತಿನಿತ್ಯ ಕಾವೇರಿ ನದಿಯಲ್ಲಿ ತ್ರಿಕಾಲ ಸ್ನಾನ, ಜಪ, ತಪ ಅನುಷ್ಠಾನ ನಿರತರಾಗಿದ್ದ ಶ್ರೀಪಾದರು. ಮೈಸೂರು ಶ್ರೀ ದೇವೇಂದ್ರ ತೀರ್ಥ ಶ್ರೀಪಾದರಲ್ಲಿ ಅಧ್ಯಯನ ನಡೆಸಿದ್ದರು. ಸಿದ್ಧಾಂತದಲ್ಲಿ ಪಾಂಡಿತ್ಯ, ದೀಕ್ಷೆ, ಅನುಷ್ಠಾನದಲ್ಲಿ ಪರಮ ನಿಷ್ಠೆ ಅವರ ವಿಶೇಷ.
ಶ್ರೀಹರಿಪದವನ್ನು ಸೇರಿರುವ ಶ್ರೀವಿಶ್ವನಂದನತೀರ್ಥರ ಪುಣ್ಯಸ್ಮರಣೆಯಲ್ಲಿ: ಲೌಕಿಕವಾಗಿ ಒಬ್ಬ ಮನುಷ್ಯ ಗಳಿಸಬಹುದಾದ ಅತ್ಯುನ್ನತ ವಿದ್ಯೆ, ವಿದ್ಯೆಯ ಫಲಿತವಾದ ಸಾಮಾಜಿಕ ಸ್ಥಾನಮಾನಗಳು ಇವೆಲ್ಲವನ್ನೂ ತೊರೆದು, ತುರೀಯಾಶ್ರಮವನ್ನು ಸ್ವೀಕರಿಸಿ ನಿಜವಾದಂತಹ ಅರ್ಥದಲ್ಲಿ ವಿರಕ್ತನಂತೆ ಬದುಕುವುದು ಸಾಧಾರಣವಾದಂತಹ ಸಂಗತಿಯಲ್ಲ. ತಮ್ಮ ಕಠಿಣವಾದಂತಹ ತಪಶ್ಚರ್ಯೆಯಿಂದ ಈ ರೀತಿಯ ಆಶ್ರಮಧರ್ಮ ಪಾಲನೆ ಸಾಧ್ಯವೆ? ಎಂಬ ಅಚ್ಚರಿಯನ್ನೂ ಮೂಡಿಸುತ್ತಿರುವ ಮಹನೀಯರು ಶ್ರೀವಿಶ್ವನಂದನ ತೀರ್ಥರು.
Chikkamagaluru: ಪ್ರಸಿದ್ಧ ಪ್ರವಾಸಿ ತಾಣ ವಸಿಷ್ಠ ತೀರ್ಥಕ್ಕೆ ಹೋಗಲುಬೇಕು ಡಬಲ್ ಗುಂಡಿಗೆ!
ಶ್ರೀರಾಮಮೂರ್ತಿ ಆಚಾರ್ಯ ಹಾಗೂ ಶ್ರೀಮತಿ ಸುಶೀಲಮ್ಮನವರ ಮಗನಾಗಿ 14-04-1951 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶ್ರೀರಘುನಂದನಾಚಾರ್ಯರು ಮೂಲತ: ಕಮ್ಯೂನಿಕೇಷನ್ ಇಂಜಿನಿಯರ್, ನಂತರ ಎಂ.ಎಸ್.ಸಿ ಪದವಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನಿಂದ ವಿಖ್ಯಾತ ಪ್ರಾಧ್ಯಾಪಕ ಡಾ.ಜಿ.ವಿ.ಆನಂದ್ ರವರ ಮಾರ್ಗದರ್ಶನದಲ್ಲಿ ಭೌತಶಾಸ್ತ್ರದ String Theory ಕುರಿತ ಫ್ರೌಢ ಅಧ್ಯಯನಕ್ಕೆ ಪಿ.ಎಚ್.ಡಿ.ಪದವಿ, ವಿದ್ಯಾಭ್ಯಾಸದ ತರುವಾಯ ಪ್ರತಿಷ್ಠಿತ IISc ನಲ್ಲಿ ನಾಲ್ಕು ವರ್ಷಗಳ ಕಾಲ ಉದ್ಯೋಗ. ಭೌತಶಾಸ್ತ್ರದಲ್ಲಿ ಉನ್ನತ ವ್ಯಾಸಂಗದ ನಂತರ ಅಧ್ಯಾತ್ಮದ ಸೆಳೆತ. ಮೈಸೂರಿನ ಮಹಾಸಾಧಕ ಯತಿವರೇಣ್ಯ ಶ್ರೀದೇವೇಂದ್ರತೀರ್ಥರ ಸಂಪರ್ಕ.
ಶ್ರೀದೇವೇಂದ್ರತೀರ್ಥರ ಸಂಪರ್ಕದ ಸೆಳೆತ ಎಷ್ಟು ತೀವ್ರವಾಗಿತ್ತೆಂದರೆ ಲೌಕಿಕ ಉದ್ಯೋಗವನ್ನು ತೊರೆದು ಡಾ. ರಘುನಂದನಾಚಾರ್ಯರು ಆಧ್ಯಾತ್ಮದ ಕಡೆ ಗಮನ ಹರಿಸಿದರು. ಶ್ರೀಚಿತ್ರದುರ್ಗ ಪ್ರಾಣೇಶಾಚಾರ್ ಹಾಗೂ ಲೈಬ್ರರಿ ಕೃಷ್ಣಾಚಾರ್ಯರ ಬಳಿ ಅಧ್ಯಾತ್ಮದ ಪ್ರಾರಂಭಿಕ ಪಾಠಗಳನ್ನು ಅಭ್ಯಸಿಸಿದ ಡಾ. ರಘುನಂದನಾಚಾರ್ಯರು ನಂತರ ಶ್ರೀ ಇನ್ನಾ ಕೃಷ್ಣಾಚಾರ್ಯರ ಬಳಿ ಪೌರೋಹಿತ್ಯ ಹಾಗೂ ಋಗ್ವೇದಗಳ ಅಧ್ಯಯನವನ್ನು ನಡೆಸಿದರು. ಶ್ರೀದೇವೇಂದ್ರತೀರ್ಥರ ಬಳಿಯಲ್ಲಿ ಶ್ರೀವಿಷ್ಣುತತ್ತ್ವನಿರ್ಣಯ, ಶ್ರೀಮನ್ನ್ಯಾಯಸುಧಾ ಮೊದಲಾದ ಉದ್ಗ್ರಂಥಗಳ ಅಧ್ಯಯನ ನಡೆಸಿದ ಡಾ.ರಘುನಂದನಾಚಾರ್ಯರು ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರಲ್ಲಿ ನ್ಯಾಯಾಮೃತ ಕೃತಿಯ ಅಧ್ಯಯನವನ್ನೂ ಹಾಗೂ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರಲ್ಲಿ 'ತಾತ್ಪರ್ಯ ಚಂದ್ರಿಕಾ' ಕೃತಿಯನ್ನು ಅಧ್ಯಯನ ಮಾಡಿದರು.
ಚತುರ್ವೇದಗಳಲ್ಲಿ ಮಹಾಪಂಡಿತರಾದ ಶ್ರೀಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥರಲ್ಲಿ ಯಜುರ್ವೇದ ಹಾಗೂ ಅಥರ್ವವೇದಗಳನ್ನು ಅಧ್ಯಯನ ಮಾಡಿದ ಡಾ.ರಘುನಂದನಾಚಾರ್ಯರು, ಪರಿಪಕ್ವವಾದಂತಹ ಜೀವನಾನುಭವವನ್ನು ಹೊಂದಿ, ತುರೀಯಾಶ್ರಮವನ್ನು ಸ್ವೀಕರಿಸಬೇಕು ಎಂಬ ಪ್ರಬಲವಾದಂತಹ ಇಚ್ಛೆಯಿಂದ ಪ್ರಾತ:ಸ್ಮರಣೀಯರಾದ ಶ್ರೀವಿಶ್ವೇಶತೀರ್ಥ ಶ್ರೀಪಾದಂಗಳವರಿಂದ ಭಾಗವತಕ್ಕೆ 'ವಿಜಯಧ್ವಜೀಯ' ಎಂದೇ ಖ್ಯಾತವಾಗಿರುವ 'ಪದರತ್ನಾವಲಿ' ವ್ಯಾಖ್ಯಾನವನ್ನು ರಚಿಸಿದ ಶ್ರೀವಿಜಯಧ್ವಜತೀರ್ಥರ ದಿವ್ಯಸಾನ್ನಿಧ್ಯದ ಕಣ್ವತೀರ್ಥದ ಪುಣ್ಯಭೂಮಿಯಲ್ಲಿ, ಚೈತ್ರಕೃಷ್ಣನವಮಿ (5-5-2002)ಯಂದು ಶ್ರೀವಿಶ್ವನಂದನತೀರ್ಥರೆಂಬ ಆಶ್ರಮನಾಮದೊಂದಿಗೆ ತುರೀಯಾಶ್ರಮವನ್ನು ಸ್ವೀಕರಿಸಿದರು.
ಶ್ರೀಮಧ್ವರ ಸಮಗ್ರ ಸರ್ವಮೂಲ ಗ್ರಂಥಗಳ ಹಾಗೂ ಸಮಗ್ರಭಾಗವತದ ಉಪದೇಶಪಡೆದಿರುವ ಶ್ರೀವಿಶ್ವನಂದನತೀರ್ಥರು ಶಾಸ್ತ್ರಗಳ ವಿವಿಧ ಶಾಖೆಗಳ ವಿಶಿಷ್ಟವಾದಂತಹ ಅಧ್ಯಯನವನ್ನು ನಡೆಸಿ, ಮೋಕ್ಷಶಾಸ್ತ್ರವೆಂದೇ ಖ್ಯಾತವಾಗಿರುವ 'ಭಾಗವತ' ದ ಅಧ್ಯಯನದಲ್ಲಿ ಸದಾ ನಿರತರಾಗಿದ್ದಾರೆ. 113ಕ್ಕೂ ಹೆಚ್ಚು ಬಾರಿ ಭಾಗವತದ ಮಂಗಳ, ಎರಡೆರಡು ಬಾರಿ ತಾತ್ಪರ್ಯ ನಿರ್ಣಯ, ತತ್ತ್ವನಿರ್ಣಯ ಮಂಗಳಗಳನ್ನು ಮಾಡಿದ್ದಾರೆ. ದಶಮಿ-ದ್ವಾದಶಿಗಳಂದು ಅಲವಣ ವ್ರತ, ನಿರ್ಜಲ ಏಕಾದಶೀ, ಶ್ರವಣೋಪವಾಸ ಮೊದಲಾದಂತಹ ವ್ರತಗಳನ್ನು ಕಿಂಚಿತ್ತೂ ಲೋಪವೂ ಬರದಂತೆ ಆಚರಿಸುತ್ತಾ ಬಂದಿರುವ ಶ್ರೀಗಳು ಧಾರ್ಮಿಕ ವಿಷಯಗಳ ಆಚರಣೆಯ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು ಮತ್ತು ಮಾರ್ಗದರ್ಶನ ನೀಡಬಲ್ಲವರು.
ಪೂಜ್ಯ ಶ್ರೀಪಾದರ ವಾಙ್ಮಯಸೇವೆಯೂ ಅಪೂರ್ವವಾದದ್ದು. ಐದು ಸರ್ಗಗಳನ್ನು ಹೊಂದಿರುವ ಶ್ರೀಭೀಮಸೇನದೇವರ ಮಹಿಮೆಯನ್ನು ವರ್ಣಿಸುವ ಶ್ರೀಭಾರತೀಶವಿಜಯ ( ಈ ಕೃತಿಗೆ ಶ್ರೀವಾದಿರಾಜಗುರುಸಾರ್ವಭೌಮರ ಶ್ರೀರುಗ್ಮಿಣೀಶವಿಜಯದ ಪ್ರೇರಣೆ), ತಮ್ಮ ವಿದ್ಯಾಗುರುಗಳಾದ ಶ್ರೀದೇವೇಂದ್ರತೀರ್ಥರ ನುಡಿಮುತ್ತುಗಳನ್ನು ಸಂಗ್ರಹಿಸಿರುವ ಶ್ರೀದೇವೇಂದ್ರತೀರ್ಥರ ನುಡಿಮುತ್ತುಗಳು, ಶ್ರೀಭಾಗವತ ಪ್ರತಿ ಶ್ಲೋಕಗಳಿಗೆ ಸಂಸ್ಕೃತಭಾಷೆಯಲ್ಲಿ ವ್ಯಾಖ್ಯಾನ, ಭೂಗೋಳ ವರ್ಣನೆ, ಕರ್ನಾಟಕ ವಿಷ್ಣುಸಹಸ್ರನಾಮ,ಶ್ರೀವಿಶ್ವನಂದನ ತೀರ್ಥರ ಆಜ್ಞಾಪತ್ರ, ಸೃಷ್ಟಿವಿಲಾಸ( ಸಂಸ್ಕೃತ, ಕನ್ನಡ), ತರ್ಕಸಂಗ್ರಹ ಖಂಡನಮ್ (ಸಂಸ್ಕೃತ), ಕರ್ನಾಟಕ ಶ್ರೀಭಗವದ್ಗೀತಾ.
ನಮ್ಮನ್ನ ಕೆಣಕಿದರೆ ಮಸೀದಿಯಲ್ಲೂ ಗಣೇಶ ಪ್ರತಿಷ್ಠಾಪಿಸುತ್ತೇವೆ: ಪ್ರಮೋದ್ ಮುತಾಲಿಕ್ ಎಚ್ಚರಿಕೆ
ತಂತ್ರಸಾರ ಸಂಗ್ರಹ (ಸಂಸ್ಕೃತ ಸಂಪಾದನೆ), ದೃಷ್ಟಾಂತತೀರ್ಥ ದೇವೇಂದ್ರತೀರ್ಥರು, ಖಂಡನಾ ತ್ರಯ ಟೀಕಾ ಸಂಗ್ರಹ (ಸಂಸ್ಕೃತ, ಕನ್ನಡ), ಲಯವಿಲಾಸ (ಸಂಸ್ಕೃತ, ಕನ್ನಡ), ಗೋಪೀವಿಲಾಸ, ಕರ್ನಾಟಕ ಮಧ್ವವಿಜಯ, ಶ್ರೀಹಯಗ್ರೀವಸ್ತೋತ್ರರತ್ನಂ, ಪ್ರಮಾಣ ಪ್ರವೇಶ, ತತ್ತ್ವಸಂಗ್ರಹ (ಸಂಸ್ಕೃತ,ಕನ್ನಡ), ಪಿತೃಯಜ್ಞ, ಕರ್ನಾಟಕ ಹರಿವಾಯುಸ್ತುತಿ ಮೊದಲಾದ ಅನೇಕ ಕೃತಿಗಳನ್ನು ಪರಮಪೂಜ್ಯ ಶ್ರೀಗಳಿಂದ ವಾಙ್ಮಯಲೋಕಕ್ಕೆ ಸಮರ್ಪಿತವಾಗಿವೆ. ಕೆ.ಆರ್.ನಗರ ತಾಲ್ಲೂಕಿನ ಹನಸೋಗೆ ಎಂಬ ಗ್ರಾಮದಲ್ಲಿ 'ಮಧ್ವಮಠ'ವನ್ನು ಸ್ಥಾಪಿಸಿ, ಲೌಕಿಕವಾದಂತಹ ಎಲ್ಲಾ ಪ್ರಚಾರಗಳಿಂದ ದೂರ ಉಳಿದು ಶ್ರೀ ವಿಶ್ವೇಶತೀರ್ಥರು ಹಾಗೂ ಶ್ರೀಸತ್ಯಾತ್ಮತೀರ್ಥರು ನೀಡಿರುವ ಅಪೂರ್ವಪ್ರತಿಮೆಗಳನ್ನು ಹಾಗೂ ಶ್ರೀವಿಶ್ವಪ್ರಸನ್ನ ತೀರ್ಥರು ನೀಡಿರುವ ಶ್ರೀಹಯಗ್ರೀವದೇವರ ಪೂಜೆ, ಉಪಾಸನೆಯಲ್ಲಿ ತೊಡಗಿರುವ ಮಹಾಸಾಧಕ ಶ್ರೀವಿಶ್ವನಂದನ ತೀರ್ಥ ಶ್ರೀಪಾದಂಗಳವರು
'ಸಾರಸ್ವತ ಸಾನ್ನಿಧ್ಯ' ಲೇಖನ ಮಾಲಿಕೆಯ ನಲವತ್ತೊಂದನೆಯ ಲೇಖನ- ಶ್ರೀಶ್ರೀವಿಶ್ವನಂದನ ತೀರ್ಥರು
(ಹಿಂದೆ ಸಾರಸ್ವತಸಾನ್ನಿಧ್ಯ-ಲೇಖನಮಾಲಿಕೆಯಲ್ಲಿ ಪ್ರಕಟವಾಗಿದ್ದ ಲೇಖನ)