ನಾಪತ್ತೆ ಆದವರ ಪತ್ತೆಗೆ ವಿಶೇಷ ತಂಡ | 121 ಮಂದಿ ಪತ್ತೆಗೆ 8 ವಲಯದಲ್ಲಿ ತಂಡ ರಚನೆ: ಚೋಳನ್
ಬೆಂಗಳೂರು(ಜ.06): ಬ್ರಿಟನ್‌ನಿಂದ ಬೆಂಗಳೂರು ನಗರಕ್ಕೆ ವಾಪಾಸ್ ಆಗಿ ನಾಪತ್ತೆಯಾದ 121 ಮಂದಿ ಪತ್ತೆಗೆ ಬಿಬಿಎಂಪಿಯ ಎಂಟು ವಲಯಗಳಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಹೇಳಿದ್ದಾರೆ.
"
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟನ್‌ನಿಂದ ಬೆಂಗಳೂರು ನಗರಕ್ಕೆ ಡಿ.1ರಿಂದ 21ವರೆಗೆ 1,426 ಆಗಮಿಸಿದ್ದರು. ಡಿ.30 ರಂದು 553 ಮಂದಿ, ಡಿ.31 ರಂದು 486 ಮಂದಿ ಆಗಮಿಸಿದ್ದಾರೆ. ಈ ಪೈಕಿ ಡಿ.1ರಿಂದ ಡಿ.21 ವರೆಗೆ ಆಗಮಿಸಿದವರಲ್ಲಿ 79 ಮಂದಿ, ಡಿ.30 ರಂದು ಆಗಮಿಸಿದವರ ಪೈಕಿ 28 ಮಂದಿ ಹಾಗೂ ಡಿ.31 ರಂದು ಆಗಮಿಸಿದವರಲ್ಲಿ 14 ಮಂದಿ ಸೇರಿದಂತೆ ಒಟ್ಟು 121 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಪತ್ತೆಗೆ ವಲಯವಾರು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಎರಡು ಮೂರು ದಿನದಲ್ಲಿ ಎಲ್ಲರನ್ನು ಪತ್ತೆ ಮಾಡಲಾಗುವುದು ಎಂದು ವಿವರಿಸಿದರು.
ಕೊರೋನಾ ಲಸಿಕೆ ಹಾಕಲು 1,535 ಸ್ಥಳ ಗುರುತು
ನಾಪತ್ತೆಯಾದವರ ಪೈಕಿ ಐಟಿ-ಬಿಟಿ ಕಂಪನಿಗಳು ಹೆಚ್ಚಾಗಿರುವ ಮಹದೇವಪುರ ಭಾಗದವರು ಹೆಚ್ಚಾಗಿದ್ದಾರೆ. ಬಹುತೇಕ ಉದ್ಯೋಗಿಗಳಾಗಿರಬಹುದು. ಅನೇಕರ ಬ್ರಿಟನ್ ಮೊಬೈಲ್ ಸಂಖ್ಯೆ ಹಾಗೂ ವಿಳಾಸ ನೀಡಿದ್ದಾರೆ. ವಾಟ್ಸಪ್ ಕಾಲ್ ಮೂಲಕ ಸಂಪರ್ಕ ಮಾಡುವ ಪ್ರಯತ್ನವನ್ನು ವಿಶೇಷ ತಂಡದ ಅಧಿಕಾರಿಗಳು ಮಾಡುತ್ತಿದ್ದಾರೆ. ಒಂದು ವೇಳೆ ಪತ್ತೆಯಾಗದಿದ್ದಲ್ಲಿ ಅವರ ವಿವರವನ್ನು ಪೊಲೀಸ್ ಇಲಾಖೆಗೆ ನೀಡಿ ಪಾಸ್‌ಫೋರ್ಟ್ ಅಧಿಕಾರಿಗಳ ಸಹಕಾರದೊಂದಿಗೆ ಪತ್ತೆ ಮಾಡುವ ಪ್ರಯತ್ನ ನಡೆಸಲಿದ್ದಾರೆ ಎಂದು ತಿಳಿಸಿದರು.
"
288 ಮಂದಿಯ ವರದಿ ಬಾಕಿ
ಬ್ರಿಟನ್‌ನಿಂದ ಬಂದವರಲ್ಲಿ ಒಟ್ಟು 2,471 ಜನ ಬೆಂಗಳೂರಿಗೆ ಸೇರಿದ್ದು, ಇವರಲ್ಲಿ 1,860 ಜನರನ್ನು ಸೋಂಕು ಪರೀಕ್ಷೆಗೆ ಲಭ್ಯವಿದ್ದು, ಇವರಲ್ಲಿ 1,572 ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನು 288 ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಬೇಕಿದೆ ಎಂದು ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 6, 2021, 11:18 AM IST