ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ವಿಶೇಷ ರಥ!

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೇನು ದಿನಗಣನೆ ಆರಂಭವಾಗಿದ್ದು. ಸಮ್ಮೇಳನಾಧ್ಯಕ್ಷರಿಗೆ ನಾಲ್ಕು ಲಕ್ಷ ರು. ವೆಚ್ಚದಲ್ಲಿ ವಿಶೇಷ ರಥವೊಂದು ನಿರ್ಮಾಣವಾಗುತ್ತಿದೆ. 

Special Chariot for the Procession of the president of the 87th All India Kannada Sahitya Sammelana gvd

ಮಂಡ್ಯ ಮಂಜುನಾಥ

ಮಂಡ್ಯ (ಡಿ.15): ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೇನು ದಿನಗಣನೆ ಆರಂಭವಾಗಿದ್ದು. ಸಮ್ಮೇಳನಾಧ್ಯಕ್ಷರಿಗೆ ನಾಲ್ಕು ಲಕ್ಷ ರು. ವೆಚ್ಚದಲ್ಲಿ ವಿಶೇಷ ರಥವೊಂದು ನಿರ್ಮಾಣವಾಗುತ್ತಿದೆ. ಅಲ್ಲದೆ ಮೆರವಣಿಗೆಗೆ ಎರಡು ಆನೆಗಳನ್ನು ಕರೆತರುವುದಕ್ಕೂ ಮೆರವಣಿಗೆ ಸಮಿತಿ ಸದಸ್ಯರು ಚಿಂತನೆ ನಡೆಸಿದ್ದಾರೆ. ಮಂಡ್ಯ ವಿಶ್ವವಿದ್ಯಾಲಯದಿಂದ ಆರಂಭವಾಗಲಿರುವ ಮೆರವಣಿಗೆಯಲ್ಲಿ 887 ಮಹಿಳೆಯರು ಪೂರ್ಣಕುಂಭ ಹೊತ್ತು ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರನ್ನು ವಿಶೇಷ ರಥದಲ್ಲಿ ಮುನ್ನಡೆಸಲಿದ್ದಾರೆ. 

ವಿಭಿನ್ನತೆಯಲ್ಲಿ ಏಕತೆಯನ್ನು ಕಾಣುವ ದೃಷ್ಟಿಯಿಂದ ರಾಜ್ಯದ ಜಾನಪದ ಕಲಾತಂಡಗಳ ಜೊತೆಗೆ ಹೊರರಾಜ್ಯಗಳ ಜಾನಪದ ಕಲಾತಂಡಗಳಿಗೂ ಮೆರವಣಿಗೆಯಲ್ಲಿ ಅವಕಾಶ ಕಲ್ಪಿಸಿಕೊಡಲು ನಿರ್ಧರಿಸಿದ್ದು, ಸುಮಾರು ನಾಲ್ಕು ಸಾವಿರ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೆರವಣಿಗೆಯಲ್ಲಿ ೮೭ ಆಟೋಗಳು ಭಾಗವಹಿಸುತ್ತಿದ್ದು, ಅವುಗಳಲ್ಲಿ ಇದುವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರ ಪೀಠ ಅಲಂಕರಿಸಿದವರ ಭಾವಚಿತ್ರಗಳು, ೮ ಆಟೋಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ಅಳವಡಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲು ನಿರ್ಧರಿಸಲಾಗಿದೆ.

ಅಂಬರೀಷ್ ಅವರ ಅವಧಿಯಲ್ಲಿ ಮಾಡಿದ ಕೆಲಸಗಳಿಂದ ನನಗೆ ತೃಪ್ತ ಮನೋಭಾವ: ಸುಮಲತಾ

ಜಿಲ್ಲೆಯ ವೈಶಿಷ್ಟ್ಯತೆ ಮತ್ತು ಹಿರಿಮೆಯನ್ನು ಪ್ರತಿಬಿಂಬಿಸುವ ಆರು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಆಲೆಮನೆ, ಕೆಆರ್‌ಎಸ್ ಅಣೆಕಕಟ್ಟು, ಸಕ್ಕರೆ ಕಾರ್ಖಾನೆ, ಕೃಷಿ ಚಟುವಟಿಕೆಯನ್ನು ಬಿಂಬಿಸುವ ಕಲಾಕೃತಿಗಳನ್ನು ಆಕರ್ಷಕವಾಗಿ ಮೂಡಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಸಮ್ಮೇಳನ ನಡೆಯಲಿರುವ ಸ್ಯಾಂಜೋ ಆಸ್ಪತ್ರೆ ಹಿಂಭಾಗ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮೂರು ಸಮಾನಾಂತರ ವೇದಿಕೆಗಳು ಅಲ್ಲಿ ತಲೆಎತ್ತಲಿವೆ. ಸ್ಯಾಂಜೋ ಆಸ್ಪತ್ರೆ ಹಿಂಭಾಗವಿರುವ 60 ಎಕರೆ ಪ್ರದೇಶದಲ್ಲಿ ಸಮ್ಮೇಳನ ನಡೆಯಲಿದ್ದದು, 1000 ಕ್ಕೂ ಹೆಚ್ಚು ಮಳಿಗೆಗಳು, 450 ವಾಣಿಜ್ಯ ಮಳಿಗೆ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. 

ಸಾರ್ವಜನಿಕ ವಾಹನ ನಿಲುಗಡೆಗೆ ಪ್ರತ್ಯೇಕವಾಗಿ ಸುಮಾರು 20 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ. ಸುಮಾರು ೯ ಕಡೆ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯದ ವ್ಯವಸ್ಥೆಯೂ ಸಿದ್ದವಾಗುತ್ತಿದೆ. ಸ್ಯಾಂಜೋ ಆಸ್ಪತ್ರೆ ಹಿಂಭಾಗ ಕನ್ನಡ ಸಾಹಿತ್ಯ ಸಮ್ಮೇಳನವು ಸುಮಾರು ೬೦ ಎಕರೆ ಪ್ರದೇಶದಲ್ಲಿ ನಡೆಯಲಿದ್ದು, ಮುಖ್ಯ ಪ್ರವೇಶ ದ್ವಾರದಿಂದ ವೇದಿಕೆಯವರೆಗೂ ಸಿದ್ಧತೆ ನಡೆದಿದೆ. ಮುಖ್ಯದ್ವಾರದ ಬಳಿ ನೋಂದಣಿ ಕೌಂಟರ್ ತೆರೆಯಲಾಗುತ್ತಿದೆ.

ಸಮ್ಮೇಳನದ ವೇದಿಕೆ: ಸಮ್ಮೇಳನದಲ್ಲಿ600  ಅಡಿ ಉದ್ದ ಹಾಗೂ 300 ಅಡಿ ಅಗಲದಲ್ಲಿ ಮುಖ್ಯ ವೇದಿಕೆ ನಿರ್ಮಾಣಗೊಳ್ಳುತ್ತಿದೆ. ಸುಮಾರು 35, 000 ರಿಂದ 40,000 ಜನ ಸಭಿಕರು ಕೂರಲು ವ್ಯವಸ್ಥೆ ಮಾಡಲಾಗಿದೆ. ಅದಲ್ಲದೆ 2 ಸಮಾನಂತರ ವೇದಿಕೆಯನ್ನು ೧೧,೦೦೦ ಚದರ ಅಡಿ ಸ್ಥಳದಲ್ಲಿ ನಿರ್ಮಿಸಲಾಗುತ್ತಿದೆ. ನಗರದ ಪ್ರಮುಖ ವೃತ್ತಗಳಲ್ಲಿ ಸಾಹಿತ್ಯ ಸಮ್ಮೇಳನದ ಕಮಾನುಗಳನ್ನು ನಿರ್ಮಿಸಲಾಗಿದ್ದು ಜಿಲ್ಲಾಧಿಕಾರಿ ಕಚೇರಿ ರಸ್ತೆಯುದ್ಧಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದ 20 ಸಾವಿರ ಮನೆಗಳ ಮೇಲೆ ಕನ್ನಡದ ಬಾವುಟ ಹಾರಾಟ ನಡೆಸುವುದಕ್ಕೂ ನಿರ್ಧರಿಸಲಾಗಿದೆ. 

ಅವಧಿ ಪೂರ್ವ ಸರ್ಕಾರ ಬಿದ್ದರೆ ಬಾಕಿ ಅವಧಿಗಷ್ಟೇ ಎಲೆಕ್ಷನ್‌: ಏಕ ಚುನಾವಣೆ ವಿಧೇಯಕ

ಅದಕ್ಕೆ ಪೂರಕವಾಗಿ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ರವಿಕುಮಾರ್‌ ಅವರು ಸ್ವರ್ಣಸಂದ್ರದಲ್ಲಿ ಚಾಲನೆಯನ್ನು ನೀಡಿದ್ದಾರೆ. ಸಮ್ಮೇಳನ ನಡೆಯುವ ಮೂರು ದಿನಗಳ ಕಾಲ ಭೂರಿ ಭೋಜನದ ಮೆನು ಸಿದ್ದವಾಗಿದೆ. ಇದರ ಬೆನ್ನಲ್ಲೇ ಮಾಂಸಾಹಾರ ಭೋಜನ ಸೇರಿಸುವಂತೆ ಬಾಡೂಟ ಪ್ರಿಯರು ಒತ್ತಾಯಿಸುತ್ತಿದ್ದಾರೆ. ನಿತ್ಯವೂ ವಿವಿಧ ಸಮಿತಿಗಳ ಸಭೆ ನಡೆಸಲಾಗುತ್ತಿದ್ದು ಸಮ್ಮೇಳನಕ್ಕೆ ರಂಗು ತುಂಬಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಈಗಾಗಲೇ ಕನ್ನಡ ರಥ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸುತ್ತಾ ಜನರನ್ನು ಆಹ್ವಾನಿಸುತ್ತಿದೆ.

Latest Videos
Follow Us:
Download App:
  • android
  • ios