ಕೋಲಾರ[ಜ.19]: ‘ಆಪರೇಷನ್‌ ಕಮಲ’ದ ಆತಂಕ ರಾಜ್ಯ ಸರ್ಕಾರದಲ್ಲಿ ಮನೆ ಮಾಡಿದ್ದರೂ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಊರಿನಲ್ಲಿ ಹಾಯಾಗಿ ಓಡಾಡಿಕೊಂಡಿದ್ದಾರೆ. ತಮ್ಮೂರು ಅಡ್ಡಗಲ್‌ನ ತೋಟದ ಫಾರಂನಲ್ಲಿ ಪತ್ನಿ ವಿಜಯಮ್ಮ ಜತೆಗೆ ಆರಾಮಾಗಿ ದಿನ ಕಳೆಯುತ್ತಿದ್ದಾರೆ. ತೋಟ, ಕುರಿ, ಕೋಳಿ, ಬೆಳೆಗಳ ಮಧ್ಯೆ ಹಾಯಾಗಿದ್ದಾರೆ.

ಎರಡು ದಿನಗಳ ಹಿಂದೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ರಮೇಶ್‌ ಕುಮಾರ್‌ ಗಂಭೀರವಾದ ಚರ್ಚೆ ನಡೆಸಿದ್ದರು ಎನ್ನಲಾಗಿದೆ. ಇದಾದ ಬಳಿಕ ಶ್ರೀನಿವಾಸಪುರಕ್ಕೆ ತೆರಳಿದ್ದರು ಎನ್ನಲಾಗುತ್ತಿದೆ.