Asianet Suvarna News Asianet Suvarna News

Bengaluru: ತ್ಯಾಜ್ಯದಿಂದ ಹದಗೆಟ್ಟಬಾಹ್ಯಾಕಾಶ: ಡಾ| ಆನಂದನ್‌ ಆತಂಕ

ಬಾಹ್ಯಾಕಾಶದಲ್ಲಿ ಮನುಷ್ಯರು ಬಿಟ್ಟು ಹೋಗುತ್ತಿರುವ ಯಾವುದೇ ಯಂತ್ರೋಪಕರಣಗಳು ಅಥವಾ ಶಿಲಾಖಂಡರಾಶಿಗಳ ಹಾವಳಿ ಹೀಗೆ ಮುಂದುವರೆದರೆ ಶೀಘ್ರದಲ್ಲೇ ಬಾಹ್ಯಾಕಾಶವು ಬೆಂಗಳೂರಿನ ರಸ್ತೆಗಳಿಗಿಂತ ಕೆಟ್ಟದಾಗಿರುತ್ತದೆ ಎಂದು ಇಸ್ರೋ ರಾಡಾರ್‌ ಅಭಿವೃದ್ಧಿ ಪ್ರದೇಶದ ಉಪ ನಿರ್ದೇಶಕ ಡಾ ವಿ.ಕೆ.ಆನಂದನ್‌ ಆತಂಕ ವ್ಯಕ್ತಪಡಿಸಿದ್ದಾರೆ.

Space polluted  by waste says Dr Anandan at bengaluru rav
Author
First Published Jan 29, 2023, 10:48 AM IST

ಬೆಂಗಳೂರು (ಜ.29) : ಬಾಹ್ಯಾಕಾಶದಲ್ಲಿ ಮನುಷ್ಯರು ಬಿಟ್ಟು ಹೋಗುತ್ತಿರುವ ಯಾವುದೇ ಯಂತ್ರೋಪಕರಣಗಳು ಅಥವಾ ಶಿಲಾಖಂಡರಾಶಿಗಳ ಹಾವಳಿ ಹೀಗೆ ಮುಂದುವರೆದರೆ ಶೀಘ್ರದಲ್ಲೇ ಬಾಹ್ಯಾಕಾಶವು ಬೆಂಗಳೂರಿನ ರಸ್ತೆಗಳಿಗಿಂತ ಕೆಟ್ಟದಾಗಿರುತ್ತದೆ ಎಂದು ಇಸ್ರೋ ರಾಡಾರ್‌ ಅಭಿವೃದ್ಧಿ ಪ್ರದೇಶದ ಉಪ ನಿರ್ದೇಶಕ ಡಾ ವಿ.ಕೆ.ಆನಂದನ್‌ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ದಯಾನಂದ ಸಾಗರ್‌ ಸಂಸ್ಥೆಗಳು ಆಯೋಜಿಸಿದ್ದ ಪದವಿ ದಿನಾಚರಣೆ-2023 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ಮಾಹಿತಿ ಪ್ರಕಾರ ಬಾಹ್ಯಾಕಾಶದಲ್ಲಿ ಒಂದು ಸೆಂಟಿಮೀಟರ್‌ಗಿಂತ ಹೆಚ್ಚು ಗಾತ್ರದ 30 ಸಾವಿರ ವಸ್ತುಗಳು (ಶಿಲಾಖಂಡ ರಾಶಿಗಳು) ಸೆಕೆಂಡ್‌ಗೆ 8 ಕಿ.ಮೀ. ವೇಗದಲ್ಲಿ ಚಲಿಸುತ್ತಿವೆ. ಶಿಲಾಖಂಡರಾಶಿಗಳ ಹಾವಳಿ ಮುಂದುವರೆದರೆ ಭವಿಷ್ಯದಲ್ಲಿ ದೊಡ್ಡ ಅಪಾಯಗಳು ಚಿಕ್ಕ ವಸ್ತುಗಳಿಂದ ಉಂಟಾಗುವ ಸಾಧÜ್ಯತೆ ಇದೆ ಎಂದು ಹೇಳಿದರು.

ಭಾರತದ ಗಗನಯಾನಕ್ಕೆ ನಾಸಾ ಸಹಕಾರ: ಕ್ಯಾಥರಿನ್‌ ಲ್ಯೂಡರ್ಸ್‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಕಷ್ಟುಉದ್ಯೋಗಾವಕಾಶಗಳಿವೆ. ಪ್ರಸ್ತುತ ಬಾಹ್ಯಾಕಾಶ ಸನ್ನಿವೇಶದ ಅರಿವು ಮತ್ತು ಬಾಹ್ಯಾಕಾಶ ಸಂಚಾರ ನಿರ್ವಹಣೆಗೆ ಸಂಬಂಧಪಟ್ಟಂತಹ ವ್ಯವಹಾರ .1 ಸಾವಿರ ಕೋಟಿ (10 ಬಿಲಿಯನ್‌ ಡಾಲರ್‌)ನಷ್ಟಿದೆ ಎಂದು ಅಂದಾಜಿಸಲಾಗಿದೆ. ಇದು 2023ರ ವೇಳೆಗೆ 125 ಬಿಲಿಯನ್‌ ಡಾಲರ್‌ಗೆ ಹೆಚ್ಚಳವಾಗಬಹುದು. ಇದು ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ನವೋದ್ಯಮ ಮಾಡಲು ಸಾಕಷ್ಟುಅವಕಾಶಗಳನ್ನು ಒದಗಿಸುತ್ತದೆ. ಬಾಹ್ಯಾಕಾಶ ಕ್ಷೇತ್ರದ ವ್ಯವಹಾರದಿಂದ, ನಾವು ಭಾರತದಲ್ಲಿ ಶೇ.10ರಷ್ಟುವ್ಯವಹಾರಗಳನ್ನು ನಿರೀಕ್ಷಿಸುತ್ತಿದ್ದೇವೆ. ಏಕೆಂದರೆ ಪ್ರಸ್ತುತ ಅದು ಕೇವಲ ಶೇ.1ರಿಂದ 2ರಷ್ಟಿದೆ ಎಂದರು.

ಕಾರ್ಯಕ್ರಮದಲ್ಲಿ ದಯಾನಂದ್‌ ಸಾಗರ್‌ ಸಂಸ್ಥೆಗಳ ಅಧ್ಯಕ್ಷ ಡಾ ಡಿ.ಹೇಮಚಂದ್ರ ಸಾಗರ್‌, ದಯಾನಂದ ಸಾಗರ್‌, ವಿಶ್ವವಿದ್ಯಾಲಯದ ಕುಲಪತಿ ಡಾ ಡಿ.ಪ್ರೇಮಚಂದ್ರ ಸಾಗರ್‌ ಉಪಸ್ಥಿತರಿದ್ದರು.

ವರ್ಷಾಂತ್ಯದ ಒಳಗೆ ಡಿಸ್ಯಾಟ್‌ ಉಡಾವಣೆ

ದಯಾನಂದ ಸಾಗರ್‌ ಉಪಗ್ರಹದ ವಿನ್ಯಾಸ, ಅಭಿವೃದ್ಧಿ ಮತ್ತು ಉಡಾವಣೆಗಾಗಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರವು ದಯಾನಂದ ಸಾಗರ್‌ ವಿಶ್ವವಿದ್ಯಾಲಯ ಮತ್ತು ಧ್ರುವ ಸ್ಪೇಸ್‌ನೊಂದಿಗೆ ಕೈಜೋಡಿಸುತ್ತದೆ. ಈ ಯೋಜನೆಯು 2024-25ರಲ್ಲಿ ಮತ್ತೊಂದು ಉಪಗ್ರಹ ಉಡಾವಣೆಗಾಗಿ ಸ್ಪಷ್ಟಮಾರ್ಗ ನಕ್ಷೆಯೊಂದಿಗೆ ಈ ವರ್ಷದ ಅಂತ್ಯದ ವೇಳೆಗೆ ಡಿಸ್ಯಾಟ್‌ ಬಾಹ್ಯಾಕಾಶ ಮಿಷನನ್ನು ಪ್ರಾರಂಭಿಸುತ್ತದೆ ಎಂದು ಡಾ ವಿ.ಕೆ.ಆನಂದನ್‌ ಹೇಳಿದರು.

1.4 ಮಿಲಿಯನ್‌ ಮೈಲಿ ಪ್ರಯಾಣ ಮಾಡಿ ಭೂಮಿಗೆ ವಾಪಾಸಾದ ಬಾಹ್ಯಾಕಾಶ ನೌಕೆ!

ಭಾರತೀಯ ಯಂತ್ರೋಪಕರಣ ತಯಾರಕರ ಸಂಘದ ಅಧ್ಯಕ್ಷ ರವಿ ರಾಘವನ್‌ ಮಾತನಾಡಿ, ಭಾರತೀಯ ಕಂಪನಿಗಳು ಅತ್ಯಂತ ಸ್ಪರ್ಧಾತ್ಮಕ ಮತ್ತು ನವೀನ ಉತ್ಪನ್ನಗಳ ತಯಾರಿಕೆಯಲ್ಲಿ ಮುಂದಿವೆ. ಹೀಗಾಗಿ ಪ್ರಸ್ತುತ ಜಿಡಿಪಿಯ ಶೇ.17 ಕೊಡುಗೆ ನೀಡುತ್ತಿರುವ ಉತ್ಪಾದನಾ ವಲಯವು ಶೀಘ್ರದಲ್ಲೇ ಶೇ.25ಕ್ಕಿಂತ ಹೆಚ್ಚು ಕೊಡುಗೆ ನೀಡಲಿದೆ. ಉತ್ಪಾದನೆಯು ಆಸಕ್ತಿದಾಯಕ ವೃತ್ತಿಯಾಗಿದ್ದು, ಯುವಜನರು ಈ ಉದ್ಯಮದ ಕಡೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದರು.

Follow Us:
Download App:
  • android
  • ios