Asianet Suvarna News Asianet Suvarna News

ರಾಜ್ಯದಲ್ಲಿ ತೈಲ ಬೆಲೆ ಶೀಘ್ರ ಇಳಿಕೆ ಕಾಣುತ್ತೆ

  • ವಿದೇಶಿ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ ಹಾಗೂ ತೆರಿಗೆ ಸಂಗ್ರಹದ ಮೂಲಕ ಅಭಿವೃದ್ಧಿಗೆ ಸಾಥ್‌ 
  • ರಾಜ್ಯದಲ್ಲಿ ತೈಲ ಬೆಲೆ ಹೆಚ್ಚಳವಾಗಿ ಮುಂದಿನ ದಿನಗಳಲ್ಲಿ ಇದು ಇಳಿಕೆ ಕಾಣುವ ಸಾಧ್ಯತೆ
soon fuel price will fall down says ashwath narayan snr
Author
Bengaluru, First Published Oct 11, 2021, 8:13 AM IST

ಬೀದರ್‌ (ಅ.11):    ವಿದೇಶಿ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ  ಹೆಚ್ಚಳ ಹಾಗೂ ತೆರಿಗೆ (Tax) ಸಂಗ್ರಹದ ಮೂಲಕ ಅಭಿವೃದ್ಧಿಗೆ ಸಾಥ್‌ ನೀಡುವುದರ ವಿಚಾರವಾಗಿ ರಾಜ್ಯದಲ್ಲಿ ತೈಲ ಬೆಲೆ (Fuel Price) ಹೆಚ್ಚಳವಾಗಿ ಮುಂದಿನ ದಿನಗಳಲ್ಲಿ ಇದು ಇಳಿಕೆ ಕಾಣುವ ಸಾಧ್ಯತೆಗಳಿವೆ. ದೇಶದ ಜಿಡಿಪಿ (GDP) ಪ್ರಮಾಣ ಉತ್ತಮವಾಗಿರುವದು ಸಂತಸದ ಸಂಗತಿ. ತೈಲ ಬೆಲೆ ಹೆಚ್ಚಳದಿಂದ ಬೆಲೆ ಏರಿಕೆಯ ಆತಂಕವಿದೆ. ಆದರೂ ದೇಶದ ಜನತೆ ಅಭಿವೃದ್ಧಿಗಾಗಿ ಸಾಥ್‌ ನೀಡುವ ಭರವಸೆ ನಮಗೆಲ್ಲರಿಗೆ ಇದೆ ಎಂದು ಶಿಕ್ಷಣ ಸಚಿವ ಡಾ. ಅಶ್ವಥ್‌ನಾರಾಯಣ (Dr CN Ashwath narayan) ತಿಳಿಸಿದರು.
 
ಬೀದರ್‌ನಲ್ಲಿ (Bidar) ಭಾನುವಾರ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿ ಹೊಸ ಭರವಸೆ ನಿಡಿದರು.

ರಾಜ್ಯದಲ್ಲಿ ಐಟಿ ರೇಡ್‌ಗೆ ಬಣ್ಣ ಕಟ್ಟುವುದು ಬೇಡ:  ರಾಜ್ಯದಲ್ಲಿ ಐಟಿ ರೇಡ್‌ಗೆ (IT Raid) ಬಣ್ಣ ಕಟ್ಟುವುದು ಬೇಡ, ಎಚ್‌ಡಿ ಕುಮಾರಸ್ವಾಮಿ (HD kumaraswamy) ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅನಗತ್ಯ ಚರ್ಚೆಗಳನ್ನು ಎಳೆದು ತರುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್‌ನಾರಾಯಣ ತಿರುಗೇಟು ನೀಡಿದರು.

ಯಡಿಯೂರಪ್ಪ (BS Yediyurappa) ಆಪ್ತರ ಮೇಲೆ ಐಟಿ ದಾಳಿ ಮಾಡಿಸಿ ಅವರನ್ನು ಬಿಜೆಪಿಯ ಹಿಡಿತದಲ್ಲಿಟ್ಟುಕೊಳ್ಳುವದು ಎಂಬ ಆರೋಪ ಹುರುಳಿಲ್ಲದ್ದು. ಈ ಹಿಂದೆ ಇತರೆ ಪಕ್ಷಗಳ ಮೇಲವರ ದಾಳಿ ನಡೆದಾಗ ರಾಜಕೀಯ ಪಿತೂರಿ ಅಂದ್ರು ಈಗ ವರಸೆ ಬದಲಾಯಿಸಿದ್ದಾರೆ ಎಂದರು.

ಎಚ್‌ಡಿಕೆ ಯೋಚಿಸಿ ಮಾತು ಆಡಬೇಕು : ಸಚಿವ ಹಾಲಪ್ಪ

ರಾಜ್ಯದ ಆಡಳಿತ ಆರ್‌ಎಸ್‌ಎಸ್‌ (RSS) ಹಿಡಿತದಲ್ಲಿದೆ ಎಂದು ಎಚ್‌ಡಿಕೆ ಹೇಳಿಕೆ ಬೇಸರ ತರಿಸುವಂಥದ್ದು, ಆರ್‌ಎಸ್‌ಎಸ್‌ನಲ್ಲಿ ಎಲ್ಲ ಪಕ್ಷದವರೂ ಇದ್ದಾರೆ. ಅದು ರಾಜಕೀಯ ಪಕ್ಷವಲ್ಲ ಎಂಬುವದನ್ನು ಅರಿತುಕೊಳ್ಳಲಿ. ಇಲ್ಲದ ಹೇಳಿಕೆ ಕೊಡುವುದರಿಂದ ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಯಡಿಯೂರಪ್ಪ ನಮ್ಮ ಅಗ್ರಮಾನ್ಯ ನಾಯಕರು. ಅವರ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನ ಮಂತ್ರಿಗಳು (Prime minister) ಸಹ ಹಾಡಿ ಹೊಗಳಿದ್ದಾರೆ. ಅವರು ಪಕ್ಷದ ಏಳ್ಗೆಗೆ ಹಗಲಿರುಳು ದುಡಿಯುವ ನಾಯಕರು ಎಂದು ಸಚಿವರು ಹೇಳಿದರು.

ಬೆಂಗಳೂರು ಉಸ್ತುವಾರಿ ಸಿಎಂ ಬಗಹರಿಸ್ತಾರೆ:  ಬೆಂಗಳೂರು (Bengaluru)  ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ನಡೆದಿರುವ ಪೈಪೋಟಿ ಸಹಜ. ಈ ಬಗ್ಗೆ ಮುಖ್ಯಮಂತ್ರಿಗಳು ಯೋಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಆರ್‌.ಅಶೋಕ ಹಾಗೂ ವಿ.ಸೋಮಣ್ಣ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ. ಅಷ್ಟಕ್ಕೂ ಮುಖ್ಯಮಂತ್ರಿ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಬೇಕಾಗುತ್ತದೆ ಎಂದರು.

Follow Us:
Download App:
  • android
  • ios