ಮಳೆಗಾಲದಲ್ಲಿ ಕಲ್ಲಿದ್ದಲು ಗಣಿಗಳು ಸ್ಥಗಿತಗೊಂಡಿರುವುದಂದ ಉಷ್ಣವಿದ್ಯುತ್‌ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ಕೊರತೆ  ಮೂರ್ನಾಲ್ಕು ದಿನಗಳಲ್ಲೇ ಈ ಸಮಸ್ಯೆ ಬಗೆಹರಿಯಲಿದೆ ಎಂಬುದಾಗಿ ಇಂಧನ ಸಚಿವ ಸುನಿಲ್‌ ಕುಮಾರ್‌

ಉಡುಪಿ (ಅ.09):  ಮಳೆಗಾಲದಲ್ಲಿ (Rainy season) ಕಲ್ಲಿದ್ದಲು ಗಣಿಗಳು ಸ್ಥಗಿತಗೊಂಡಿರುವುದಂದ ಉಷ್ಣವಿದ್ಯುತ್‌ ಸ್ಥಾವರಗಳಿಗೆ (Thermal Power Plant) ಕಲ್ಲಿದ್ದಲು (Coal) ಪೂರೈಕೆ ಕೊರತೆಯಾಗಿದ್ದು ಮೂರ್ನಾಲ್ಕು ದಿನಗಳಲ್ಲೇ ಈ ಸಮಸ್ಯೆ ಬಗೆಹರಿಯಲಿದೆ ಎಂಬುದಾಗಿ ಇಂಧನ ಸಚಿವ ಸುನಿಲ್‌ ಕುಮಾರ್‌ (Sunil Kumar) ತಿಳಿಸಿದ್ದಾರೆ.

ಕಲ್ಲಿದ್ದಲು ಅಭಾವ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಶಾಖೋತ್ಪನ್ನ ವಿದ್ಯುತ್‌ ಘಟಕಗಳಲ್ಲಿ ವಿದ್ಯುತ್‌ ಉತ್ಪಾದನಾ (Electricity) ಕಾರ್ಯಕ್ಕೆ ಸಮಸ್ಯೆಯಾಗಿರುವ ಬಗ್ಗೆ ನಗರದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು. ನಾನು ಮತ್ತು ಮುಖ್ಯಮಂತ್ರಿಗಳು ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇವೆ, ಅಧಿಕಾರಿಗಳು ಕೂಡ ನಿರಂತರ ಸಂಪರ್ಕದಲ್ಲಿದ್ದು ಶೀಘ್ರ ಕಲ್ಲಿದ್ದಲು ಪೂರೈಕೆಗೆ ವ್ಯವಸ್ಥೆ ಮಾಡುತ್ತೇವೆ. ರಾಜ್ಯದ ಜನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು.

ದೇಶದಲ್ಲಿ ಕಲ್ಲಿ​ದ್ದಲು ಕೊರತೆ: ವಿದ್ಯುತ್‌ ಉತ್ಪಾ​ದನೆ, ಪೂರೈಕೆ ಕುಂಠಿತ ಭೀತಿ!

ಮಳೆಗಾಲವಾಗಿರುವುದರಿಂದ ದೇಶಾದ್ಯಂತ ಕಲ್ಲಿದ್ದಲು ಗಣಿಗಳು ಸ್ಥಗಿತಗೊಂಡಿವೆ. ಆದ್ದರಿಂದ ಕರ್ನಾಟಕದ ರಾಯಚೂರು (Raichur) ಮತ್ತು ಬಳ್ಳಾರಿ (Bellary) ಉಷ್ಣವಿದ್ಯುತ್‌ ಸ್ಥಾವರಕ್ಕೆ ಕಲ್ಲಿದ್ದಲು ಪೂರೈಕೆ ಕೊರತೆಯಾಗಿದೆ. ನಾನು ಮತ್ತು ಮುಖ್ಯಮಂತ್ರಿಗಳು ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದೇವೆ. ನಾನು ಬೆಳಗ್ಗೆ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಿದ್ದೆ. ರಾತ್ರಿಯೂ ಮಾತನಾಡುತ್ತೇನೆ. ಮುಖ್ಯಮಂತ್ರಿ ಬೊಮ್ಮಾಯಿ (Basavaraja Bommai) ದೆಹಲಿ (Delhi) ಪ್ರವಾಸದಲ್ಲಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದರು.

ಮಹಾರಾಷ್ಟ್ರ(Maharashtra) ಮತ್ತು ಒಡಿಶಾದಿಂದ (Odisha) ನಮಗೆ ಬರಬೇಕಾದ ಕಲ್ಲಿದ್ದಲು ನೀಡುವಂತೆ ಮನವಿ ಮಾಡಲಾಗಿದೆ. 4 - 5 ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ. ಜನರಿಗೆ ತೊಂದರೆಯಾಗದಂತೆ ನಿರ್ವಹಣೆ ಮಾಡಲಾಗುತ್ತದೆ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಕಲ್ಲಿದ್ದಲು ಕೊರತೆ

ದೇಶಾದ್ಯಂತ ಕಲ್ಲಿದ್ದಲಿಗೆ (Coal) ಅಭಾವ ಸೃಷ್ಟಿಯಾಗಿರುವ ಬೆನ್ನಲ್ಲೇ ರಾಜ್ಯದಲ್ಲೂ ಶಾಖೋತ್ಪನ್ನ ವಿದ್ಯುತ್‌ ಘಟಕಗಳಿಗೆ ಕಲ್ಲಿದ್ದಲಿನ ತೀವ್ರ ಕೊರತೆ ಉಂಟಾಗಿದೆ. ಪರಿಣಾಮ ವಿದ್ಯುತ್‌ ಉತ್ಪಾದನೆ (Electricity ) ಶೇ.70ರಷ್ಟುಕುಸಿದಿದ್ದು, ಕೊರತೆ ಇದೇ ರೀತಿ ಮುಂದುವರೆದರೆ ವಿದ್ಯುತ್‌ ಉತ್ಪಾದನೆ ಕಡಿಮೆಯಾಗಿ ರಾಜ್ಯದಲ್ಲಿ ವಿದ್ಯುತ್‌ ಕ್ಷಾಮ ಉಂಟಾಗುವ ಆತಂಕ ತಲೆದೋರಿದೆ.

ದೇಶದಲ್ಲಿ ಕಲ್ಲಿ​ದ್ದಲು ಕೊರತೆ: ವಿದ್ಯುತ್‌ ಉತ್ಪಾ​ದನೆ, ಪೂರೈಕೆ ಕುಂಠಿತ ಭೀತಿ!

ರಾಜ್ಯದಲ್ಲಿ ಒಟ್ಟು ವಿವಿಧ ಮೂಲಗಳಿಂದ ಗರಿಷ್ಠ 11,336 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯವಿದೆ. ಈ ಪೈಕಿ 5,000 ಮೆ.ವ್ಯಾ ವಿದ್ಯುತ್‌ ಅನ್ನು ರಾಯಚೂರು (Raichur), ಬಳ್ಳಾರಿ ಹಾಗೂ ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಘಟಕಗಳಿಂದಲೇ ಉತ್ಪಾದಿಸಬೇಕು. ಆದರೆ, ಈ ಮೂರು ಘಟಕಗಳಲ್ಲಿ ಕಲ್ಲಿದ್ದಲಿನ ತೀವ್ರ ಕೊರತೆ ಉಂಟಾಗಿದ್ದು, ವಿದ್ಯುತ್‌ ಉತ್ಪಾದನೆ ಒಟ್ಟು ಸಾಮರ್ಥ್ಯದ ಶೇ.33ಕ್ಕೆ ಕುಸಿದಿದೆ.

ದೇಶದಲ್ಲಿ ಕಲ್ಲಿ​ದ್ದಲು ಕೊರತೆ: ವಿದ್ಯುತ್‌ ಉತ್ಪಾ​ದನೆ, ಪೂರೈಕೆ ಕುಂಠಿತ ಭೀತಿ!

ರಾಜ್ಯದಲ್ಲಿ ನಿತ್ಯ ಪೂರೈಕೆಗೆ ಗರಿಷ್ಠ 8,499 ಮೆ.ವ್ಯಾ ವಿದ್ಯುತ್‌ ಬೇಕು. ಗುರುವಾರ 7923 ಮೆ.ವ್ಯಾ ವಿದ್ಯುತ್‌ ಸರಬರಾಜು ಮಾಡಲಾಗಿದೆ. ಈ ಪೈಕಿ ಎನ್‌ಇಸಿ (NEC) ಮೂಲಗಳಿಂದ 2,606 ಮೆ.ವ್ಯಾ, ಸಿಜಿಎಸ್‌ (ಸೆಂಟ್ರಲ್‌ ಜನರೇಟಿಂಗ್‌ ಸ್ಟೇಷನ್ಸ್‌) 1771 ಮೆ.ವ್ಯಾ ವಿದ್ಯುತ್‌ ಆಮದು ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿರುವ 11336 ಮೆ.ವ್ಯಾ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಘಟಕಗಳಿಂದ ಉತ್ಪಾದನೆಯಾಗಿರುವುದು 3546 ಮೆ.ವ್ಯಾ ಮಾತ್ರ.