ಶೀಘ್ರ 5800 ಹೊಸ ಬಸ್‌ ಖರೀದಿ, 9 ಸಾವಿರ ಹುದ್ದೆ ಭರ್ತಿ: ಸಚಿವ ರಾಮಲಿಂಗಾ ರೆಡ್ಡಿ

ಶೀಘ್ರದಲ್ಲೇ ನಾಲ್ಕು ನಿಗಮಗಳಿಗೆ 5800 ಹೊಸ ಬಸ್‌ ಖರೀದಿ ಹಾಗೂ 9 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
 

Soon 5800 new buses will be purchased 9000 posts will be filled Says Minister Ramalinga Reddy gvd

ಬೆಳಗಾವಿ (ಫೆ.19): ಶೀಘ್ರದಲ್ಲೇ ನಾಲ್ಕು ನಿಗಮಗಳಿಗೆ 5800 ಹೊಸ ಬಸ್‌ ಖರೀದಿ ಹಾಗೂ 9 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಭಾಗಕ್ಕೆ ಎಲೆಕ್ಟ್ರಿಕ್‌ ಬಸ್‌ ಬರದಿವುದು ಹಾಗೂ ಹಳೆಯ ಬಸ್‌ಗಳ ಬಿಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ನಾನು ಸಾರಿಗೆ ಸಚಿವರಾಗಿದ್ದ ಸಮಯದಲ್ಲಿ ಯಾವಾಗಲೂ ಹಳೆ ಬಸ್ ಬಿಟ್ಟಿಲ್ಲ. 

ನಾನು ಇಲ್ಲದೇ ಇರುವಾಗ ಬಸ್ ಅವಶ್ಯಕತೆ ಇದ್ದಿದ್ದಕ್ಕೆ ಹಳೇ ಬಸ್‌ ತಗೊಂಡಿದ್ದಾರೆ. ಇನ್ನೂ ಎಲೆಕ್ಟ್ರಿಕ್ ಬಸ್‌ಗಳ ಟೆಂಡರ್‌ ಕರೆದಿದ್ದೇವೆ. ಜಿಸಿಸಿ‌ ಅಡಿಯಲ್ಲಿ ಎಲೆಕ್ಟ್ರಿಕ್ ಬಸ್ ಓಡಲಿವೆ. ಬಸ್ ಹಾಗೂ ಚಾಲಕರು ಟೆಂಡರ್‌ ಪಡೆದುಕೊಂಡವರ ಕಡೆಯವರೇ ಇರುತ್ತಾರೆ. ಆದರೆ, ನಿರ್ವಾಹಕರು ಮಾತ್ರ ನಮ್ಮವರು ಇರುತ್ತಾರೆ. ಪ್ರತಿ ಕಿಮೀಗೆ ಇಷ್ಟು ಅಂತ ಹಣ ನಿಗದಿ ಮಾಡಿ ಎಲೆಕ್ಟ್ರಿಕ್ ಬಸ್ ಪ್ರಾರಂಭ ಆಗುತ್ತವೆ ಎಂದು ತಿಳಿಸಿದರು.

ರಸಗೊಬ್ಬರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿ ಹೊರಹೊಮ್ಮುತ್ತಿದೆ: ಭಗವಂತ ಖೂಬಾ

ಏಪ್ರಿಲ್‌ ಒಳಗೆ 5000 ಬಸ್‌: ಬಸ್‌ಗಳ ಸಂಖ್ಯೆ ಕಡಿಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಒಂದೇ ಒಂದು ಬಸ್‌ ಖರೀದಿಸಿಲ್ಲ. ಇದರಿಂದಾಗಿ ಬಸ್‌ಗಳ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣ. ಬಸ್‌ಗಳ ಸಂಖ್ಯೆ ಹೆಚ್ಚಾಗಬೇಕಿದೆ. ಆದ್ದರಿಂದ ಒಟ್ಟು 5800 ಬಸ್‌ಗಳನ್ನು ಖರೀದಿ ಮಾಡಲು ಯೋಜನೆ ರೂಪಿಸಿದ್ದೇವೆ. ಮಾರ್ಚ್‌ ಅಥವಾ ಏಪ್ರಿಲ್‌ ಒಳಗೆ 5000 ಬಸ್‌ಗಳು ಬರುತ್ತವೆ ಎಂದು ಮಾಹಿತಿ ನೀಡಿದರು

12000ಕ್ಕೂ ಅಧಿಕ ಸಿಬ್ಬಂದಿ ನಿವೃತ್ತಿ: ಇನ್ನು ಕಳೆದ ನಾಲ್ಕು ವರ್ಷದ ಅವಧಿಯಲ್ಲಿ 12000ಕ್ಕೂ ಅಧಿಕ ಚಾಲಕ ಮತ್ತು ನಿರ್ವಾಹಕರು ನಿವೃತ್ತಿಯಾಗಿದ್ದಾರೆ. ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಸಮಸ್ಯೆಯಾಗುತ್ತಿದೆ. ಸದ್ಯ 9000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ಕೊಟ್ಟಿದೆ. ಶೀಘ್ರವೇ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಭವಿಷ್ಯದಲ್ಲಿ ಬಡವರಿಗಾಗಿ ಮತ್ತಷ್ಟು ಗ್ಯಾರಂಟಿ ಯೋಜನೆ: ಸಚಿವ ಡಿ.ಸುಧಾಕರ್

ಹಂತ-ಹಂತವಾಗಿ ಭರವಸೆ ಈಡೇರಿಕೆ: ಚಾಲಕ-ನಿರ್ವಾಹಕರಿಗೆ ಸಮಾನ ವೇತನ ನೀಡುವ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಐದು ಗ್ಯಾರಂಟಿಗಳನ್ನು ಕಾರ್ಯಗತ ಮಾಡಿದ್ದೇವೆ. 75 ಭರವಸೆಗಳನ್ನು ಕೊಟ್ಟಿದ್ದೇವೆ. ಎಲ್ಲ ಭರವಸೆಗಳನ್ನು ಒಂದೇ ಬಜೆಟ್‌ನಲ್ಲಿ ಈಡೇಸಲು ಆಗಿಲ್ಲ. ಆದ್ಯತೆ ಮೇರೆಗೆ ಹಂತ ಹಂತವಾಗಿ ಎಲ್ಲ‌ವನ್ನು ಈಡೇರಿಸುತ್ತೇವೆ ಎಂದರು.

Latest Videos
Follow Us:
Download App:
  • android
  • ios