ಬೆಂಗಳೂರು,(ಮಾ.18): ಮಾರ್ಚ್​ 21 ರಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ ಪ್ರಾರಂಭವಾಗಲಿದೆ.  ಈ ಹಿನ್ನೆಲೆಯಲ್ಲಿ ಪರೀಕ್ಷಾ ಸಿದ್ಧತೆಗಳ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಾಫರ್ ಹಾಗೂ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕಿ ವಿ‌ ಸುಮಂಗಲಾ‌ ಸುದ್ದಿಗೋಷ್ಠಿಯಲ್ಲಿ ಸಮಗ್ರ ಮಾಹಿತಿ ನೀಡಿದರು.

ಮಾರ್ಚ್​ 21 ರಿಂದ ಏಪ್ರಿಲ್​ 4 ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದೆ. ಒಟ್ಟು 8,41,666 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ನೋಂದಾಯಿತರಾಗಿರುತ್ತಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

 2,847 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. 4,651 ವಿಕಲ ಚೇತನ‌ ಮಕ್ಕಳು ನೋಂದಾವಣಿ ಆಗಿದ್ದಾರೆ. 1451 ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಗೆ ಭಾಷಾ ವಿನಾಯತಿ ನೀಡಲಾಗಿದೆ. 

480 ಅರ್ಹ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಬದಲಾಗಿ ಪರ್ಯಾಯಾ ವಿಷಯ ಬರೆಯುವ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಹಾಜರಾತಿ ಕೊರತೆಯಿಂದಾಗಿ 10,572 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಅವಕಾಶ ಇಲ್ಲ. 2,847 ಪರೀಕ್ಷಾ ಕೇಂದ್ರಗಳಿದ್ದು, ಅವುಗಳಲ್ಲೂ 1,057 ಕ್ಲಸ್ಟರ್ ಸಹಿತ ಹಾಗೂ 1698 ಕ್ಲಸ್ಟರ್ ಕೇಂದ್ರಗಳಿದ್ದು, ಖಾಸಗಿ ಅಭ್ಯರ್ಥಿಗಳಿಗಾಗಿ ಜಿಲ್ಲಾ‌ ಕೇಂದ್ರಗಳಲ್ಲಿ 92 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 

ಏಪ್ರಿಲ್ 10 ರಿಂದ ಮೌಲ್ಯ ‌ಮಾಪನ‌ ಆರಂಭವಾಗಲಿದ್ದು, 34 ಶೈಕ್ಷಣಿಕ ಜಿಲ್ಲೆಗಳ 230 ಮೌಲ್ಯ ‌ಮಾಪನ‌ ಕೇಂದ್ರದಲ್ಲಿ ಮೌಲ್ಯ ಮಾಪನ ನಡೆಯಲಿದೆ ಎಂದರು.

46 ಸೂಕ್ಷ್ಮ ಹಾಗೂ 7 ಅತಿಸೂಕ್ಷ್ಮ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸ್ಥಾನಿಕ ಜಾಗೃತ ದಳ ಒಳಗೊಂಡಂತೆ ತಾಲೂಕು ಜಿಲ್ಲಾ ಹಂತಗಳಲ್ಲಿ ವಿಚಕ್ಷಣ ದಳ ಕಾರ್ಯ ನಿರ್ವಹಿಸಲಿದೆ. 

ಜಿಲ್ಲಾ ಡಯಟ್ ಪ್ರಾಶುಂಪಾಲರನ್ನು ಆಯಾ ಜಿಲ್ಲೆ‌ ಪರೀಕ್ಷಾ ಕಾರ್ಯದ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ಸ್ಮಾರ್ಟ್ ವಾಚ್, ‌ಮೊಬೈಲ್ ಫೋನ್ ನಿಷೇಧ ಮಾಡಲಾಗಿದೆ.

200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶ ಎಂದು ಜೆರಾಕ್ಸ್ ಅಂಗಡಿಯನ್ನು ಮುಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.