ಮಾಜಿ ಸಿಎಂ ಸಿದ್ದರಾಮಯ್ಯನವರ ಸಹೋದರ ರಾಮೇಗೌಡ ನಿಧನ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಸಹೋದರ ರಾಮೇಗೌಡ ವಿಧಿವಶರಾಗಿದ್ದಾರೆ.ಅನಾರೋಗ್ಯದಿಂದ ಬಳಲುತ್ತಿದ್ದ ರಾಮೇಗೌಡ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Siddaramaiah Brother ramegowda Passes Away In Mysuru rbj

ಮೈಸೂರು, (ಆಗಸ್ಟ್.26): ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಸಹೋದರ ರಾಮೇಗೌಡ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ರಾಮೇಗೌಡ (64) ಅವರು ಇಂದು(ಆಗಸ್ಟ್.26) ರಾತ್ರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.  ರಾಮೇಗೌಡ ಅವರು ಸಿದ್ದರಾಮಯ್ಯನವರ ಕೊನೆಯ ತಮ್ಮನಾಗಿದ್ದರು. ಸಿದ್ದರಾಮೋತ್ಸವಕ್ಕ ನೀವು ಹೋಗುವುದಿಲ್ವಾ ಎಂದು ರಾಮೇಗೌಡ ಅವರನ್ನ ಮಾಧ್ಯಮಗಳು ಪ್ರಶ್ನಿಸಿದ್ದವು. ಆಗ . ನನಗೆ ಹುಷಾರಿಲ್ಲ. ಸಕ್ಕರೆ ಕಾಯಿಲೆಯಿಂದ ಕಾಲು ಗಾಯವಾಗಿದೆ ಎಂದು ಹೇಳಿದ್ದರು.

ಇನ್ನಷ್ಟು ಬೇರೆ-ಬೇರೆ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಮ್ಮ ಸ್ವಂತ ಅಣ್ಣ ಅಂದ್ರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೂ ಸಹ ಸಹೋದರ ರಾಮೇಗೌಡ ಅವರು ಸಿದ್ದರಾಮನಹುಂಡಿಯಲ್ಲಿ ಒಕ್ಕಲತನ ಮಾಡಿಕೊಂಡಿದ್ದರು. ಇನ್ನು ಸಿದ್ದರಾಮಯ್ಯನವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರೂ ಸಹ ತಮ್ಮ ಕುಟುಂಬವನ್ನು ರಾಜಕೀಯಕ್ಕೆ ಕರೆತಂದಿಲ್ಲ. ಅಲ್ಲದೇ ರಾಜ್ಯಕ್ಕೆ ಯಾವತ್ತೂ ಪರಿಚಯ ಮಾಡಿಕೊಟ್ಟಿಲ್ಲ. ತಮ್ಮ ಹೆಂಡತಿಯನ್ನು ಸಹ ಯಾವ ಕಾರ್ಯಕ್ರಮಕ್ಕೂ ಕರೆದುಕೊಡು ಬಂದವರಲ್ಲ.

ಪುತ್ರರಾದ ಯತೀಂದ್ರ ಹಾಗೂ ದಿವಂಗತ ರಾಕೇಶ್ ಬಿಟ್ಟರೆ ಸಿದ್ದರಾಮಯ್ಯನವರ ಕುಟುಂಬಸ್ಥರು ಬಹಿರಂಗವಾಗಿ ಎಲ್ಲಿ ಕಾಣಿಸಿಕೊಂಡಿಲ್ಲ.. ಯಾವುದಕ್ಕೂ ಸುದ್ದಿಯಾಗಿಲ್ಲ. ಹೀಗಾಗಿ ಸಿದ್ದರಾಮಯ್ಯನವರ ಕುಟುಂಬ ಅಷ್ಟಾಗಿ ಯಾರಿಗೂ ಪರಿಚಯ ಇಲ್ಲ. 

ಅಣ್ಣನ ಜನ್ಮದಿನಂದು ಖುಷಿಪಟ್ಟಿದ್ದ ರಾಮೇಗೌಡ
ಜನರು ಸೇರಿಕೊಂಡು ಹುಟ್ಟಿದಹಬ್ಬ ಮಾಡುತ್ತಿದ್ದಾರೆ. ನಂಗೇನೂ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಒಡಹುಟ್ಟಿದ ತಮ್ಮ ರಾಮೇಗೌಡ ಹೇಳಿದ್ದರು.

ನಮ್ಮಣ್ಣ ಯಾವತ್ತೂ ಹುಟ್ಟಹಬ್ಬ ಆಚರಿಸಿಕೊಂಡವರಲ್ಲ. ಹುಟ್ಟುಹಬ್ಬ ಅನ್ನುವುದು ನಮಗೆ ಗೊತ್ತೂ ಇಲ್ಲ. ಈಗ ಜನ ಸೇರಿಕೊಂಡು ಹುಟ್ಟಿದಹಬ್ಬ ಮಾಡುತ್ತಿದ್ದಾರೆ. ಅದರ ಬಗ್ಗೆ ನಮಗೆ ಅಷ್ಟೇನೂ ಗೊತ್ತಿಲ್ಲ. ನನಗೆ ಹುಷಾರಿಲ್ಲ. ಸಕ್ಕರೆ ಕಾಯಿಲೆಯಿಂದ ಕಾಲು ಗಾಯವಾಗಿದೆ. ಇಲ್ಲವಾಗಿದ್ದರೆ ನಾನೂ ಅಲ್ಲಿಗೆ ಹೋಗುತ್ತಿದ್ದೆ ಎಂದಿದ್ದರು.

ಮುಖ್ಯಮಂತ್ರಿ ಆಗಿದ್ದಾಗಲೂ ಹುಟ್ಟುಹಬ್ಬ ಆಚರಿಸಿಲ್ಲ. ಮುಂದೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಲಿ. ಅವನು ನಮ್ಮಣ್ಣ ಅಲ್ವಾ? ಅವನೇ ಮುಖ್ಯಮಂತ್ರಿ ಆಗ್ಬೇಕು. ಏನಾಗುತ್ತೋ ನೋಡೋಣ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Latest Videos
Follow Us:
Download App:
  • android
  • ios