ತುಮಕೂರು : ‘ನಡೆದಾಡುವ ದೇವರು’ ಸಿದ್ಧಗಂಗೆಯ ಡಾ. ಶಿವಕುಮಾರ ಶ್ರೀಗಳ ಆರೋಗ್ಯದಲ್ಲಿ ಗುರುವಾರ ರಾತ್ರಿ ದಿಢೀರ್ ಚೇತರಿಕೆ ಕಂಡು ಬಂದಿದ್ದು, ಭಕ್ತರು ಹಾಗೂ ವೈದ್ಯರಲ್ಲಿ ಹೊಸ ಭರವಸೆ ಮೂಡಿಸಿದೆ. 

 ಪೂಜೆ ಮುಗಿಸಿ ಹಳೇ ಮಠದಿಂದ ಕಿರಿಯ ಶ್ರೀಗಳು ಹೊರಬರುವಾಗ ಲವಲವಿಕೆ ಕಂಡು ಬಂದಿದೆ.  ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಾಣಿಸಿದೆ. ಕಿರಿಯ ಶ್ರೀಗಳ ಸಹಾಯದಿಂದ ಸ್ವಾಮೀಜಿ ಇಷ್ಟಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ. 

ಐಸಿಯು ಕೊಠಡಿಯಲ್ಲಿಯೇ  ಶಿವಕುಮಾರ ಸ್ವಾಮೀಜಿ ಇಷ್ಟಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ. 

ಶ್ರೀಗಳ ದೇಹದಲ್ಲಿ ಪ್ರೋಟಿನ್  ಅಂಶದಲ್ಲಿ ಏರಿಕೆ ಕಂಡು ಬಂದಿದೆ. ಅಲ್ಲದೇ ಶುಕ್ರವಾರ ಮುಂಜಾನೆ ದ್ರವರೂಪದಲ್ಲಿ ಇಡ್ಲಿ ಸೇವನೆ ಮಾಡಿದ್ದಾರೆ.