ಅಮೆರಿಕಾ ರಾಜಕೀಯದಲ್ಲಿ ಕನ್ನಡಿಗನ ಛಾಪು: ಬೆಳಗಾವಿಯ ಶ್ರೀನಿವಾಸ 2ನೇ ಬಾರಿ ಸಂಸತ್ತಿಗೆ ಆಯ್ಕೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮೂಲದ ಶ್ರೀನಿವಾಸ ಥಾಣೇದಾರ ಅಮೆರಿಕದ ಸಂಸತ್ತಿಗೆ ಎರಡನೇ ಬಾರಿಗೆ ಚುನಾಯಿತಗೊಂಡಿದ್ದಾರೆ. ಕಮಲಾ ಹ್ಯಾರೀಸ್‌ ನೇತೃತ್ವದ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮಿಚಿಗನ್‌ ಕ್ಷೇತ್ರದಿಂದ ಚುನಾಯಿತಗೊಂಡು ಬೆಳಗಾವಿ ಕೀರ್ತಿ ಪತಾಕೆ ಹಾರಿಸಿದ್ದಾರೆ. 
 

Shrinivas Thanedar Who Belongs To Belagavi Karnataka Won in US Election gvd

ಬೆಳಗಾವಿ (ನ.09): ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮೂಲದ ಶ್ರೀನಿವಾಸ ಥಾಣೇದಾರ ಅಮೆರಿಕದ ಸಂಸತ್ತಿಗೆ ಎರಡನೇ ಬಾರಿಗೆ ಚುನಾಯಿತಗೊಂಡಿದ್ದಾರೆ. ಕಮಲಾ ಹ್ಯಾರೀಸ್‌ ನೇತೃತ್ವದ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮಿಚಿಗನ್‌ ಕ್ಷೇತ್ರದಿಂದ ಚುನಾಯಿತಗೊಂಡು ಬೆಳಗಾವಿ ಕೀರ್ತಿ ಪತಾಕೆ ಹಾರಿಸಿದ್ದಾರೆ. ಹಲವಾರು ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿರುವ ಅವರು, 2020 ಹಾಗೂ 2024ರಲ್ಲಿ ಅಮೆರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 

ತಮ್ಮ ಗೆಲುವಿಗೆ ಕಾರಣರಾದ ಮತದಾರರಿಗೆ ತಮ್ಮ ಫೇಸ್ಬುಕ್‌ ಖಾತೆ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಬೆಳಗಾವಿಯ ಸರ್ಕಾರಿ ಚಿಂತಾಮಣರಾವ್‌ ಶಾಲೆ ಮತ್ತು ಪಿಯುಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಥಾಣೇದಾರ ಅವರು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಪದವಿ ಮುಗಿಸಿದ್ದಾರೆ. ಮುಂಬೈ ವಿವಿಯಲ್ಲಿ ರಸಾಯನ ಶಾಸ್ತ್ರ ವಿಷಯದಲ್ಲಿ ಎಂಎಸ್‌ಸಿ ವ್ಯಾಸಂಗ ಮಾಡಿದ್ದಾರೆ. ಬೆಳಗಾವಿಯ ಮೀರಾಪುರ ಗಲ್ಲಿಯಲ್ಲೇ ತಮ್ಮ ಬಾಲ್ಯ ಕಳೆದಿದ್ದಾರೆ.

ಕ್ರೈಂ ವೇಳೆ ಪತಿ ಜತೆ ಇದ್ದಾಕ್ಷಣ ಪತ್ನಿ ಆರೋಪಿ ಅಲ್ಲ: ಹೈಕೋರ್ಟ್ ಸ್ಪಷ್ಟನೆ

ಉನ್ನತ ವ್ಯಸಾಂಗಕ್ಕೆ 1979ರಲ್ಲಿ ಅಮೆರಿಕಕ್ಕೆ ತೆರಳಿ ಪಾಲಿಮರ್ ಕೆಮಿಸ್ಟ್ರಿ ವಿಷಯದಲ್ಲಿ ಪಿಎಚ್‌ಡಿ ಪಡೆದಿರುವ ಅವರು ಅಮೇರಿಕದ ಮಿಚಿಗನ್ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿ ಉದ್ಯಮಿಯಾದ ಥಾಣೇಧಾರ್ ಈಗ ಅಮೇರಿಕ ಸಂಸತ್ ಪ್ರತಿನಿಧಿಯಾಗಿದ್ದಾರೆ. ಜೊತೆಗೆ ವಿಜ್ಞಾನಿ, ಉದ್ಯಮಿ ಮತ್ತು ಇಂಗ್ಲಿಷ್‌ ಸಾಹಿತಿಯೂ ಆಗಿದ್ದಾರೆ.

Latest Videos
Follow Us:
Download App:
  • android
  • ios