ಚೆನ್ನೈ[ಡಿ.08]: ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಸಿದ್ಧಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡಲು ಕರೆದೊಯ್ಯಲಾಗಿದೆ. ಶುಕ್ರವಾರ ರಾತ್ರಿ ಶ್ರೀಗಳು ಪ್ರಸಾದ ಸ್ವೀಕರಿಸಿ ಆಸ್ಪತ್ರೆಯಲ್ಲೇ ವಾಕ್ ಮಾಡಿದ್ದಾರೆನ್ನಲಾಗಿದೆ. ಶನಿವಾರ ಬೆಳಗ್ಗೆ ಶ್ರೀಗಳನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಗಿದ್ದು, ವೈದ್ಯರು ತಪಾಸಣೆ ನಡೆಸಿ ಆಪರೇಷನ್ ಮಾಡಬೇಕೋ ಇಲ್ಲವೋ ಎಂಬುದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಸಾಧ್ಯತೆಗಳು ಹೆಚ್ಚು ಎನ್ನಲಾಗಿದೆ.

ಸಿದ್ದಗಂಗಾ ಶ್ರೀಗಗಳಿಗೆ ಎದುರಾದ ಆರೋಗ್ಯದ ಸಮಸ್ಯೆ ಏನು?

ಮೇದೋಜ್ಜೀರಕ ಗ್ರಂಥಿಯಿಂದ ಪಿತ್ತಕೋಶಕ್ಕೆ ಹೋಗಬೇಕಾದ ನೀರಿನ ಅಂಶ ಸರಾಗವಾಗಿ ಹೋಗುತ್ತಿರಲಿಲ್ಲ. ಸರಾಗವಾಗಿ ಹೋಗಲು 11 ಸ್ಟೆಂಟ್ ಗಳನ್ನು ಅಳವಡಿಸಲಾಗಿದೆ. ಇಷ್ಟಾದರೂ ಮೇದೋಜ್ಜೀರಕ ಗ್ರಂಥಿಯಿಂದ ಹೋಗುತ್ತಿದ್ದ ನೀರಿನ ಅಂಶ ಗಟ್ಟಿಯಾಗಿ ನಿಲ್ಲುತ್ತಿತ್ತು. ಪರಿಣಾಮವಾಗಿ ಆ ಭಾಗದಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಈಗ ಇದನ್ನು ಸರಿಪಡಿಸಲು ಬೈಪಾಸ್ ಸರ್ಜರಿ ಅಗತ್ಯವಿದೆ.

ಆಪರೇಷನ್ ಮಾಡುವಾಗ ಶ್ರೀಗಳಿಗೆ ಕನಿಷ್ಟ 3 ಗಂಟೆ ಅನೆಸ್ತೇಷಿಯ ನೀಡಬೇಕು. ಅಷ್ಟು ಅವಧಿ ದೇಹ ತಡೆಯುತ್ತದೆಯೇ ಎಂಬುವುದೇ ಸದ್ಯಕ್ಕಿರುವ ಬಹುದೊಡ್ಡ ಪ್ರಶ್ನೆಯಾಗಿದೆ.  ಹೀಗಾಗಿ ಸಿಂಗಾಪುರ ಮುಂತಾದ ದೇಶಗಳ ವೈದ್ಯರೊಂದಿಗೆ ಚೆನ್ನೈ ವೈದ್ಯರು ಟೆಲಿಕಾನ್ಫರೆನ್ಸ್ ನಡೆಸುವ ಸಾಧ್ಯತೆ ಇದೆ.