ಶಿವಮೊಗ್ಗದ ಅಪ್ಪ-ಮಗ ಸೇರಿ ಮೋಸ ಮಾಡಿಬಿಟ್ರು ಅಂತ, ಬಿಜೆಪಿ ವಿರುದ್ಧ ಸಿಡಿದೆದ್ದ ಕೆ.ಎಸ್. ಈಶ್ವರಪ್ಪ!

ಲೋಕಸಭಾ ಚುನಾವಣೆಗೆ ನಿನ್ನ ಮಗನಿಗೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿದ್ದ ಯಡಿಯೂರಪ್ಪ ಸೇರಿ ಅಪ್ಪ-ಮಗ ನನಗೆ ಮೋಸ ಮಾಡಿಬಿಟ್ಟರು ಎಂದು ಕೆ.ಎಸ್. ಈಶ್ವರಪ್ಪ ಅಳಲು ತೋಡಿಕೊಂಡರು..

Shivamogga KS Eshwarappa burst out against BS Yediyurappa and BY Vijayendra sat

ಬೆಂಗಳೂರು/ಶಿವಮೊಗ್ಗ (ಮಾ.14): ಲೋಕಸಭಾ ಚುನಾವಣೆಯಲ್ಲಿ ನಿನ್ನ ಮಗನಿಗೆ ಟಿಕೆಟ್ ಕೊಡುಸ್ತೀನಿ ಅಂತ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದರು. ಆದರೆ, ಈಗ ಅಪ್ಪ-ಮಗ ಸೇರಿಕೊಂಡು ನನ್ನ ಮಗನಿಗೆ ಮೋಸ ಮಾಡಿಬಿಟ್ಟರು. ನಾನು ನಾಳೆ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆಯನ್ನು ಕರೆದಿದ್ದು, ಅಲ್ಲಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬಿಜೆಪಿಗೆ ಸವಾಲೆಸೆಸಿದ್ದಾರೆ.  

ಕರ್ನಾಟಕದ 20 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಘೋಷಣೆ ಬೆನ್ನಲ್ಲಿಯೇ ಬೆಂಗಳೂರಿಗೆ ಆಗಮಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಕಿಡಿಕಾರಿದ್ದಾರೆ. ನಿನ್ನ ಮಗನಿಗೆ ನಾನು ಟಿಕೆಟ್ ಕೊಡಸ್ತಿನಿ ಅಂತ ಯಡಿಯೂರಪ್ಪ ಹೇಳಿದ್ದರು. ಆದರೆ, ಈಗ ಅಪ್ಪ- ಮಗ ಸೇರಿಕೊಂಡು ನನಗೆ ಹಾಗೂ ನನ್ನ ಮಗನಿಗೆ ಮೋಸ ಮಾಡಿದ್ದಾರೆ. ಈಗಾಗಲೇ ಹಾವೇರಿ ಕ್ಷೇತ್ರದಲ್ಲಿ ನನ್ನ ಮಗ ವರ್ಷಗಟ್ಟಲೇ ಓಡಾಟ ನಡೆಸಿದ್ದನು. ಆದರೀಗ ಲೋಕಸಭಾ ಚುನಾವಣೆ ಟಿಕೆಟ್ ಕೈತಪ್ಪುತ್ತಿದ್ದಂತೆ ಯಡಿಯೂರಪ್ಪ  ನನ್ನ ಮಗನನ್ನ ಎಂಎಲ್ ಸಿ ಮಾಡ್ತಿನಿ ಅಂತ ಹೇಳ್ತಾ ಇದಾರೆ. ಯಡಿಯೂರಪ್ಪ ಅವರನ್ನ ಹೇಗೆ ನಂಬಬೇಕು? ಸಂಘಟನೆ ವಿರುದ್ಧ ಹೋದವನು ನಾನು ಅಲ್ಲ ಎಂದು ಅಳಲು ತೋಡಿಕೊಂಡರು. 

ಮಾತುಗಾರರಿಗೆ ಮಣೆ ಹಾಕದ ಬಿಜೆಪಿ : ನಾಲಿಗೆ ಹರಿಬಿಟ್ಟವರಿಗೆ ಟಿಕೆಟ್ ಕಟ್ ಮಾಡಿತಾ ಹೈಕಮಾಂಡ್!

ರಾಜ್ಯದಲ್ಲಿ ರಾಯಣ್ಣ ಬ್ರಿಗೇಡ್ ‌ಮಾಡಿದ್ವಿ. ಆ ಮೂಲಕ ಲಕ್ಷಾಂತರ ಜನರನ್ನು ಸಂಘಟನೆ ‌ಮಾಡಿದ್ದೆನು. ಉಡುಪಿ-ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಚಳುವಳಿ ಮಾಡಿದರು. ಆಗ ಶೋಭಾ ಪರವಾಗಿ ಟಿಕೆಟ್ ಕೊಡಿಸಲು ಯಡಿಯೂರಪ್ಪ ಬ್ಯಾಟಿಂಗ್ ‌ಮಾಡ್ತಾರೆ. ಆದರೆ, ನನ್ನ ಮಗನಿಗೆ ಟಿಕೆಟ್ ‌ಕೊಡಿಸಲು ಇವರು ‌ಯಾಕೆ ಮಾತನಾಡೋದಿಲ್ಲ. ಇನ್ನು ಬೊಮ್ಮಾಯಿ ಬಗ್ಗೆ ‌ನಾನು‌ ಮಾತನಾಡೋದಿಲ್ಲ. ರಾಜ್ಯದ ದೊಡ್ಡ ಸಂಘಟನೆಯು ಅಪ್ಪ- ಮಕ್ಕಳ ಕೈಯಲ್ಲಿದೆ. ರಾಜ್ಯದಲ್ಲಿ ಸಾಕಷ್ಟು ಜನರಿಗೆ ಅಪ್ಪ ಮಕ್ಕಳು ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾವೇಶಕ್ಕೆ ಬಂದವರಿಗೆ ₹200 ಗ್ಯಾರಂಟಿ! ಕಾರ್ಯಕ್ರಮ ಮುಗಿದ ಬಳಿಕ ಹಣಕ್ಕಾಗಿ ಬಿಸಲಲ್ಲಿ ಕಾದು ಸುಸ್ತಾದ ಮಹಿಳೆಯರು!

ಇನ್ನುಮುಂದೆ ಟಿಕೆಟ್‌ಗಾಗಿ ನಾನು ಯಾರನ್ನು ಭೇಟಿ ಮಾಡೋದಿಲ್ಲ. ನನ್ನ ಜನ ಏನು ತೀರ್ಮಾನ ‌ಕೋಡ್ತಾರೆ ಅದಕ್ಕೆ ಬದ್ದನಾಗಿರುತ್ತೇನೆ. ನಾಳೆ ನನ್ನ (ಶಿವಮೊಗ್ಗ ವಿಧಾನಸಭೆ) ಕ್ಷೇತ್ರದಲ್ಲಿ ಕಾರ್ಯಕರ್ತರನ್ನ ಭೇಟಿ ಮಾಡುತ್ತಿದ್ದೇನೆ. ನಾಳಿನ ಸಭೆಯಲ್ಲಿ ‌ಅವರೊಂದಿಗೆ ಚರ್ಚೆ ಮಾಡಿದ ನಂತರ ಮುಂದಿನ ತೀರ್ಮಾನ ತಿಳಿಸುತ್ತೇನೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಬಿಜೆಪಿಗೆ ಸೆಡ್ಡು ಹೊಡೆದು ಬೆಂಗಳೂರಿನಿಂದ ಶಿವಮೊಗ್ಗದತ್ತ ಪ್ರಯಾಣ ಬೆಳೆಸಿದರು.

Latest Videos
Follow Us:
Download App:
  • android
  • ios